October 16, 2026

ಸ್ಫೂರ್ತಿ ಕಲರವ- ಇದು ನಮ್ಮ ಹಬ್ಬ ಬಿಎಸ್ಸಿ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ, ಪ್ರತಿಜ್ಞಾವಿಧಿ ಮತ್ತು ದೀಪ ಬೆಳಗಿಸುವ ಕಾರ್ಯಕ್ರಮಕ್ಕೆ ಚಾಲನೆ

ಟಿ ಪಬ್ಲಿಕ್ ನ್ಯೂಸ್

ಗಂಗಾವತಿ, ಬಿ.ಎಸ್ಸಿ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ. ಪ್ರತಿಜ್ಞಾವಿಧಿ ಮತ್ತು ದೀಪ ಬೆಳಗಿಸುವ ಕಾರ್ಯಕ್ರಮ (Graduation Day, Lamp Lighting & Oath Taking Ceremony) ‘ಸ್ಫೂರ್ತಿ ಕಲರವ-V ಇದು ನಮ್ಮ ಹಬ್ಬವನ್ನು ಗಂಗಾವತಿ ನಗರದ ರಾಯಚೂರು ರಸ್ತೆಯಲ್ಲಿರುವ ಅಮರ ಗಾರ್ಡನ್‌ಲ್ಲಿ ಹಮ್ಮಿಕೊಳ್ಳಲಾಗಿದೆ.

ಬಿಎಸ್ಸಿ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಗಂಗಾವತಿ ನಗರದ ಆಯುರ್ವೆದಿಕ್ ಮೆಡಿಕಲ್ ಕಾಲೇಜ್, ಸ್ಫೂರ್ತಿ ಕಾಲೇಜ್ ಆಫ್ ನರ್ಸಿಂಗ್ ಮತ್ತು ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್. ಅಲೈಡ್ ಹೆಲ್ತ್ ಸೈನ್ಸ್‌ಸ್, ಕಾಲೇಜ್ ಆರ್ಫ ಫಾರ್ಮಸಿ ಮತ್ತು ಪ್ಯಾರಾಮೆಡಿಕಲ್ ಸೈನ್ಸ್‌ಸ್ ಈ ಎಲ್ಲ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಉದ್ಘಾಟಕರಾಗಿ ಗಂಗಾವತಿ ಉಪವಿಭಾಗದ  ಪೊಲೀಸ್ ಉಪಾಧೀಕ್ಷಕರಾದ ಜಿ.ಎಸ್. ಶ್ರೀ ನ್ಯಾಮಗೌಡ ಅವರು ಉದ್ಘಾಟಿಸಿದ್ದಾರೆ

ಕೊಪ್ಪಳದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಲಿಂಗರಾಜು ಟಿ. ಅವರು ಪ್ರತಿಜ್ಞಾವಿಧಿ ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ

ಸಮಾರಂಭದ ಅಧ್ಯಕ್ಷತೆಯನ್ನು ಗಂಗಾವತಿ ಸ್ಪೂರ್ತಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ದ ಚೇರಮನ್ ಶ್ರೀಮತಿ ನಿರ್ಮಲಾ ಈಶ್ವರ ಸವಡಿ ಅವರು ವಹಿಸಿದ್ದಾರೆ

ಗಂಗಾವತಿಯ ವಾಣಿಜ್ಯೋದ್ಯಮಿ ಗಳಾದ ಶ್ರೀ ವಿರೂಪಾಕ್ಷಪ್ಪ ಮುಷ್ಠಿ, ಸ್ಫೂರ್ತಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ನಿರ್ದೇಶಕ ಡಾ. ಉಮೇಶ ಪುರದ, ಪ್ರಥಮ ದರ್ಜೆ ಗುತ್ತಿಗೆದಾರರಾದ ಶ್ರೀ ರವಿ ರಾಜಶೇಖರ್, ಜಂಗಮರ ಕಲ್ಗುಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಮಂಗಳಪ್ಪ ನಾಯಕ್, ಸಂಗಾಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಆಧಿಕಾರಿ ಶ್ರೀ ಜಿಲಾನ್ ಪಾಷಾ, ಗಂಗಾವತಿ ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಈಶ್ವರ ಎಸ್. ಸವಡಿ, ಗಂಗಾವತಿ ಸ್ಫೂರ್ತಿ ಕಾಲೇಜ್ ಆಫ್ ನರ್ಸಿಂಗ್‌ ನಿರ್ದೇಶಕ ಡಾ. ಸತೀಶ್ ರಾಯ್ಕರ್. ಸ್ಪೂರ್ತಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ದ ಅಧ್ಯಕ್ಷರು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರು ಮತ್ತು ಗಂಗಾವತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಬಸವರಾಜ ಪ್ರಾಚಾರ್ಯರಾದ ಡಾಕ್ಟರ್ ಬಸವರಾಜ್ ಎಸ್  ಸವಡಿ ಅವರು ಅತಿಥಿಗಳಾಗಿ ಆಗಮಿಸಿದ್ದರು

ಗಂಗಾವತಿ ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲಾ ಪಿಯು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು, ಗಂಗಾವತಿ ಆಸ್ಪತ್ರೆ ಉಪ-ವಿಭಾಗದ  ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿರುವರು

ನೈಜ ಸುದ್ದಿಗಾಗಿ ನೋಡ್ತಾ ಇರಿ ಟಿ ಪಬ್ಲಿಕ್ ನ್ಯೂಸ್

error: Content is protected !!