ವಾಣಿಜ್ಯ ಮತ್ತು ಕಲಾ ವಿಭಾಗದ ಟಾಪರ್ಸ್ ಮಿಂಚು | ಹಲವು ವಿಷಯಗಳಲ್ಲಿ ಶೇ.100 ಅಂಕಗಳ ಸಾಧನೆ
ಗಂಗಾವತಿ: ತಾಲೂಕಿನ ಹೆಸರಾಂತ ಹಾಗೂ ಶೈಕ್ಷಣಿಕವಾಗಿ ಸದಾ ಮುಂಚೂಣಿಯಲ್ಲಿರುವ ಬೇತೆಲ್ ಸ್ವತಂತ್ರ ಪದವಿ ಪೂರ್ವ ಕಾಲೇಜ್‌ನಲ್ಲಿ 2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಮತ್ತೊಮ್ಮೆ ಗಮನಾರ್ಹ ಸಾಧನೆಯೊಂದಿಗೆ ಹೊರಹೊಮ್ಮಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಶಿಕ್ಷಕರ ಸಮರ್ಪಿತ ಬೋಧನೆ, ಹಾಗೂ ಪೋಷಕರ ನಿರಂತರ ಸಹಕಾರದಿಂದ ಕಾಲೇಜು ಉತ್ತಮ ಫಲಿತಾಂಶವನ್ನು ದಾಖಲಿಸಿ ತನ್ನ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಈ ಫಲಿತಾಂಶದಲ್ಲಿ ಕೇವಲ ಪಾಸ್ ಪ್ರಮಾಣವಷ್ಟೇ ಅಲ್ಲ, ಗುಣಮಟ್ಟಕ್ಕೂ ಹೆಚ್ಚಿನ ಆದ್ಯತೆ ದೊರೆತಿದ್ದು, 27 ವಿದ್ಯಾರ್ಥಿಗಳು DISTINCTION 58 ವಿದ್ಯಾರ್ಥಿಗಳು FIRST CLASS ಹಾಗೂ 9 ವಿದ್ಯಾರ್ಥಿಗಳು SECOND CLASS ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಇದು ಕಾಲೇಜಿನ ಶೈಕ್ಷಣಿಕ ಶಿಸ್ತಿನ ಹಾಗೂ ಮಾರ್ಗದರ್ಶನದ ಸ್ಪಷ್ಟ ಸೂಚಕವಾಗಿದೆ.
ವಿಭಾಗವಾರು ಟಾಪರ್ಸ್
ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದು, ಜರಾ ಫಿರ್ದೋಸ್ 581 ಅಂಕಗಳನ್ನು (96.83%) ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ,ಅವರನ್ನು ಅನುಸರಿಸಿ ಶ್ರೀಪ್ರಿಯಾ ಜಿ. ಪಾನಗಂಟಿ 573 ಅಂಕಗಳು (95.50%), ಹಾಗೂ ದೀಕ್ಷಾ ತಟ್ಟಿ 570 ಅಂಕಗಳು (95%) ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಲಾ ವಿಭಾಗದಲ್ಲಿಯೂ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದು, ದೀಪಾ 571 ಅಂಕಗಳು (95.17%), ಹಾಗೂ ಜೋಯಾ ಖಾನ್ 564 ಅಂಕಗಳು (94%), ಪಡೆದು ಕಾಲೇಜಿಗೆ ಹೆಮ್ಮೆಯ ವಿಷಯವಾಗಿದ್ದಾರೆ.ಈ ವಿದ್ಯಾರ್ಥಿಗಳು ತಮ್ಮ ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ.
ವಿಷಯವಾರು ಶ್ರೇಷ್ಠ ಸಾಧನೆ
ಈ ವರ್ಷದ ಫಲಿತಾಂಶದಲ್ಲಿ ಹಲವು ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಶೇ.100/100 ಅಂಕಗಳನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ, ಇದು ಕಾಲೇಜಿನ ಗುಣಮಟ್ಟದ ಬೋಧನೆಯನ್ನು ಪ್ರತಿಬಿಂಬಿಸುತ್ತದೆ
ವ್ಯವಹಾರ ಅಧ್ಯಯನದಲ್ಲಿ ಜರಾ ಫಿರ್ದೋಸ್ ಹಾಗೂ ಆಫ್ಸನಾ ಬೇಗಂ ಶೇ.100 ಅಂಕಗಳನ್ನು ಪಡೆದಿದ್ದಾರೆ, ರಾಜ್ಯಶಾಸ್ತ್ರದಲ್ಲಿ ದೀಪಾ ಹಾಗೂ ಜೋಯಾ ಖಾನ್ ಶೇ.100 ಅಂಕಗಳನ್ನು ಗಳಿಸಿದ್ದಾರೆ, ಸಂಖ್ಯಾಶಾಸ್ತ್ರದಲ್ಲಿ ದೀಕ್ಷಾ ತಟ್ಟಿ ಶೇ.100 ಅಂಕಗಳನ್ನು ಪಡೆದಿದ್ದಾರೆ, ಲೆಕ್ಕಶಾಸ್ತ್ರ ಹಾಗೂ ಹಿಂದಿ ವಿಷಯಗಳಲ್ಲಿ ಜರಾ ಫಿರ್ದೋಸ್ ಶೇ.100 ಅಂಕಗಳನ್ನು ಪಡೆದು ದ್ವಿಗುಣ ಸಾಧನೆ ಮಾಡಿದ್ದಾರೆ
ಈ ಸಾಧನೆ ಕುರಿತು ಪ್ರಿನ್ಸಿಪಾಲ್ ಬಿಂಗಿ.ವೆಂಕಟೇಶ್ ಮಾತನಾಡಿ, “ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಸಮರ್ಪಿತ ಬೋಧನೆ ಹಾಗೂ ಪೋಷಕರ ಬೆಂಬಲದಿಂದ ಈ ಸಾಧನೆ ಸಾಧ್ಯವಾಗಿದೆ. ನಮ್ಮ ಕಾಲೇಜು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶಗಳನ್ನು ಸಾಧಿಸಲು ಬದ್ಧವಾಗಿದೆ” ಎಂದು ತಿಳಿಸಿದ್ದಾರೆ.
ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯ ಮಾರ್ಗದರ್ಶನವನ್ನು ನೀಡಲು ತೀರ್ಮಾನಿಸಿದ್ದು, ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.
ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಸಿಬ್ಬಂದಿ ಎಲ್ಲಾ ಉತ್ತೀರ್ಣ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿ, ಅವರ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ ಎಂದು ಹಾರೈಸಿದ್ದಾರೆ. ಈ ಸಾಧನೆ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಿನ ಯಶಸ್ಸಿಗೆ ದಾರಿಯಾಗಲಿ ಎಂಬ ಆಶಯ ವ್ಯಕ್ತವಾಗಿದೆ.
ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್
More Stories
ಪ್ರೊ. ಬಿ. ಕೃಷ್ಣಪ್ಪರ ರಾಜ್ಯಮಟ್ಟದ ಜಯಂತ್ಯೋತ್ಸವ ಜುಲೈ 1ರಂದು: ಸಾವಿರಾರು ಕಾರ್ಯಕರ್ತರ ಭಾಗವಹಿಸುವ ನಿರೀಕ್ಷೆ
ಕಾರಟಗಿ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಅದ್ದೂರಿಯಾಗಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಜೂನ್ 24ರಂದು ಹೊಸಳ್ಳಿಯಲ್ಲಿ ಅದ್ದೂರಿಯಾಗಿ ಗಂಗಾದೇವಿ ಜಯಂತಿ: ಸಾಮೂಹಿಕ ವಿವಾಹ, ರಥೋತ್ಸವಕ್ಕೆ ಭರ್ಜರಿ ಸಿದ್ಧತೆ