ಟಿ ಪಬ್ಲಿಕ್ ನ್ಯೂಸ್
ಕುಕನೂರು ಶಿವಲಿಂಗದಿಂದ ಉದ್ಭವಿಸಿ, ಮಾನವ ಧರ್ಮಕ್ಕೆ ನಾಂದಿ ಹಾಡುತ್ತ ಇಡೀ ವಿಶ್ವಕ್ಕೆ ಶಾಂತಿಮಂತ್ರ ಸಾರಿದ ಮಹಾನ್ ಚೇತನ ಜಗದ್ಗುರು ಆದಿ ರೇಣುಕಾಚಾರ್ಯರು ಎಂದು ಪಟ್ಟಣದ ಪ್ರಮುಖರಾದ ಮಂಜುನಾಥ ನಾಡಗೌಡ ಹೇಳಿದರು
ತಾಲೂಕಿನ ಹರಿ ಶಂಕರ ಬಂಡಿ ಸೇರಿದಂತೆ ವಿವಿಧ ಗ್ರಾಮಗಳು ಹಾಗೂ ಬಸ್ ಡಿಪೋ, ಜಗದ್ಗುರು ರೇಣುಕಾಚಾರ್ಯರ ವೃತ್ತ ಸರ್ಕಾರಿ ಕಚೇರಿಗಳಲ್ಲಿ ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು. ಪಟ್ಟಣದ ತಹಸಿಲ್ದಾರರ ಕಾರ್ಯಾಲಯದಲ್ಲಿ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡ ಪ್ರಮುಖ ಮಂಜುನಾಥ ನಾಡಗೌಡ ಮಾತನಾಡುತ್ತಾ ಪ್ರಮುಖವಾದ ಪಂಚಪೀಠಗಳಲ್ಲಿ ರಂಭಾಪುರಿ ಪೀಠದ ಮೂಲಪುರುಷರಾದ ಶ್ರೀ ರೇಣುಕಾಚಾರ್ಯರು ಜಗತ್ತಿಗೆ ಶಾಂತಿಮಂತ್ರ ಸಾರಿದ ಮಹಾನ್ ಪುರುಷರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾನವರು ಧರ್ಮದ ಹೆಸರಿನಲ್ಲಿ ಯುದ್ಧ ಮಾಡುತ್ತಾ ಮಾನವ ಜನಾಂಗವೇ ನಶಿಸಿಹೋಗುವ ಭೀತಿಯಲ್ಲಿದೆ. ಆದರೆ ಈ ನೆಲದಲ್ಲಿ ಅವತಾರ ತಾಳಿದ ಮಹಾನ್ ಪುರುಷರು ಶಾಂತಿ ಮಂತ್ರ ಸಾರುತ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದ್ದು ಇಂತಹ ನೆಲದಲ್ಲಿ ಜನ್ಮ ಪಡೆದಿರುವ ನಾವೆಲ್ಲರೂ ಪುಣ್ಯವಂತರು. ಜಾತಿ ಜಾತಿಗಳ ತಿಕ್ಕಾಟ, ಧರ್ಮ ಧರ್ಮಗಳ ದರ್ಶನೆಯ ಮಧ್ಯ ಮಾನವ ಜನ್ಮದ ಸಾರ್ಥಕತೆಯನ್ನು ತಿಳಿಸಿ ಇಡೀ ವಿಶ್ವಕ್ಕೆ ಶಾಂತಿ ಪತ್ರವನ್ನು ಸಾರಿದ ಮಹಾನ್ ಪುರುಷ ರೇಣುಕಾಚಾರ್ಯರಾಗಿದ್ದು ಇಂತಹ ಮಹಾನ್ ಪುರುಷನನ್ನು ಕೇವಲ ಒಂದು ಜಾತಿಗೆ ಮಾತ್ರ ಸೀಮಿತಗೊಳಿಸದೆ ಪ್ರತಿಯೊಬ್ಬರು ಅವರ ತತ್ವದರ್ಶಗಳು ಹಾಗೂ ಅವರ ಶಾಂತಿ ಮಂತ್ರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು
ಪ್ರಮುಖರಾದ ಶಿವಕುಮಾರ ನಾಗಲಾಪುರ ಮಠ ಮಾತನಾಡುತ್ತ ಮಾನವೀಯ ಮೌಲ್ಯಗಳನ್ನು ಅರಿತುಕೊಂಡು ಬಾಳುವಂತೆ ಶಾಂತಿ ಮಂತ್ರವನ್ನು ಸಾರಿ ಸಮಾಜ ಪರಿವರ್ತನೆಗೆ ಶ್ರಮಿಸಿದ ರೇಣುಕಾಚಾರ್ಯರು ಪ್ರತಿಯೊಬ್ಬ ಮಾನವನಿಗೆ ಆದರ್ಶ ಪ್ರಿಯರಾಗಿದ್ದಾರೆ ಎಂದು ಹೇಳಿದರು
ಈ ವೇಳೆಯಲ್ಲಿ ಜಂಗಮ ಸಮುದಾಯದ ತಾಲೂಕ ಅಧ್ಯಕ್ಷ ಮಹೇಶ ಕಲ್ಮಠ, ಗ್ರೇಡ್ 2 ತಹಸಿಲ್ದಾರ ಮುರಳಿದರಾವ್ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಗೌಡರ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಕರೆಯಲಾಯದ ಸಿಬ್ಬಂದಿಗಳು ಉಪಸ್ಥಿತರಿದ್ದರು
ನೈಜ್ಯ ಸುದ್ದಿಗಳಿಗಾಗಿ ನೋಡ್ತಾ ಇರಿ ಟಿ ಪಬ್ಲಿಕ್ ನ್ಯೂಸ್
More Stories
“ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ: ತಪ್ಪಿತಸ್ಥರನ್ನು ತಕ್ಷಣ ಅಮಾನತು ಮಾಡಿ, ಇಲ್ಲದಿದ್ದರೆ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಘೇರಾವ್ – ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ”
ಶಾಲೆಯಲ್ಲೇ ಮುಖ್ಯೋಪಾಧ್ಯಾಯರ ಕಿತ್ತಾಟ! ಸಿಸಿಟಿವಿ ಪರಿಶೀಲಿಸಿ ತಪ್ಪಿತಸ್ಥರನ್ನು ಅಮಾನತು ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಿ: ಮಹಾನಾಯಕ ಜನಜಾಗೃತಿ ವೇದಿಕೆ ಆಗ್ರಹ
ರಸ್ತೆ ಒತ್ತುವರಿ ಆರೋಪ ನಿರಾಧಾರ; ಕಾನೂನುಬದ್ಧವಾಗಿಯೇ ರೆಸಾರ್ಟ್ ನಿರ್ಮಿಸಲಾಗಿದೆ: ರಮೇಶ್ ನಾಯಕ