August 30, 2026

ಕಿತ್ತೂರು ರಾಣಿ ಚೆನ್ನಮ್ಮ ಯುವಕ ಸಂಘದ ವತಿಯಿಂದ 77 ನೇ ಗಣರಾಜ್ಯೋತ್ಸವ ಆಚರಣೆ

ಕನಕಗಿರಿ ತಾಲೂಕು ವ್ಯಾಪ್ತಿಯ ಚಿಕ್ಕಮಾದಿನಾಳ ಗ್ರಾಮದಲ್ಲಿ  ಕಿತ್ತೂರು ರಾಣಿ ಚೆನ್ನಮ್ಮ ಯುವಕ ಸಂಘದ ವತಿಯಿಂದ 77 ನೇ  ಗಣರಾಜ್ಯೋತ್ಸವದ ದ್ವಜಾರೋಹಣ  ನೆರವೇರಿಸಲಾಯಿತು

ದೇಶಾದ್ಯಂತ ಆಚರಿಸುವ ಹಬ್ಬ ನಾಡ ಹಬ್ಬ ಅದುವೇ ಗಣರಾಜ್ಯೋತ್ಸವ 77 ನೇ ಗಣರಾಜ್ಯೋತ್ಸವದ ನಿಮಿತ್ತವಾಗಿ  ಶಾಲಾ ವಿದ್ಯಾರ್ಥಿಗಳು  ಹಾಗೂ ಗ್ರಾಮದ ಗಣ್ಯ ವ್ಯಕ್ತಿಗಳು  ಮತ್ತಿತರರು   ಸೇರಿಕೊಂಡು ತುಂಬಾ ವಿಜೃಂಭಣೆಯಿಂದ ದ್ವಜಾರೋಹಣ ಆರಿಸಲಾಯಿತು

ಈ ಸಂದರ್ಭದಲ್ಲಿ, ಅಧ್ಯಕ್ಷರಾದ,ವಿರುಪಾಕ್ಷಿ, ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು, ಮತ್ತು ಸರಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ  ಶಿಕ್ಷಕರು, ವಿದ್ಯಾರ್ಥಿಗಳು ಊರಿನ ಯುವಕರು ಪಾಲ್ಗೊಂಡಿದ್ದರು