October 16, 2026

ಕಬಡ್ಡಿಯಲ್ಲಿ ಉಡಮಕಲ್ ಶಾಲೆಯ ವಿದ್ಯಾರ್ಥಿಗಳ ಸಾಧನೆ: ಗ್ರಾಮದಲ್ಲಿ ಅದ್ಧೂರಿ ಸ್ವಾಗತ

filter: 2205; fileterIntensity: 0.0; filterMask: 0; captureOrientation: 0; runfunc: 0; algolist: 0; multi-frame: 1; brp_mask:8; brp_del_th:0.0169,0.0004; brp_del_sen:0.1000,0.1000; motionR: 0; delta:1; bokeh:1; module: photo;hw-remosaic: false;touch: (0.22712944, 0.2975335);sceneMode: 7864320;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 40;zeissColor: film;

ಗಂಗಾವತಿ: ತಾಲೂಕು, ಜಿಲ್ಲಾ ಮಟ್ಟದಲ್ಲಿ ಜಯಭೇರಿ; ಬಳ್ಳಾರಿ ವಿಭಾಗ ಮಟ್ಟಕ್ಕೆ ಉಡಮಕಲ್ ಶಾಲೆಯ ಕಬಡ್ಡಿ ತಂಡ ಆಯ್ಕೆ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 10/10/2026

ಗಂಗಾವತಿ: ತಾಲೂಕಿನ ಉಡಮಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಬಡ್ಡಿ ಪಂದ್ಯಾವಳಿಯಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ, ಬಳ್ಳಾರಿಯಲ್ಲಿ ನಡೆಯಲಿರುವ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಗಳು ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದ ಗುರುಹಿರಿಯರು, ಯುವಕರು ಹಾಗೂ ಕ್ರೀಡಾಪ್ರೇಮಿಗಳು ಹೂಗಳನ್ನು ಎರಚಿ, ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವಿದ್ಯಾರ್ಥಿಗಳ ಸಾಧನೆಯನ್ನು ಸಂಭ್ರಮದಿಂದ ಕೊಂಡಾಡಿದರು.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶಿಸ್ತು ಹಾಗೂ ತಂಡದ ಒಗ್ಗಟ್ಟಿನ ಮೂಲಕ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ಗ್ರಾಮಸ್ಥರಲ್ಲಿ ಹೆಮ್ಮೆಯ ವಾತಾವರಣ ಮೂಡಿಸಿದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರು ಹಾಗೂ ಪ್ರೋತ್ಸಾಹ ನೀಡಿದ ಹಳೆಯ ವಿದ್ಯಾರ್ಥಿಗಳ ಕೊಡುಗೆಯನ್ನು ಗ್ರಾಮಸ್ಥರು ಕೃತಜ್ಞತೆಯಿಂದ ಸ್ಮರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದೈಹಿಕ ಶಿಕ್ಷಕ ಯಮನೂರ ಭಜಂತ್ರಿ,ಗ್ರಾಮದ ಹಿರಿಯರು ಹಾಗೂ ಕ್ರೀಡಾಪ್ರೇಮಿಗಳು, ವಿದ್ಯಾರ್ಥಿಗಳು ಇದೇ ರೀತಿಯ ಪರಿಶ್ರಮ ಮತ್ತು ಒಗ್ಗಟ್ಟಿನಿಂದ ಮುನ್ನಡೆದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗ್ರಾಮದ ಕೀರ್ತಿ ಬೆಳಗಿಸಬೇಕು. ಅವರ ಪ್ರತಿಭೆಗೆ ಅಗತ್ಯ ಪ್ರೋತ್ಸಾಹ ಮತ್ತು ಮಾರ್ಗದರ್ಶನ ದೊರೆಯಬೇಕು ಎಂದು ಆಶಿಸಿದರು.

*ಸಾಧನೆ ಮಾಡಿದ ವಿದ್ಯಾರ್ಥಿಗಳು*
ತಂಡದ ನಾಯಕ ಪ್ರಶಾಂತ ತಳವಾರ್ ಸೇರಿದಂತೆ ಬೂಡ್ನೆ ಸಾಬ್, ರಮೇಶ್ ಭಜಂತ್ರಿ, ದುರ್ಗೇಶ್ ತಳವಾರ್, ಸಮರ್ಥ ಈಡಿಗ, ರಾಜ ಹುಸೇನ್, ಕುಮಾರ್ ಭಜಂತ್ರಿ, ಅಜಯ್ ಕೋರಿ, ನಾಗರಾಜ್ ಭೋವಿ, ಪವನ್, ರಾಜು, ಅಜಯ್ ಕಮತ್ಗಿ ಹಾಗೂ ಕನಕ ಅವರು ತಂಡದಲ್ಲಿದ್ದಾರೆ.

ಈ ಸಂದರ್ಭದಲ್ಲಿ ಜಡಿಯಪ್ಪ ಬೋವಿ, ಮರಿಯಪ್ಪ ಭಜಂತ್ರಿ, ಯಮನೂರ ನಾಯಕ್, ರವಿ ಈಡಿಗ, ಪರಶುರಾಮ್ ತಳವಾರ್, ಕಂಕಿ ಯಮನೂರು, ಮುದಿಯಪ್ಪ ಈಡಿಗ, ಸಂಡೂರು ಶರಣಪ್ಪ, ಯಂಕಪ್ಪ ಬೋವಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಹಾಗೂ ಕ್ರೀಡಾಪ್ರೇಮಿಗಳು ಉಪಸ್ಥಿತರಿದ್ದರು.

ಬಳ್ಳಾರಿಯಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿಯೂ ಉಡಮಕಲ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಮತ್ತಷ್ಟು ಸಾಧನೆ ಮಾಡಲಿ ಎಂದು ಗ್ರಾಮಸ್ಥರು ಶುಭ ಹಾರೈಸಿದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!