ತಾಲೂಕಿನ ಕುಕನೂರು ವ್ಯಾಪ್ತಿಯ ಭಾನಾಪುರ ಗ್ರಾಮದ ಬಳಿ ಎರಡು ಬೈಕ್ ಗಳ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.

ಈ ಘಟನೆ ಪರಿಣಾಮ ಕೊಪ್ಪಳ ತಾಲೂಕಿನ ಹ್ಯಾಟಿ ಮುಂಡರಗಿ ಗ್ರಾಮದ ಮಾರುತಿ ಶಿವಪ್ಪನವರ (50ವರ್ಷ) ಭಾನಾಪುರ ಗ್ರಾಮದ ಶ್ರೀಶೈಲ್ ಹಿರೇಮಠ (30 ವರ್ಷ), ಮೃತರು ಎಂದು ಗುರುತಿಸಲಾಗಿದೆ.

* ಅಪಘಾತದ ವಿವರ
ಮೃತ ಶ್ರೀಶೈಲ್ ಎಂಬಾತ ಭಾನಾಪುರನಿಂದ ಕಾವೇರಿ ಪೆಟ್ರೋಲ್ ಬಂಕ್ ಕಡೆಗೆ ರಾಂಗ್ ರಸ್ತೆಯಲ್ಲಿ ಬರುತ್ತಿದ್ದರು ಅದೇ ರೀತಿ ಮಾರುತಿ ಶಿವಪ್ಪನವರ ಎಂಬಾತ ಕೊಪ್ಪಳದ ಕಡೆಯಿಂದ ಕುಕನೂರು ಕಡೆಗೆ ಬರುತ್ತಿದ್ದ, ಎನ್ನಲಾಗಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನುಳಿದ ಹಿಂಬದಿ ಸವಾರರು ಗಂಭೀರ ಗಾಯಗೊಳದಲ್ಲಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತದ ವಿವರ

ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಇನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರು ಸ್ಥಳಕ್ಕೆ ದಾವಿಸಿ ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.
More Stories
ವಿದ್ಯಾ ಭಾರತಿ ಮಹಿಳಾ ಮಹಾವಿದ್ಯಾಲಯದಲ್ಲಿ ದಶಮಾನೋತ್ಸವ ಸಂಭ್ರಮಾಚರಣೆ
ಅವಕೃಪೆಗೊಳಗಾದ ಐತಿಹಾಸಿಕ ದೇವಸ್ಥಾನ ಹಾಗೂ ಸುತ್ತಲಿನ ಪರಿಸರ
ಕಾನಿಪ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ