August 21, 2026

ಕಿಷ್ಕಿಂದ ಪಿಯು ಕಾಲೇಜಿಗೆ ಶೇ.100 ಫಲಿತಾಂಶದ ಸಂಭ್ರಮ – ಡಾ. ಚಂದ್ರಪ್ಪ ಮೆಚ್ಚುಗೆ

ಟಿ ಪಬ್ಲಿಕ್ ನ್ಯೂಸ್
ಏಪ್ರಿಲ್ 15:

ಗಂಗಾವತಿ:ನಗರದ ಕೊಪ್ಪಳ ರಸ್ತೆಯಲ್ಲಿರುವ ಕಲ್ಯಾಣ ಕರ್ನಾಟಕ ಟ್ರಸ್ಟ್ ಕಮಿಟಿ ಅಧೀನದ ಕಿಷ್ಕಿಂದ ಪಿಯು ಕಾಲೇಜು ಈ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿ ಸಂಭ್ರಮಕ್ಕೀಡಾಗಿದೆ.

ಟ್ರಸ್ಟ್ ಅಧ್ಯಕ್ಷರಾದ ಡಾ. ಚಂದ್ರಪ್ಪ, ಮುರಳಿ, ವೀರಭದ್ರಪ್ಪ ಅವರು ಬುಧವಾರ ಕಾಲೇಜಿನ ಅಧ್ಯಕ್ಷರ ಕೊಠಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಕಾಲೇಜಿನ ಗೌರವವನ್ನು ಹೆಚ್ಚಿಸಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.

ವಿಜ್ಞಾನ ವಿಭಾಗದಲ್ಲಿ ಒಟ್ಟು 163 ವಿದ್ಯಾರ್ಥಿಗಳಲ್ಲಿ 145 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಸಾಧನೆ ಮಾಡಿದ್ದು, 18 ಮಂದಿ ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 28 ವಿದ್ಯಾರ್ಥಿಗಳಲ್ಲಿ 27 ಮಂದಿ ಡಿಸ್ಟಿಂಕ್ಷನ್ ಪಡೆದುಕೊಂಡು, ಓರ್ವ ವಿದ್ಯಾರ್ಥಿ ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾಗಿದ್ದಾನೆ.

ಇನ್ನೂ ವಾಣಿಜ್ಯ ವಿಭಾಗದಲ್ಲಿ ಸಿ. ತಂಗಾ ಶೇ.97 ಅಂಕಗಳನ್ನು ಗಳಿಸಿ ಮಿಂಚಿದರೆ, ವಿಜ್ಞಾನ ವಿಭಾಗದಲ್ಲಿ ಸೈಯದ್ ಪರ್ವೇಜ್ ಖಾದ್ರಿ ಶೇ.95 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಒಟ್ಟಾರೆ ಶೇ.100 ಫಲಿತಾಂಶದೊಂದಿಗೆ ಕಾಲೇಜು ಮತ್ತೊಮ್ಮೆ ತನ್ನ ಶಿಕ್ಷಣ ಗುಣಮಟ್ಟವನ್ನು ಸಾಬೀತುಪಡಿಸಿದೆ. ಈ ಸಾಧನೆಗೆ ಪ್ರಾಚಾರ್ಯರು ಹಾಗೂ ಉಪನ್ಯಾಸಕ ವೃಂದದವರ ಪರಿಶ್ರಮವೇ ಕಾರಣವಾಗಿದ್ದು, ಅವರ ಶ್ರಮ ಸಾರ್ಥಕವಾಗಿದೆ ಎಂದು ಡಾ. ಚಂದ್ರಪ್ಪ ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳ ಸಾಧನೆಗೆ ಪೋಷಕರು, ಶಿಕ್ಷಕರು ಹಾಗೂ ಕಾಲೇಜು ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದ್ದಾರೆ.

ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್