🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 26/08/2026
ಗಂಗಾವತಿ: ತಾಲೂಕಿನ ಉಡುಮಕಲ್ ಗ್ರಾಮದ ನಿವಾಸಿ ವಿಶ್ವನಾಥ ಮರಳಿಮಠ ಅವರ ನೂತನ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ವಿರೂಪಾಕ್ಷಪ್ಪ ಸಿಂಗನಾಳ ಆಗಮಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಬಿಜೆಪಿ ಕಾರ್ಯಕರ್ತರು, ಹಿರಿಯರು ಹಾಗೂ ವಿಶ್ವನಾಥ ಮರಳಿಮಠ ಅವರ ಕುಟುಂಬಸ್ಥರು ವಿರೂಪಾಕ್ಷಪ್ಪ ಸಿಂಗನಾಳ ಅವರಿಗೆ ಶಾಲು, ಹಾರ ಹಾಕಿ ಆತ್ಮೀಯವಾಗಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿರೂಪಾಕ್ಷಪ್ಪ ಸಿಂಗನಾಳ, “ವಿಶ್ವನಾಥ ಮರಳಿಮಠ ಅವರ ಕುಟುಂಬವು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯುವ ಶಕ್ತಿಯನ್ನು ಭಗವಂತ ಕರುಣಿಸಲಿ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ತಿಪ್ಪಣ್ಣ ಬುನ್ನಟ್ಟಿ, ಶರಣಯ್ಯ ಸ್ವಾಮಿ, ಸುನಿಲ್ ಗೌಡ, ಮಂಜುನಾಥ್ ಕೋರಿ, ದುರ್ಗೇಶ್ ಉಳ್ಕಿಹಾಳ, ಹನುಮೇಶ್ ಮರಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಲಕ್ಷ್ಮಣಸಾ ಅರಸಿದ್ದಿ ವರ್ಗಾವಣೆ; ನೂತನ ಎಸ್ಪಿಯಾಗಿ ಶಾಹಿಲ್ ಬಾಗ್ಲಾ ನೇಮಕ
ಶ್ರಾವಣ ಹುಣ್ಣಿಮೆ ಅಂಗವಾಗಿ ಸತ್ಯನಾರಾಯಣ ಪೂಜೆ ಆಯೋಜನೆ
ಮಾವಿನಮಡಗು ಚೆಕ್ ಡ್ಯಾಂ ಕಾಮಗಾರಿಗೆ ರೈತರ ವಿರೋಧ; ತೀವ್ರ ಆಕ್ಷೇಪ