ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನಾ ಕನಕಾಚಲಪತಿ ದೇವಸ್ಥಾನವು 16ನೇ ಶತಮಾನದ ವಿಜಯ ನಗರ ಶೈಲಿಯ ವಾಸ್ತುಶಿಲ್ಪಕ್ಕೆ ಸಾಕ್ಷಿಯಾದ ಐತಿಹಾಸಿಕ ಪುಣ್ಯಕ್ಷೇತ್ರವಾಗಿದ್ದು, “ಕಣ್ಣಿದ್ದವರಿಗೆ ಕನಕಗಿರಿ“ಕಾಲಿದ್ದವರಿಗೆ ಹಂಪೆ, ಎಂಬ ಉಕ್ತಿ ಇಲ್ಲಿನ ಶಿಲ್ಪಕಲೆಯ ಸೌಂದರ್ಯವನ್ನು ವರ್ಣಿಸುತ್ತದೆ. ಶ್ರೀ ಕನಕಾಚಲಪತಿ (ವಿಷ್ಣು) ಮುಖ್ಯ ದೇವರಾಗಿದ್ದು , ಭವ್ಯವಾದ ಕಂಬಗಳು, ಶಿಲ್ಪಗಳು ಮತ್ತು ವಿಶಾಲವಾದ ಆವರಣಕ್ಕೆ ಇದು ಹೆಸರುವಾಸಿಯಾಗಿದೆ.
ಗುಜ್ಜಲ ವಂಶದ ಮೊದಲ ದೊರೆ ಪರಸಪ್ಪ ನಾಯಕ (1436-1510) ಕನಸಿನಲ್ಲಿ ಕಾಣಿಸಿಕೊಂಡು ತಿರುಪತಿ ಗಿರಿವಾಸ ಶ್ರೀವೆಂಕಟೇಶ ಕನಕಗಿರಿಯಲ್ಲಿ ಸಾಲಿಗ್ರಾಮ ರೂಪದಲ್ಲಿ ಲಕ್ಷ್ಮೀನರಸಿಂಹ ನಾಗಿ ತಾನು ನೆಲೆಸಿ ಭಕ್ತರ ಬೇಡಿಕೆ ಈಡೇರಿಸುವುದಾಗಿ ತಿಳಿಸಿದನಂತೆ. ಈ ವಿಷಯವನ್ನು ಆತ ತನ್ನ ಸಾಮ್ರಾಟ ವಿಜಯನಗರದ ಅಧಿಪತಿ ಪ್ರೌಢದೇವರಾಯನಿಗೆ ನಿವೇದಿಸಿಕೊಂಡನಂತೆ. ಆಗ ವಿಜಯನಗರದ ಅರಸರು 12 ಗ್ರಾಮ ಗಳನ್ನು ಆತನಿಗೆ ಉಂಬಳಿ ಪಾಳೆಯ ಪಟ್ಟ ಕಟ್ಟಿ ಕನಕಾಚಲಪತಿಗೆ ನಿತ್ಯ ಪೂಜೆ ನಡೆಸಲು ಆದೇಶಿಸಿದರು.
ಇದುವೇ ದೇವಾಲಯದ ಸ್ಥಾಪನೆಗೆ ಕಾರಣವಾಯ್ತು. ನಂತರದ ದಿನಗಳಲ್ಲಿ ಸ್ವಾಮಿಯ ಮಹಿಮೆ ಅರಿತ ವಿಜಯ ನಗರದ ದೊರೆಗಳಾದ ಸಾಳ್ವ ನರಸಿಂಹ, ಶ್ರೀಕೃಷ್ಣದೇವರಾಯರು, ಅಚ್ಯುತರಾಯರು ಕನಕಾಚಲಪತಿಯ ಭಕ್ತರಾದರೆಂದು ಇತಿಹಾಸ ಹೇಳುತ್ತದೆ.
ದೇವಸ್ಥಾನವು ದ್ರಾವಿಡ ಶೈಲಿಯ ಗೋಪುರ ಹೊಂದಿದ್ದು, ಕಲ್ಲಿನ ಕೆತ್ತನೆಗಳು ಭವ್ಯವಾದ ವಿಮಾನ ಗೋಪುರಗಳು ನಯ ವಾದ ಕಲ್ಲುಗಳಿಂದ ನಿರ್ಮಿತವಾಗಿದ್ದು,
ಇದು ಕನಕ ಮುನಿಗಳು ತಪಸ್ಸು ಮಾಡಿದ ಸ್ಥಳವೆನ್ನುವ ಪ್ರತೀತಿ. ಇನ್ನು ದೇವಸ್ಥಾನಕ್ಕೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ದೇಣಿಗೆ ಭಕ್ತರಿಂದ ಸಂಗ್ರಹವಾಗುತ್ತಿದ್ದರೂ ದೇವಸ್ಥಾನದ ಅಭಿವೃದ್ಧಿಗೆ ಮಾತ್ರ ಶೂನ್ಯ ಎಂಬಂತಾಗಿದೆ.ಈ ಹಣದಲ್ಲಿ ದೇವಸ್ಥಾನದ ಸಿಬ್ಬಂದಿ ವೇತನ, ಜಾತ್ರೆ ಖರ್ಚು, ಪೂಜೆ-ಪುನಸ್ಕಾರ, ವಿದ್ಯುತ್ ಬಿಲ್, ಕಿರಾಣಿ, ಸಿಸಿ ಕ್ಯಾಮೆರಾ, ಗಣಕಯಂತ್ರ ಸೇರಿದಂತೆ ಇತರೆ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸರಕಾರ ದಿಂದ ಲಕ್ಷಾಂತರ ರೂಪಾಯಿ ಅನುದಾನ ದೇವಸ್ಥಾನಕ್ಕೆ ಬಿಡುಗಡೆಯಾಗುತ್ತಿದ್ದರೂ ಕೂಡ ಅಭಿವೃದ್ಧಿ ಮರೀಚಿಕೆಯಾಗಿದೆ.
ಇನ್ನು ಕನಕಗಿರಿಯನ್ನು ಆಳಿದಂಥ ಗುಜ್ಜಲ ರಾಜವಂಶಸ್ಥರ ಮೂರ್ತಿಗಳು ಮತ್ತು ಶಿಲ್ಪ ಕಲೆಗಳು ಸರ್ಕಾರದ ನಿರ್ಲಕ್ಷಕ್ಕೊ ಳಗಾಗಿವೆ.
ಈ ದೇವಾಲಯವು ಕಲೆ ಮತ್ತು ವಾಸ್ತುಶಿಲ್ಪ ಪ್ರಿಯರಿಗೆ ಪ್ರಮುಖ ಪ್ರವಾಸಿ ತಾಣವಾಗಿದ್ದರೂ ದೇವಸ್ಥಾನದ ಸನಿಹದಲ್ಲೇ ಚರಂಡಿ ನೀರು ಸರಾಗವಾಗಿ ಹರಿಯದೇ ಕಸ ಕಡ್ಡಿಗಳು, ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು ಸಂಗ್ರಹವಾಗಿ ನೀರು ಹರಿಯದಂತಾಗಿದೆ. ಇದರಿಂದಾಗಿ ಸುತ್ತ-ಮುತ್ತಲಿನ ಪರಿಸರವೆಲ್ಲಾ ದುರ್ವಾಸನೆಯಿಂದಾಗಿ ಕಬ್ಬೆದ್ದು ನಾರುತ್ತಿದೆ.
ಚರಂಡಿ ನೀರು ಸರಾಗವಾಗಿ ಹರಿಯದೆ ರಸ್ತೆ ಮೇಲೆ ಹರಿಯುತ್ತಿರುವುದು ತಿಳಿದಿದ್ದರೂ ಅಧಿಕಾರಿಗಳು, ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ. ಕಾರಣ ಈ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ ಅಲ್ಲದೇ ಈ ಬಗ್ಗೆ ಜನರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೈಜ ಸುದ್ದಿಗಳಿಗಾಗಿ ನೋಡ್ತಾ ಇರಿ ಟೀ ಪಬ್ಲಿಕ್ ನ್ಯೂಸ್
ಅವಕೃಪೆಗೊಳಗಾದ ಐತಿಹಾಸಿಕ ದೇವಸ್ಥಾನ ಹಾಗೂ ಸುತ್ತಲಿನ ಪರಿಸರ
More Stories
ವಿದ್ಯಾ ಭಾರತಿ ಮಹಿಳಾ ಮಹಾವಿದ್ಯಾಲಯದಲ್ಲಿ ದಶಮಾನೋತ್ಸವ ಸಂಭ್ರಮಾಚರಣೆ
ಕಾನಿಪ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಕರ್ನಾಟಕ ರಾಜ್ಯ ಪರಿಶಿಷ್ಟ ವರ್ಗಗಳ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಸುರೇಶ ಕಾರಟಗಿ