ಭಾರತದಲ್ಲಿ ಬಳಸಲಾಗುತ್ತಿರುವ ಖಾದ್ಯ ತೈಲದ ಶೇ 70 ರಷ್ಟು ಭಾಗ ಆಮದು ಮಾಡಿಕೊಳ್ಳಲಾಗುತ್ತದೆ. ಇದರ ಬದಲಾಗಿ ಎಣ್ಣೆಕಾಳುಗಳ ಬೆಳೆಯುವ ಕ್ಷೇತ್ರವನ್ನು ಹೆಚ್ಚಿಸಿ ರೈತರ ಆದಾಯವನ್ನು ಮತ್ತು ದೇಶದ ಖಾದ್ಯ ತೈಲ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಕೃಷಿ ಇಲಾಖೆ ರೈತರಿಗೆ ಅರಿವು ಮೂಡಿಸಿ ಪ್ರಮುಖ ಎಣ್ಣೆಕಾಳು ಬೆಳೆಯದ, ಶೇಂಗಾ ಬೆಳೆಯ ಬಿತ್ತನೆ ಪ್ರದೇಶ ಹೆಚ್ಚಿಸಿದೆ

ಆದರೆ ಡಿಸೆಂಬರ ತಿಂಗಳು ವಾತಾವರಣದಲ್ಲಿ ಕಡಿಮೆ ಉಷ್ಣಾಂಶ ಇರುವುದರಿಂದ ಶೇಂಗಾ ಬೆಳೆಯಲ್ಲಿ ಹೆಚ್ಚಿನ ಮತ್ತು ಕಂಡುಬಂದಿರುವುದರಿಂದ ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ವೆಂಕಟಗಿರಿ ಹೋಬಳಿಯ ಆಗೋಲಿ, ವಿಠಲಾಪೂರ ಮತ್ತು ಹಂಪಸದುರ್ಗ ಗ್ರಾಮದ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಶೇಂಗಾ ಬೆಳೆಯಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆ ಕ್ರಮಗಳನ್ನು ತಿಳಿಸಿದರು
• ರೋಗ ಭಾದೆ
ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ಶಾಸ್ತ್ರದ ವಿಜ್ಞಾನಿಗಳಾದ ರೇವತಿ ಇವರು ಶೇಂಗಾ ಬೀತ್ತನೆ ಪೂರ್ವದಲ್ಲಿ ಟ್ರೈಕೋಡರ್ಮ ಮತ್ತು ಸುಡೋಮೋನಸ್ 5 ಗ್ರಾಂ ಪ್ರತಿ ಕೆ.ಜಿ ಶೇಂಗಾ ಬೀಜಕ್ಕೆ ಬೀಜೋಪಚಾರ ಮಾಡುವದರಿಂದ ಬೀಜದ ಮೂಲಕ ಬರುವ ರೋಗಗಳನ್ನು ತಡೆಗಟ್ಟಬಹುದು. ಶೇಂಗಾ ಬೆಳೆಯಲ್ಲಿ ಪ್ರಮುಖವಾಗಿ ಬುಡ ಕೊಳೆ ಮತ್ತು ಮೊಗ್ಗು ಕೊಳೆ ರೋಗ ಕಾಣಿಸಿಕೊಂಡಿದ್ದು ಮೊಗ್ಗು ಕೊಳೆ ರೋಗ ವೈರಸ್‌ನಿಂದ ಬರುವ ರೋಗವಾಗಿದ್ದು, ನುಸಿಗಳ ಮೂಲಕ ಹರಡುತ್ತದೆ,
ಥಯೋಮೆಥಾಕೋಮ್ 25% ಡಬ್ಲ್ಯು.ಜಿ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೇರಸಿ ಸಿಂಪಡಿಸಿದರೆ ನುಸಿಗಳಿಂದ ಹರಡುವ ಈ ರೋಗವನ್ನು ಹತೋಟಿಯಲ್ಲಿಡಬಹುದು. ಅಲ್ಪ ಪ್ರಮಾಣದಲ್ಲಿ ಎಲೆ ಚುಕ್ಕೆ ರೋಗ ಕಂಡುಬಂದಿದ್ದು ಕಾರ್ಬೆಂಡೈಜಿಮ್ 63% + ಮ್ಯಾಂಕೋಜೆಬ್ 12% ಡಬ್ಲ್ಯು.ಪಿ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಿದರೆ ಎಲೆ ಚುಕ್ಕೆ ರೋಗ ಹತೋಟಿ ಮಾಡಬಹುದು ಮತ್ತು ಎಲೆ ತಿನ್ನುವ ಕೀಟವನ್ನು ಪ್ರತಿ ಲೀಟರ್ ನೀರಿಗೆ 0.4 ಗ್ರಾಂ ಇಮಾಮೆಕ್ಟಿನ್ ಬೆಂಜೋಯೆಟ್ ಅಥವಾ 2 ಎಮ್.ಎಲ್ ಕ್ವಿನಾಲ್ ಫಾಸ್ ಬೆರಸಿ ಸಿಂಪಡಿಸಿದರೆ ಕೀಟದ ಭಾದೆ ಕಡಿಮೆಯಗುತ್ತದೆ ಎಂದು ಮಾಹಿತಿ ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರದ ವಿಜ್ಞಾನಿಗಳಾದ ಡಾ// ಮಲ್ಲೇಶ ಇವರು ಶೇಂಗಾ ಬೆಳೆಯಲ್ಲಿ ಇಳುವರಿ ಹೆಚ್ಚಿಸಲು ಅನುಸರಿಸಬೇಕಾದ ಬೇಸಾಯ ಕ್ರಮಗಳಾದ ಸಾವಯವ ಗೊಬ್ಬರದ ಜೋತೆ ಟ್ರೈಕೋಡರ್ಮ ಬಳಕೆ, ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ ಇರಬೇಕಾದ ಅಂತರದ ಬಗ್ಗೆ, ಹೂವಾಡುವ ಅಂತದಲ್ಲಿ ಜಿಪ್ಸಮ್ ಗೊಬ್ಬರದ ಬಳಕೆ, ರಸಗೊಬ್ಬರ ಮತ್ತು ಲಘುಪೋಷಕಾಂಶದ ಬಳಕೆ ಮತ್ತು ನಿರ್ವಹಣೆಯ ಬಗ್ಗೆ ಮಾಹಿತಿ ಕೊಟ್ಟರು.
ಡಾ// ಅಭಿಲಾಷ ಸಿ ಆರ್ ಸಹಾಯಕ ಕೃಷಿ ನಿರ್ದೇಶಕರು, ಗಂಗಾವತಿ. ಇವರು ವಾತಾವರಣದಲ್ಲಿ ಕಡಿಮೆ ಉಷ್ಣಾಂಶ ಇರುವುದರಿಂದ ಶೇಂಗಾ ಬೆಳೆಯಲ್ಲಿ ಮೊಗ್ಗು ಉದುರುವುದು ಕಂಡುಬಂದಿದ್ದು 0.25 ಮಿ.ಲೀ ಫ್ಲಾನೋಫಿಕ್ಸ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ ಮತ್ತು ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಶೇಂಗಾ ಬೆಳೆಯನ್ನು ಬೆಳೆಯಿರಿ ಎಂದು ತಿಳಿಸಿದರು ಈ ಸಂದರ್ಭದಲ್ಲಿ ವೆಂಕಟಗಿರಿ ಹೋಬಳಿಯ ಕೃಷಿ ಅಧಿಕಾರಿಗಳಾದ, ಹರೀಶ್ ಎಸ್ ಜಿ, ರೈತರಾದ ಮಂಜು, ಪಂಪಾಪತಿ, ಶಶಿಭೂಷಣ, ಇನ್ನೂ ಇತರ ಇದ್ದರು
More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ