October 14, 2026

ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ

🟥 ಟಿ ಪಬ್ಲಿಕ್ ನ್ಯೂಸ್ | ಉಡಮಕಲ್
ದಿನಾಂಕ: 13/10/2026

ಗಂಗಾವತಿ: ತಾಲೂಕಿನ ಉಡಮಕಲ್ ಗ್ರಾಮದಲ್ಲಿ ಇಂದು ರಾಜವೀರ ಮದಕರಿ ನಾಯಕ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾಲಂಕಾರ ಮಾಡಿ, ಹೂವಿನ ಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ನಂತರ ಮಾತನಾಡಿದ ಗ್ರಾಮದ ಹಿರಿಯರಾದ ತಿಪ್ಪಣ್ಣ ಬುನ್ನಟ್ಟಿ, ರಾಜವೀರ ಮದಕರಿ ನಾಯಕರು ಧೈರ್ಯ, ಸಾಹಸ ಮತ್ತು ಹೋರಾಟಕ್ಕೆ ಹೆಸರಾದ ಮಹಾನ್ ವೀರರು. ಅವರು ತಮ್ಮ ನಾಡು ಮತ್ತು ಜನರ ರಕ್ಷಣೆಗಾಗಿ ಹೋರಾಡಿದ ಧೀರ ನಾಯಕರು. ಅವರ ಜೀವನ ನಮಗೆ ಧೈರ್ಯ, ಸ್ವಾಭಿಮಾನ ಮತ್ತು ನಾಡಿನ ಮೇಲಿನ ಪ್ರೀತಿಯನ್ನು ಕಲಿಸುತ್ತದೆ. ಇಂತಹ ಮಹಾನ್ ವೀರರ ಇತಿಹಾಸವನ್ನು ಇಂದಿನ ಯುವಜನರು ತಿಳಿದುಕೊಂಡು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಲಯಪ್ಪ ಕಂಕಿ , ಬಸವನಗೌಡ, ಶೇಖರ್ ಭಜಂತ್ರಿ, ನಾಗರಾಜ್ ದಳಪತಿ, ಶರಣಪ್ಪ ಮರಳಿ, ನಿಂಗನಗೌಡ, ದುರುಗೇಶ ಗೌರಿಪುರ, ಶರಣಪ್ಪ ಬೂದಿ , ಮಂಜು ಮರಳಿ PG, ಪರಶುರಾಮ್ ಹುಳ್ಕಿಹಾಳ, ಬಸವರಾಜ ತಳವಾರ , ಹನುಮೇಶ್ ಮರಳಿ, ಲಿಂಗರಾಜ ನೀರುಳ್ಳಿ, ದುರುಗೇಶ ಕಂದಕೂರ, ಬಸವರಾಜ ನೀರುಳ್ಳಿ, ಮಾಜಿ ಮೆಂಬರ್ ನಾಗರಾಜ ಕರಡೋಣಿ, ಮುದಿಯಪ್ಪ ಹರಿಜನ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!