ಗಂಗಾವತಿ ನಗರದ ವಾಲ್ಮೀಕಿ ಸರ್ಕಲ್ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಮಹರ್ಷಿ ಶ್ರೀ ವಾಲ್ಮೀಕಿ ನಾಯಕ ಸಮಾಜದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ವೀರಭದ್ರಪ್ಪ ನಾಯಕ ಮಾತನಾಡಿ 2026 ರ ಶ್ರೀ ಮಠದ 28 ನೇ ವಾರ್ಷಿಕೋತ್ಸವ ಹಾಗೂ ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮಿಯವರ 19 ನೇ ವರ್ಷದ ಪುಣ್ಯರಾಧನೆ, ಮತ್ತು ಜಗದ್ಗುರು ಡಾಕ್ಟರ್ ಶ್ರೀ ಪ್ರಸನ್ನಾನಂದ ಮಹಾ ಸ್ವಾಮೀಜಿಯವರ 18ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ, ಹಾಗೂ ಫೆಬ್ರುವರಿ 8 ಮತ್ತು 9 ನೇ ತಾರೀಕಿನಂದು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಹರಿಹರ ದಾವಣಗೆರೆ ವಾಲ್ಮೀಕಿ ಸಮುದಾಯದ ಜನ ಜಾಗೃತಿ ಗಾಗಿ ನಡೆಯುವ 8 ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಎಲ್ಲರೂ ಭಾಗಿಯಾಗಿ ಎಂದರು
ಗಂಗಾವತಿ ನಗರಸಭೆ ಮಾಜಿ ಅಧ್ಯಕ್ಷ ಬಸಪ್ಪ ನಾಯಕ ಇವರನ್ನು ಶ್ರೀ ಮಹರ್ಷಿ ವಾಲ್ಮೀಕಿ ರಾಜನಹಳ್ಳಿ ಗುರುಪೀಠದ ತಾಲೂಕ ಧರ್ಮದರ್ಶಿಗಳೆಂದು ಶ್ರೀಗಳು ಆಯ್ಕೆ ಮಾಡಿದರು ಈ ಸಂದರ್ಭದಲ್ಲಿ ಸಮಾಜದ ಗುರುಹಿರಿಯರು ಸನ್ಮಾನಿಸಿದರು ನಂತರ ಮಾತನಾಡಿ ನಮ್ಮ ಸಮಾಜದ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದರು
ಈ ಸಂದರ್ಭದಲ್ಲಿ ಗಂಗಾವತಿ ನಗರದ ವಾಲ್ಮೀಕಿ ಸಮಾಜದ ಗುರುಹಿರಿಯರು ಭಾಗಿಯಾಗಿದ್ದರು
2026 ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ ಅಂಗವಾಗಿ ಪೂರ್ವಭಾವಿ ಸಭೆ
More Stories
ಮಳೆ-ಬೆಳೆಯಿಗಾಗಿ ಮಲ್ಲಾಪುರ ಗಾಳೆಮ್ಮ ದೇವಿಯ ವಿಶೇಷ ಆರಾಧನೆ
“ದಲಿತ ನಾಯಕರಿಗೆ ನ್ಯಾಯ ಕೊಡದಿದ್ದರೆ ಕಾಂಗ್ರೆಸ್ಗೆ ಜನತೆ ತಕ್ಕ ಪಾಠ ಕಲಿಸುತ್ತದೆ: ಕೆ.ಎಚ್.ಮುನಿಯಪ್ಪ ಡಿಸಿಎಂ ಆಗಲಿ ಎಂದು ನಾಗರಾಜ ದೊಡ್ಮನಿ ಆಗ್ರಹ”
“22 ವರ್ಷಗಳ ಅಕ್ರಮ ಮದ್ಯ ಮಾರಾಟಕ್ಕೆ ಅಧಿಕಾರಿಗಳೂ ಶಾಮೀಲು? — ಅಜಯ್ ಬಾರ್ ಮಾಲೀಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ”