ಟಿ ಪಬ್ಲಿಕ್ ನ್ಯೂಸ್
ಗಂಗಾವತಿ: ತಾಲೂಕಿನ ಸಣಾಪುರ ಗ್ರಾಮ ಪಂಚಾಯತ್ ಗೆ ಸಾಮಾಜಿಕ ಪರಿಶೋಧನೆ ರಾಜ್ಯ ನಿರ್ದೇಶಕರಾದ ಸಿ.ಕೆ. ಮಲ್ಲಪ್ಪ ಅವರು ಗುರುವಾರ ಭೇಟಿ ನೀಡಿ ವಿವಿಧ ಯೋಜನೆಗಳ ಪರಿಶೀಲನೆ ನಡೆಸಿದರು.
ಪರಿಶೋಧನೆ ರಾಜ್ಯ ನಿರ್ದೇಶಕರಾದ ಮಾನ್ಯ ಸಿ.ಕೆ. ಮಲ್ಲಪ್ಪ ಅವರು ಮಾತನಾಡಿ, ಮಹಾತ್ಮ ಗಾಂಧಿ ಯೋಜನೆ ಹಾಗೂ 15 ಹಣಕಾಸು ಯೋಜನೆಯಡಿ ಗುಣಮಟ್ಟದ ಕಾಮಗಾರಿಗಳು ಅನುಷ್ಠಾನ ಆಗಬೇಕು. ಉದ್ಯೋಗ ಚೀಟಿ ಹೊಂದಿದ ಎಲ್ಲ ಕುಟುಂಬಗಳು ನರೇಗಾ ಯೋಜನೆಯಡಿ 100 ದಿನ ಮಾನವ ದಿನಗಳ ಸೃಜನೆ ಮಾಡಬೇಕು ಎಂದರು.
ಬಡವರು, ದುರ್ಬಲ ವರ್ಗಗಳಿಗೆ ನರೇಗಾ ಯೋಜನೆ ತುಂಬಾ ಸಹಕಾರಿಯಾಗಿದ್ದು, ಈ ವರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ನೀಡಬೇಕು. ನಾಲಾ, ಕೆರೆ ಹೂಳೆತ್ತುವುದರಿಂದ ಅಂತರ್ಜಲ ವೃದ್ಧಿಗೂ ಸಹಕಾರಿಯಾಗುತ್ತದೆ ಎಂದರು.
ನಂತರ ನರೇಗಾ ಯೋಜನೆ ಕಾಮಗಾರಿಗಳು ಹಾಗೂ 15 ನೇ ಹಣಕಾಸು, ರಾಜ್ಯ ಹಣಕಾಸು ಆಯೋಗದ ಕಡತಗಳ ಪರಿಶೀಲನೆ ಮಾಡಿದರು. ನಂತರ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿದರು.
ಈ ವೇಳೆ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್, ಗ್ರಾಪಂ ಪಿಡಿಓ ವತ್ಸಲಾ, ಜಿಲ್ಲಾ ಡಿಆರ್ ಪಿ ಶಿವನಗೌಡ ಪಾಟೀಲ್ , ಜಿಲ್ಲೆಯ ಸಾಮಾಜಿಕ ಪರಿಶೋಧನೆ ತಾಲೂಕು ಸಂಯೋಜಕರಾದ ವೀರನಗೌಡ ಪಾಟೀಲ್ , ವೀರಣ್ಣ ಸಾಲಿಮನಿ, ರವಿಗೌಡ, ಮಹೇಶ, ಇಬ್ರಾಹಿಂ, ತಾಂತ್ರಿಕ ಸಂಯೋಜಕರಾದ ಬಸವರಾಜ ಜಟಗಿ, ಎಂಐಎಸ್ ಸಂಯೋಜಕರಾದ ಶರಣಬಸವ ಪಾಟೀಲ್, ತಾಲೂಕು ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಬಿಎಫ್ ಟಿಗಳು ಹಾಗೂ ಗ್ರಾಪಂ ಸಿಬ್ಬಂದಿಗಳು, ವಿಆರ್ ಪಿಗಳು ಇದ್ದರು.
ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್
ಸಾಮಾಜಿಕ ಪರಿಶೋಧನೆ ರಾಜ್ಯ ನಿರ್ದೇಶಕರಾದ ಸಿ.ಕೆ. ಮಲ್ಲಪ್ಪ ಹೇಳಿಕೆ
More Stories
ಕೃತಕ ಬುದ್ಧಿಮತ್ತೆ ಯುಗಕ್ಕೆ ತಕ್ಕ ಭೋಧನಾ ಸಾಮರ್ಥ್ಯಾಭಿವೃದ್ಧಿ – ವೆಬ್ಸೈಟ್ ಲೋಕಾರ್ಪಣೆ, ಪ್ರವೇಶಾತಿ ಅಭಿಯಾನಕ್ಕೆ ಚಾಲನೆ
ಬಿಸಿಗಾಳಿಗೆ ತಂಪಿನ ಸ್ಪರ್ಶ – ಗಂಗಾವತಿಯಲ್ಲಿ ಉಚಿತ ಮಜ್ಜಿಗೆ ವಿತರಣೆ
ಕಿಷ್ಕಿಂದ ಪಿಯು ಕಾಲೇಜಿಗೆ ಶೇ.100 ಫಲಿತಾಂಶದ ಸಂಭ್ರಮ – ಡಾ. ಚಂದ್ರಪ್ಪ ಮೆಚ್ಚುಗೆ