ಟಿ ಪಬ್ಲಿಕ್ ನ್ಯೂಸ್
ಕಾರಟಗಿ, ಪಟ್ಟಣದ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಮೇಘಾ ಫೆಸ್ಟ್ ಹೆಸರಿನ ವಿಜ್ಞಾನ ಮೇಳ, ಆಹಾರ ಮೇಳ, ಎಲ್ ಎಲ್ ಸಿ ಕಾರ್ಯಕ್ರಮ ಸಂಭ್ರಮದಿಂದ ಜರುಗಿತ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರೊಪೆಲ್ ಮುಖ್ಯಸ್ಥರು ಶ್ರೀ ಹೃತಿಕ್ ಎಲ್ ಎಲ್ ಸಿ ಯಿಂದ ಮಕ್ಕಳ ಕಲಿಕೆ ಗುಣಮಟ್ಟದಿಂದ ಕೂಡಿದೆ ಜೂನಲ್ ಹಂತದ 700 ಶಾಲೆಗಳಲ್ಲಿ ಪ್ರಥಮ ಸ್ಥಾನ ಪಡೆದು ಹೆಮ್ಮೆ ಎನಿಸಿಕೊಂಡಿದೆ, ಇದರ ಪ್ರಮಾಣ ಪತ್ರವನ್ನು ಸಂಸ್ಥೆಯ ಅಧ್ಯಕ್ಷರಿಗೆ ನೀಡಿದರು,
ಕಾರ್ಯದರ್ಶಿ ಶರಣಯ್ಯಸ್ವಾಮಿ ಪ್ರತಿ ಮಗುವಿನಲ್ಲಿ ಸೂಪ್ತ ಪ್ರತಿಭೆ ಅಡಗಿರುತ್ತದೆ ಅದನ್ನು ಗಮನಿಸಿ ಹೊರ ತರುವದು ಶಿಕ್ಷಕರ ಜೊತೆ ಪಾಲಕರ ಕರ್ತವ್ಯವಾಗಿದೆ ಎಂದು ಹೇಳಿದರು
ನಂತರ ಸಂಸ್ಥೆಯ ಅಧ್ಯಕ್ಷರು ಶ್ರೀ ಶರಣಪ್ಪ ಅಂಗಡಿ ಮಾತನಾಡಿ ಮಕ್ಕಳಿಗೆ ಕೇವಲ ಪಠ್ಯಯ ವಿಷಯನ್ನು ಹೇಳದೆ ಇಂತಹ ವಿಶೇಷ ಕಾರ್ಯಕ್ರಮದಿಂದ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡುತ್ತದೆ ಹಾಗೂ ಮಕ್ಕಳಲ್ಲಿ ಸೃಜನಾತ್ಮಕತೆ ಮೂಡುತ್ತದೆ ಎಂದರು
ಈ ಕಾರ್ಯಕ್ರಮದಲ್ಲಿ ವಿಜ್ಞಾನ ವಿಷಯದ ವಿವಿಧ ಮಾದರಿಗಳು ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ತಮ್ಮ ಕೈಯ್ಯಾರೆ ಮಾಡಿದ್ದಾರೆ, ಸವಿರುಚಿಯ ಅನೇಕ ಖಾದ್ಯಗಳು ಆಸಕ್ತಿಯಿಂದ ಮಾಡಿದ್ದಾರೆ ಎಂದು ಹೇಳಿದರು. ಪಾಲಕರಿಂದ ಆಹಾರ ಮೇಳ ಹಾಗೂ ವಿಜ್ಞಾನ ಮೇಳವನ್ನು ಉದ್ಘಾಟಿಸಲಾಯಿತು,ಪಾಲಕರು ವಿವಿಧ ರುಚಿಯಾದ ತಿಂಡಿಗಳನ್ನು ಸವಿದರು, ವಿಜ್ಞಾನ ಮಾದರಿಗಳು ಆಸಕ್ತಿಯಿಂದ ವೀಕ್ಷಿಸಿದರು
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀ ಶರಣಪ್ಪ ಅಂಗಡಿ,ಕಾರ್ಯದರ್ಶಿ ಶ್ರೀ ಶರಣಯ್ಯಸ್ವಾಮಿ ,ಖಜಾಂಚಿ ಶ್ರೀ ಸೋಮನಾಥ ಗಚ್ಚಿಮನಿ, ಆಡಳಿತ ಅಧಿಕಾರಿ ಶ್ರೀಮತಿ ಶಿವಲೀಲಾ ಎಸ್ ಅಂಗಡಿ, ಮುಖ್ಯೋಪಾಧ್ಯಾಯರು ಶ್ರೀ ಮೃತ್ಯುಂಜಯ ಅಂಗಡಿ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು
ನೈಜ ಸುದ್ದಿಗಾಗಿ ನೋಡ್ತಾ ಇರಿ ಟಿ ಪಬ್ಲಿಕ್ ನ್ಯೂಸ್
More Stories
ಶ್ರೀ ವಿದ್ಯಾನಿಕೇತನ ಪಿಯುಸಿ ಫಲಿತಾಂಶದಲ್ಲಿ ಭರ್ಜರಿ ಸಾಧನೆ – ಉತ್ತರ ಕರ್ನಾಟಕಕ್ಕೆ ಹೊಸ ಗರಿಮೆ
ಬೇತೆಲ್ ಪದವಿ ಪೂರ್ವ ಕಾಲೇಜ್ನ ಅತ್ಯುತ್ತಮ ಫಲಿತಾಂಶ – ವಿದ್ಯಾರ್ಥಿಗಳ ಅದ್ಭುತ ಸಾಧನೆ
RVSR ರಾಜ್ಯಕ್ಕೆ 6ನೇ ರ್ಯಾಂಕ್ ದ್ವಿತೀಯ ಪಿಯುಸಿ ಫಲಿತಾಂಶ 100% – ಐತಿಹಾಸಿಕ ಸಾಧನೆ.