February 22, 2026

ಗ್ರಾಮಸ್ಥರಿಂದ ಸೇವಾ,ಭಕ್ತಿ ಸಮರ್ಪಣೆ

ಕುಕನೂರು ತಾಲೂಕಿನ ಮಂಡಲಗಿರಿ ಗ್ರಾಮದ ಸಮಸ್ತ ಸದ್ಭಕ್ತರಿಂದ ಕೊಪ್ಪಳ ನಗರದಲ್ಲಿರುವ ಸಂಸ್ಥಾನ ಶ್ರೀ ಗವಿಮಠಕ್ಕೆ ಶುಕ್ರವಾರ ಸೇವಾ ಭಕ್ತಿ ಸಮರ್ಪಣೆ ಮಾಡಲಾಯಿತು.
         

ಮಂಡಲಗಿರಿ ಗ್ರಾಮದಿಂದ ಶುಕ್ರವಾರ ಬೆಳಗ್ಗೆ ಗ್ರಾಮಸ್ಥರೆಲ್ಲರೂ ಸೇರಿ ವಿಜೃಂಭಣೆಯಿಂದ ಗ್ರಾಮದಲ್ಲಿ ತಯಾರಿಸಿದ್ದ 10 ಕ್ವಿಂಟಲ್ ಸಿಹಿ ಬೇಸನ್ ಉಂಡೆ, 6,000ಕ್ಕೂ ಹೆಚ್ಚು ಜೋಳದ ರೊಟ್ಟಿ, ಇತರೆ ದವಸ ಧಾನ್ಯಗಳೊಂದಿಗೆ ಗ್ರಾಮದಿಂದ 12 ಟ್ರ್ಯಾಕ್ಟರ್ ಹಾಗೂ ಇನ್ನಿತರ ವಾಹನಗಳೊಂದಿಗೆ ಗ್ರಾಮಸ್ಥರು ಕರಡಿಮಜಲು ಬಾಜ ಬಜಂತ್ರಿ ಒಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡುತ್ತ ಕೊಪ್ಪಳ ನಗರಕ್ಕೆ ತೆರಳಿ ಶ್ರೀಮಠಕ್ಕೆ ಭಕ್ತಿ ಸಮರ್ಪಣೆ ಮಾಡುವುದರೊಂದಿಗೆ ಕೊಪ್ಪಳ ಜಾತ್ರೆಯಲ್ಲಿ ದೊರಕುತ್ತಿರುವ ಮಹಾದಾಸೋಹದಲ್ಲಿ ಸೇವೆ ಸಲ್ಲಿಸುವುದರೊಂದಿಗೆ ಶ್ರೀ ಗವಿಮಠದ ಗವಿಸಿದ್ದೇಶ್ವರನ ಕೃಪೆಗೆ ಪಾತ್ರರಾದರು.

ಗ್ರಾಮದ ಸರ್ವ ಸದ್ಭಕ್ತರು ಸೇರಿಕೊಂಡು ಯಾವುದೇ ಜಾತಿ ಭೇದಭಾವಗಳಿಲ್ಲದೆ ಸಂಗ್ರಹಣೆ ಮಾಡಿದ್ದ ದವಸಧಾನ್ಯ ಹಾಗೂ ಸಿಹಿ ಪದಾರ್ಥದೊಂದಿಗೆ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ನೀಡಿದ್ದ ಧನ ರೂಪವನ್ನು ಸಹ ಶ್ರೀಮಠಕ್ಕೆ ಈ ವೇಳೆಯಲ್ಲಿ ಸಮರ್ಪಿಸಲಾಯಿತು

ವರದಿಗಾರ = ಮಲ್ಲಯ್ಯ ಗದಗಿನ ಕುಕನೂರು

About The Author