ಟಿ ಪಬ್ಲಿಕ್ ನ್ಯೂಸ್, ಮಾ.03
ಗಂಗಾವತಿ, ನಗರಸಭೆಯ ಮಾಜಿ ಅಧ್ಯಕ್ಷರಾದ ಶ್ರೀ ಕೆ. ವೆಂಕಟೇಶ ಅವರ ಪುತ್ರ ಚಿ. ಕೆ. ಚೇತನಕುಮಾರ ಅವರ ವಿವಾಹವು ಚಿರಂಜೀವಿ ಕುಂಕುಮ ಸೌಭಾಗ್ಯ ಸಾನಿಕ ಅವರೊಂದಿಗೆ ದಿ 13-2-2026 ರಂದು ಶ್ರೀ ಚನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಿತು.
ಕಾಗಿನೆಲೆಯ ಕನಕಗುರುಪೀಠದ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಬಸಾಪಟ್ಟಣದ ಗುರುವಿನಮಠ ಶ್ರೀ ಸಿದ್ಧರಾಮಯ್ಯ ತಾತನವರು ಹಾಗೂ ಶ್ರೀ ಸಿದ್ದಯ್ಯ ತಾತನವರು ವಿವಾಹ ಮಹೋತ್ಸವಕ್ಕೆ ಆಗಮಿಸಿ ನೂತನ ದಂಪತಿಗಳಿಗೆ ಶುಭ ಹಾರೈಸಿದರು.



ಕಾರ್ಯಕ್ರಮಕ್ಕೆ ಮಾಜಿ ಸಂಸದರಾದ ಶ್ರೀ ಕೆ. ವಿರೂಪಾಕ್ಷಪ್ಪ ಸಿಂಧನೂರು, ಕೊಪ್ಪಳದ ಶಾಸಕರಾದ ಶ್ರೀ ರಾಘವೇಂದ್ರ ಹಿಟ್ನಾಳ, ಕೊಪ್ಪಳದ ಸಂಸದ ಶ್ರೀ ರಾಜಶೇಖರ ಹಿಟ್ನಾಳ, ಮಾಜಿ ಸಚಿವ ಶ್ರೀ ನಾಗಪ್ಪ ಸಾಲೋಣ. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಶ್ರೀ ಸಂಗಣ್ಣ ಕರಡಿ, ರಾಜವಂಶಸ್ಥೆ ಶ್ರೀಮತಿ ಲಲಿತಾ ರಾಣಿ ಶ್ರೀರಂಗದೇವರಾಯಲು, ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀ ಎಚ್.ಆರ್. ಶ್ರೀನಾಥ, ಜಿ.ಪಂ. ಮಾಜಿ ಸದಸ್ಯ ಶ್ರೀ ರಾಜು ಗದ್ದಿಮಠ, ವಾಲ್ಮೀಕಿ-ನಾಯಕ ಸಮಾಜದ ಹಿರಿಯ ಧುರೀಣ ಶ್ರೀ ಜೋಗದ ನಾರಾಯಣಪ್ಪ ನಾಯಕ, ಜೋಗದ ಹನುಮಂತಪ್ಪ ನಾಯಕ, ಶ್ರೀ ವೀರಭದ್ರಪ್ಪ ನಾಯಕ, ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀ ನೆಕ್ಕಂಟಿ ಸೂರಿಬಾಬು, ಪ್ರಥಮ ದರ್ಜೆ ಗುತ್ತಿಗೆದಾರರಾದ ಹೇರೂರಿನ ಶ್ರೀ ವೀರಯ್ಯಸ್ವಾಮಿ ಹಿರೇಮಠ, ಕೊಪ್ಪಳ ನೇಕಾರ ಒಕ್ಕೂಟದ ಜಿಲ್ಲಾಧ್ಯಕ್ಷ ಶ್ರೀ ಕಾಳಪ್ಪ, ಬಿಜೆಪಿ ಧುರೀಣರಾದ ಸಿಂಧನೂರಿನ ಶ್ರೀ ಕೆ ಕರಿಯಪ್ಪ, ಹಿರೇಮನ್ನಾಪುರದ ಶ್ರೀಮತಿ ರೇಣುಕಮ್ಮ ಮಹಾಂತೇಶ ವಂದಾಲಿ ಟಿಎಪಿಸಿಎಂಎಸ್ ಸದಸ್ಯ ಶ್ರೀ ಈ ನಾಗರಾಜ, ತುಂಗಭದ್ರಾ ಕಾಡ ಮಾಜಿ ಅಧ್ಯಕ್ಷ ಶ್ರೀ ತಿಪ್ಪೇರುದ್ರಸ್ವಾಮಿ, ವಾಣಿಜ್ಯೋಮದ್ಯಮಿ ಗಳಾದ ಶ್ರೀ ಸಾಗರ ಮುನವಳ್ಳಿ, ರವೀಂದ್ರ, ಸರ್ವೆಶ್ ಸೇರಿದಂತೆ ಅನೇಕ ಗಣ್ಯರು ಶ್ರೀ ಕೆ. ವೀಣಾ, ಕೆ ವೆಂಕಟೇಶ, ಹಾಗೂ ಹನುಮನಹಟ್ಟಿ ಮಂಜಮ್ಮ ಮಂಜುನಾಥ ಕಲ್ಕುಡಿ ಕುಟುಂಬದ ಬಂಧುಗಳು, ಸ್ನೇಹಿತರು ಆಪ್ತರು ಆಗಮಿಸಿ ನೂತನ ದಂಪತಿಗಳಿಗೆ ಅಕ್ಷತೆ ಹಾಕಿ ಶುಭಹಾರೈಸಿದರು.
ನೈಜ ಸುದ್ದಿಗಳಿಗಾಗಿ ನೋಡ್ತಾ ಇರಿ ಟಿ ಪಬ್ಲಿಕ್ ನ್ಯೂಸ್
More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ