ಗಂಗಾವತಿ ತಾಲೂಕಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಹೇಶ ಟಿ ನಾಯಕ ಸಾರಥ್ಯದಲ್ಲಿ ಟಿ ಪಬ್ಲಿಕ್ ನ್ಯೂಸ್ ಚಾನೆಲ್ ಹಾಗೂ ವೆಬ್ಸೈಟ್ ಉದ್ಘಾಟಿಸಲಾಯಿತು
ಉದ್ಘಾಟಕರಾದ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ವೀರಭದ್ರಪ್ಪ ನಾಯಕ
ದೀಪ ಹಚ್ಚುವ ಮುಖಾಂತರ ಚಾಲನೆ ನೀಡಿ ನಂತರ ಮಾತನಾಡಿ ಈ ಸುದ್ದಿ ವಾಹಿನಿ ಅನ್ಯಾಯದ ವಿರುದ್ಧ ಭ್ರಷ್ಟರ ವಿರುದ್ಧ ಸುದ್ದಿ ಬಿತ್ತರಿಸುತ್ತಾ ಹಾಗೂ ನ್ಯಾಯಪರ ವಾಹಿನಿ ಆಗಲಿ ಎಂದರು
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಾಣಿ ವಿಶೇಷಾಂಕ ಉದ್ಘಾಟಕರಾದ ವಾಲ್ಮೀಕಿ ನಾಯಕ ಸಮಾಜದ ಹಿರಿಯ ಮುಖಂಡರಾದ ಜೋಗದ ನಾರಾಯಣಪ್ಪ ನಾಯಕ
ಮಾತನಾಡಿ ಟೀ ಪಬ್ಲಿಕ್ ನ್ಯೂಸ್ ಹಾಗೂ ಕಲ್ಯಾಣ ಕರ್ನಾಟಕ ವಾಣಿ ಪತ್ರಿಕೆ ಇನ್ನು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು
ನಂತರ ಟಿ ಪಬ್ಲಿಕ್ ನ್ಯೂಸ್ ವೆಬ್ಸೈಟ್ ಉದ್ಘಾಟಕರಾದ ಜೋಗದ ನಾರಾಯಣಪ್ಪ ನಾಯಕ ಮತ್ತು ಜೋಗದ ಹನುಮಂತಪ್ಪ ನಾಯಕ ಮಾತನಾಡಿ ಈಗಾಗಲೇ ಕಲ್ಯಾಣ ಕರ್ನಾಟಕ ವಾಣಿ ಪತ್ರಿಕೆ ಸಾಕಷ್ಟು ಹೆಸರು ಗಳಿಸಿದೆ ಇನ್ನು ನೂತನವಾಗಿ ಪ್ರಾರಂಭವಾಗಿರುವ ಟಿ ಪಬ್ಲಿಕ್ ನ್ಯೂಸ್ ಯಶಸ್ವಿ ಗೊಳ್ಳಲಿ ಎಂದರು
ಈ ಸಂದರ್ಭದಲ್ಲಿ ನಗರದ ಹಿರಿಯ ಮುಖಂಡರು ಭಾಗಿಯಾಗಿದ್ದರು
More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ