February 22, 2026

ರಸ್ತೆಗಳೆಲ್ಲ ಚರಂಡಿಗಳಾಗಿ ನಿರ್ಮಾಣ

ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿ ಬರುವಂಥ ಬೂದಗುಂಪಾ ಗ್ರಾಮದ ರಸ್ತೆಗಳನ್ನು ನೋಡಿದರೆ ಇದೇನು ರಸ್ತೆಯೋ ಕೊಳಚೆ ನೀರು ಹರಿಯುವ ಚರಂಡಿಯೋ ತಿಳಿಯದಂತಾಗಿದೆ

ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಈ ಕುರಿತು ಗಮನಕ್ಕೆ ತಂದರೂ ಕೂಡ ಕೇಳಿಸಿಕೊಳ್ಳುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ

ಗ್ರಾಮದ ರಸ್ತೆ ಮೇಲೆಲ್ಲ ಚರಂಡಿ ನೀರು ಹರಿಯುತ್ತಿದ್ದು, ಗ್ರಾಮಸ್ಥರು ಅದನ್ನು ದಾಟಿಕೊಂಡು ಇಲ್ಲವೆ ಅದರಲ್ಲಿ ಮೂಗು ಮುಚ್ಚಿಕೊಂಡೇ ಹೋಗುವಂತಾಗಿದೆ

ಅದಲ್ಲದೆ  ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ದಟ್ಟವಾಗಿದೆ

ಈ ಕುರಿತು ಸಂಬಂಸಿದವರಿಗೆ ದೂರು ನೀಡಿದರೂ ಯಾವುದೇ ಪರಿಹಾರ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ

ಬೂದುಗುಂಪ ಗಾಮದ ರಸ್ತೆಯ ಮೇಲೆ ಹರಿಯುತ್ತಿರುವ
ಚರಂಡಿ ನೀರು ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೆ?

ಕಳೆದೆರಡು ವರ್ಷಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಪಿಡಿಓ ಆಗಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮೀದೇವಿ ಛಲವಾದಿ ಅವರ ಗಮನಕ್ಕೆ ತಂದರೂ ಯಾವುದೇ ಪರಿಹಾರ ಕ್ರಮಕೈಗೊಂಡಿಲ್ಲ. ಮಾತ್ರವಲ್ಲ ಇದೀಗ ಅನಾರೋಗ್ಯದಿಂದಾಗಿ ರಜೆ ಮೇಲೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇನ್‌ಚಾರ್ಚ್ ಪಿಡಿಓ ಅಗಿ ಸೇವೆ ಸಲ್ಲಿಸುತ್ತಿರುವ ಗುರುಸಿದ್ದಪ್ಪ ಚಲವಾದಿ ಅವರು ಈ ಕುರಿತು ಕಂಡು ಕಾಣದಂತಾಗಿರುವುದನ್ನ  ನೋಡಿದರೆ ಆಡಳಿತ ಯಂತ್ರಕ್ಕೆ ತುಕ್ಕು  ಹಿಡಿದಿದೆಯೇ ಎಂಬ ಅನುಮಾನ ಮೂಡಿಸುವಂತಾಗಿದೆ.

ಸಾಂಕ್ರಾಮಿಕ ರೋಗ ಉದ್ಭವೊಗೊಳ್ಳುವ ಮೊದಲೆ ಸಂಬಂಧಿಸಿದಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗ್ರಾಮದ ರಸ್ತೆಯ ಮೇಲೆ ಹರಿಯುತ್ತಿರುವ ಚರಂಡಿನೀರು ಹರಿಯದಂತೆ  ಅಗತ್ಯ ಕ್ರಮ ಕೈಗೊಂಡು ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಒದಗಿಸಲಿಂಬುವುದೇ  ಜನತೆಯ ಆಗ್ರಹವಾಗಿದೆ.

About The Author