ಟಿ ಪಬ್ಲಿಕ್ ನ್ಯೂಸ್
ದಿ:29/03/2026
ಗಂಗಾವತಿ: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗಂಗಾವತಿ ನಗರ ಮಂಡಲದ ಎಸ್.ಟಿ.ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಣ ನಾಯಕ ಅವರನ್ನು ನೇಮಕ ಮಾಡಲಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದಂತೆ ಲಕ್ಷ್ಮಣ ನಾಯಕ ಅವರು ಸಂತಸ ವ್ಯಕ್ತಪಡಿಸಿ, ನಗರ ಎಸ್‌ಟಿ ಮೋರ್ಚಾ ಅಧ್ಯಕ್ಷ ಹನುಮಂತ ತಂಬಿ ಅವರಿಗೆ, ನಗರ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ತಮ್ಮ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇನ್ನೂ, ತಮ್ಮನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲು ಕಾರಣರಾದ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಸೇರಿದಂತೆ ಸಿ. ಯಮನೂರ, ಸಿ. ರಮೇಶ್ ನಾಯಕ, ಮಳ್ಳಿಕೇರೆ ಮಂಜುನಾಥ್, ಹೊಸಮಲ್ಲಿ ರಮೇಶ್ ನಾಯಕ, ಬಸಪ್ಪ ನಾಯಕ, ನಾಗರಾಜ್ ಹಾಗೂ ಬಿಜೆಪಿ ಮುಖಂಡರಿಗೆ ಲಕ್ಷ್ಮಣ ನಾಯಕ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಅವರು ಮಾತನಾಡಿ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿ ಪರ ಚಿಂತನೆ ಹಾಗೂ ಪಕ್ಷ ಸಂಘಟನೆಯ ಸಂಕಲ್ಪದಂತೆ ತಾವು ಸಹ ಸಂಘಟನೆಯನ್ನು ಬಲಪಡಿಸಲು ಹೆಚ್ಚಿನ ಶ್ರಮ ವಹಿಸುವುದಾಗಿ ತಿಳಿಸಿದ್ದಾರೆ.
ಮತ್ತೊಮ್ಮೆ ನಮ್ಮನ್ನು ಈ ಹುದ್ದೆಗೆ ನೇಮಕ ಮಾಡಿದ ಎಲ್ಲರಿಗೂ ಲಕ್ಷ್ಮಣ ನಾಯಕ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ
ವರದಿ: ಎಮ್.ಡಿ.ಗೌಸ್
ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್
More Stories
ಮಳೆ-ಬೆಳೆಯಿಗಾಗಿ ಮಲ್ಲಾಪುರ ಗಾಳೆಮ್ಮ ದೇವಿಯ ವಿಶೇಷ ಆರಾಧನೆ
“ದಲಿತ ನಾಯಕರಿಗೆ ನ್ಯಾಯ ಕೊಡದಿದ್ದರೆ ಕಾಂಗ್ರೆಸ್ಗೆ ಜನತೆ ತಕ್ಕ ಪಾಠ ಕಲಿಸುತ್ತದೆ: ಕೆ.ಎಚ್.ಮುನಿಯಪ್ಪ ಡಿಸಿಎಂ ಆಗಲಿ ಎಂದು ನಾಗರಾಜ ದೊಡ್ಮನಿ ಆಗ್ರಹ”
“22 ವರ್ಷಗಳ ಅಕ್ರಮ ಮದ್ಯ ಮಾರಾಟಕ್ಕೆ ಅಧಿಕಾರಿಗಳೂ ಶಾಮೀಲು? — ಅಜಯ್ ಬಾರ್ ಮಾಲೀಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ”