October 16, 2026

ಕೆ ಆರ್ ಎಸ್ ಪಕ್ಷದ ವತಿಯಿಂದ ಶ್ರೀ ರಾಮನವಮಿ ಪ್ರಯುಕ್ತ ಸಿಹಿ ಪಾನಕ ಮತ್ತು ಮಜ್ಜಿಗೆ ವಿತರಣೆ

ಟಿ ಪಬ್ಲಿಕ್ ನ್ಯೂಸ್

ದಿ:26/03/2026
ಗಂಗಾವತಿ: ಕೆ ಆರ್ ಎಸ್  ಪಕ್ಷದ ವತಿಯಿಂದ ಗುರುವಾರದಂದು ಗಂಗಾವತಿ ತಾಲೂಕಿನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಶ್ರೀ ರಾಮನವಮಿ ಹಬ್ಬದ ಅಂಗವಾಗಿ  ಸಿಹಿ ಪಾನಕ ಮತ್ತು ಮಜ್ಜಿಗೆ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಿಹಿ ಪಾನಕ ಮತ್ತು ಮಜ್ಜಿಗೆ ಹಂಚುತ್ತಿರುವ ಭಾವಚಿತ್ರ

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿಯವರು ಈ ಕಾರ್ಯಕ್ರಮವು ಶ್ರೀರಾಮನ ಜನ್ಮೋತ್ಸವದ ಸಂಭ್ರಮವನ್ನು ಹಂಚಿಕೊಳ್ಳುವ ಉದ್ದೇಶದಿಂದ ಹಾಗೂ ಬೇಸಿಗೆ ಕಾಲದಲ್ಲಿ ಸಾರ್ವಜನಿಕರಿಗೆ ತಂಪು ಪಾನೀಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದು ರಾಮನವಮಿ ಹಬ್ಬವು ಧರ್ಮ,ಸತ್ಯ ಮತ್ತು ನ್ಯಾಯದ ಸಂಕೇತವಾಗಿದ್ದು, ಸಮಾಜದಲ್ಲಿ ಸೌಹಾರ್ದತೆ ಮತ್ತು ಏಕತೆಯನ್ನು ಬೆಳೆಸುವ ಸಂದೇಶವನ್ನು ನೀಡುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಕೊಪ್ಪಳ ಜಿಲ್ಲಾ ಸಂಚಾಲಕರಾದ ಗಣೇಶ ಅಮೃತ್, ಮೈನುದ್ದೀನ್, ಗಣೇಶ್ ಸಾರಂಗಿ, ಗಂಗಾವತಿ ತಾಲೂಕು ಅಧ್ಯಕ್ಷರಾದ ಶಾಮಿದ್ ಅಲಿ, ಉಪಾಧ್ಯಕ್ಷರಾದ ಕಂಬಳಿ ನಾಗಪ್ಪ, ಕಾರ್ಯದರ್ಶಿಗಳಾದ ಮೆಹಬೂಬ್ ,ಗಣೇಶ್ ಶಿಂಧೆ, ಯಾಕುಬ್, ಹನುಮೇಶ್ ಕೆ ಸೇರಿದಂತೆ ಅನೇಕರು ಭಾಗವಹಿಸಿದ್ದರು

ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್

error: Content is protected !!