🟥 ಟಿ ಪಬ್ಲಿಕ್ ನ್ಯೂಸ್ ಕಾರಟಗಿ
ದಿನಾಂಕ : 13/05/2026
ಸಿದ್ದಾಪುರದಲ್ಲಿ ಬಿಇಒ ನಟೇಶ್‌ರ ದಾಳಿ – ಶಿಕ್ಷಣ ಮಾಫಿಯಾಗೆ ಕಠಿಣ ಎಚ್ಚರಿಕೆ
ಕಾರಟಗಿ: ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ “ಸ್ಪರ್ಧಾ ಚಂದನ” ಹಾಗೂ “ಶ್ರೀ ಗುರು” ಕೋಚಿಂಗ್ ಸೆಂಟರ್‌ಗಳ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್ ಅವರು ಕಠಿಣ ಕ್ರಮ ಕೈಗೊಂಡು ಬಂದ್ ಮಾಡಿದ್ದಾರೆ
ಈ ಹಿಂದೆ ಕಾರಟಗಿ ತಾಲೂಕಿಗೆ ಒಳಪಡುವ ಸಿದ್ದಾಪುರ ಗ್ರಾಮದಲ್ಲಿ 2026-27ನೇ ಸಾಲಿನ ಬೇಸಿಗೆ ರಜೆಯಲ್ಲಿ ಯಾವುದೇ ಅಧಿಕೃತ ಅನುಮತಿ ಪಡೆಯದೆ ವಸತಿ ಸಹಿತ ಹಾಗೂ ವಸತಿ ರಹಿತ ಕೋಚಿಂಗ್ ಸೆಂಟರ್ಗಳಾದ ಸ್ಪರ್ಧಾ ಚಂದನ ಹಾಗೂ ಶ್ರೀ ಗುರು ಕೋಚಿಂಗ್ ಸೆಂಟರ್ ಮುಚ್ಚುವ ಕುರಿತು ದಿನಾಂಕ :06/05/2026 ರಂದು ಮಹೇಶ ಟಿ ನಾಯಕ 2 ನೇ ವಾರ್ಡ್, ಉಡಮಕಲ್ ತಾಲೂಕು: ಗಂಗಾವತಿ ಜಿಲ್ಲೆ: ಕೊಪ್ಪಳ ಇವರು ದೂರು ನೀಡಿರುತ್ತಾರೆ ದೂರಿನ ಆಧಾರದ ಮೇಲೆ ದಿ:13/05/2026 ಬುದುವಾರದಂದು ಮುಂಜಾನೆ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್ ಅವರು ಸಿದ್ದಾಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.






ಪರಿಶೀಲನೆ ವೇಳೆ ಕೋಚಿಂಗ್ ಸೆಂಟರ್‌ಗಳು ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವುದು ಖಚಿತಗೊಂಡ ಹಿನ್ನೆಲೆಯಲ್ಲಿ ತಕ್ಷಣವೇ ಅವುಗಳನ್ನು ಬಂದ್ ಮಾಡಿದ್ದಾರೆ ಅಧಿಕಾರದ ಕಟ್ಟುನಿಟ್ಟಿನ ಸಂದೇಶ ರವಾನಿಸಿದರು.
ಸಾಮಾನ್ಯವಾಗಿ ದೂರುಗಳನ್ನು ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ನಡುವೆ, ದೂರು ಬಂದ ತಕ್ಷಣ ಸ್ಥಳಕ್ಕೆ ತೆರಳಿ ನೇರ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಂಡಿರುವ ನಟೇಶ್ ಅವರ ಕಾರ್ಯವೈಖರಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. “ಕಾನೂನಿಗಿಂತ ಯಾರೂ ದೊಡ್ಡವರಲ್ಲ” ಎಂಬುದನ್ನು ಅವರು ತಮ್ಮ ಕಾರ್ಯಾಚರಣೆಯ ಮೂಲಕ ಸಾಬೀತುಪಡಿಸಿದ್ದಾರೆ.
ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಭವಿಷ್ಯವನ್ನು ದುರುಪಯೋಗಪಡಿಸಿಕೊಳ್ಳುವ ಅನಧಿಕೃತ ಕೋಚಿಂಗ್ ದಂಧೆಗಾರರಿಗೆ ಇದು ಗಂಭೀರ ಎಚ್ಚರಿಕೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತು, ಪಾರದರ್ಶಕತೆ ಮತ್ತು ಕಾನೂನುಬದ್ಧತೆ ಕಾಪಾಡುವಲ್ಲಿ ನಟೇಶ್ ಅವರು ನಿಷ್ಠಾವಂತ ಹಾಗೂ ಪ್ರಾಮಾಣಿಕ ಅಧಿಕಾರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್ ಅವರ ದಿಟ್ಟ ಕ್ರಮವನ್ನು ಅಭಿನಂದಿಸಿ, ಇಂತಹ ಅನಧಿಕೃತ ಶಿಕ್ಷಣ ಸಂಸ್ಥೆಗಳ ವಿರುದ್ಧ ಮುಂದೆಯೂ ನಿರಂತರ ಕ್ರಮ ಕೈಗೊಳ್ಳಬೇಕೆಂದು ( ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ) ಮಹೇಶ ಟಿ ನಾಯಕ ಆಗ್ರಹಿಸಿದ್ದಾರೆ.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್
More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ