ಟಿ ಪಬ್ಲಿಕ್ ನ್ಯೂಸ್
ದಿ: 21/03/2026
ಗಂಗಾವತಿ: ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ (ರಿ) ಇದರ ಸಹಯೋಗದಲ್ಲಿ ರಾಜ್ಯದಲ್ಲಿ ಒಳಮೀಸಲಾತಿ ರೋಸ್ಟರ್ ಹಂಚಿಕೆಯನ್ನು ವಿರೋಧಿಸಿ ಹಾಗೂ ಹಳೆಯ ಮೀಸಲಾತಿ ನಿಯಮದಂತೆ ತ್ವರಿತವಾಗಿ ನೇಮಕಾತಿ ನಡೆಸಲು ಒತ್ತಾಯಿಸಿ ಮಾರ್ಚ 24 ರಂದು ಬೆಂಗಳೂರಿನ ಫ್ರೀಡಂ ಪಾರ್ಕದಲ್ಲಿ ಚಲೋ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ
ರಾಜ್ಯ ಸರ್ಕಾರದ ವಿವಿಧ ಯುನಿವರ್ಸಿಟಿ, ಪ್ರಾಧಿಕಾರ ಮತ್ತು ಕೆಲ ಇಲಾಖೆಗಳ ನೇಮಕಾತಿ ಅಧಿಸೂಚನೆಯಲ್ಲಿ ಪರಿಶಿಷ್ಠ ಜಾತಿಗಳ ಪ್ರವರ್ಗ ಬಿ ಮತ್ತು ಪ್ರವರ್ಗ ಸಿ ಗುಂಪಿಗೆ ಶೂನ್ಯ ಹುದ್ದೆಗಳನ್ನು ಹಂಚಿಕೆ ಮಾಡಲಾಗಿತ್ತು. ಒಳ ಮೀಸಲಾತಿ ಎಷ್ಟೊಂದು ಅನ್ಯಾಯ ಮತ್ತು ಆಪ್ರಾಯೋಗಿಕ ಎಂಬುದು ಜಗಜ್ಜಾಹೀರು ಆಗಿದೆ. ಈ ಘೋರ ಅನ್ಯಾಯ ಖಂಡಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ (ರಿ) ರಾಜ್ಯ ಸಮಿತಿಯ ನೇತೃತ್ವದಲ್ಲಿ ನಾಡಿನ ಬಂಜಾರು, ಭೋವಿ, ಕೊರಮ: ಕೊರಚ ಛಲವಾದಿ, ಚರ್ಮಕಾರದಂಥ ಸೂಕ್ಷ್ಮ ಪರಿಶಿಷ್ಟ ಜಾತಿಗಳ ಸಂಘ ಸಂಸ್ಥೆಗಳ ಸಹಯೋಗ ದೊಂದಿಗೆ ಮಾರ್ಚ 24 ರಂದು ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು. ಗಂಗಾವತಿ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.ನಂತರ ಮಾತನಾಡಿ ಎಲ್ಲಾ ಜನಾಂಗ ಸಮುದಾಯದವರು ಭಾಗವಹಿಸಬೇಕೆಂದು ಭೋವಿ ಸಮಾಜದ ತಾಲೂಕ ಅಧ್ಯಕ್ಷ ಗಾಳೆಪ್ಪ ಭೋವಿ ಜಿಲ್ಲಾ ಮಹಿಳಾ ಅಧ್ಯಕ್ಷ ಪುಷ್ಪಾಂಜಲಿ ಗುನ್ನಾಲ್ ಕರೆ ನೀಡಲಾಯಿತು


ಇವರ ಪ್ರಮುಖ ಹಕ್ಕೊತ್ತಾಯಗಳೆಂದರೆ
1. ಹಳೆಯ ಮೀಸಲಾತಿಯ ನಿಯಮ ಶೇ.50 ರನ್ವಯ ನೇಮಕಾತಿ ಮತ್ತು ಶೈಕ್ಷಣಿಕ ಪ್ರದೇಶ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಣೆ ಮಾಡಿರುವುದು ಸ್ವಾಗತಾರ್ಹ. ತ್ವರಿತವಾಗಿ ನೇಮಕಾತಿ ಅಧಿಸೂಚನೆ ಹೊರಡಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಬೇಕು.
2. ದೇಶವ್ಯಾಪಿ ನಡೆಯುತ್ತಿರುವ ಜನಗಣತಿಯ ಸಮಗ್ರ ದತ್ತಾಂಶ ಬರುವವರೆಗೆ ಒಳ ಮೀಸಲಾತಿ ಕುರಿತು ಏಕ ಪಕ್ಷೀಯ ನಿರ್ಧಾರ ಮಾಡಬಾರದು.ರಾಜ್ಯದಲ್ಲಿ ಒಳ ಮೀಸಲಾತಿ ಹಂಚಿಕೆಯ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ನಮ್ಮ ಸಮುದಾಯಗಳ ಮುಖಂಡರ ಜೊತೆಗೆ ಸಮಾಲೋಚನಾ ಸಭೆ ನಡೆಸಬೇಕು
3. ಪರಿಶಿಷ್ಟ ಜಾತಿ (17%) ಮತ್ತು ಪರಿಶಿಷ್ಟ ಪಂಗಡಗಳ (7%) ಮೀಸಲಾತಿ ಯನ್ನು ಹೆಚ್ಚಳ ಮಾಡಿರುವ ಆದೇಶವನ್ನು ಸಂವಿಧಾನದ 9ನೇ ಪೆಡ್ಯೂಲ್‌ನಲ್ಲಿ ಸೇನ ಮನವರಿಕೆ ಮಾಡಿಕೊಡಲು ಪ್ರಧಾನಿಗಳ ಬಳಿ ನಿಯೋಗ ತೆರಳಿ ಕೇಂದ್ರ ಸರ್ಕಾರದ ಮನವೊಲಿಸಲು ರಾಜ್ಯ ಸರ್ಕಾರವು ಶ್ರಮಿಸಬೇಕು.
4. ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯ ಅಂಕಿ ಅಂಶಗಳ ಅಸ್ಪಷ್ಟ ಮತ್ತು ಸಾಲು ಸಾಲು ತಪ್ಪುಗಳಿಂದ ಕೂಡಿದಂತೆ ಭಾಸವಾಗುತ್ತಿದೆ. ತಕ್ಷಣ ಈ ಸಮೀಕ್ಷೆಯ ತಾಲ್ಲೂಕುವಾರು ಸಮಗ್ರದತ್ತಾಂತ, ಮಾಹಿತಿಗಳನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಬೇಕು.
5. ಶಿಕ್ಷಣ ಪ್ರವೇಶ, ಹಾಸ್ಟೆಲ್ ಪ್ರವೇಶ ಮತ್ತು ಉದ್ಯೋಗ ನೇಮಕಾತಿ ಕುರಿತು ಇತ್ತೀಚೆಗೆ ಹೊರಡಿಸಿರುವ ಎಲ್ಲಾ ರೋಸ್ಟರ್ ಹಂಚಿಕೆ ಆದೇಶ, ಸುತ್ತೋಲೆಗಳನ್ನು ಹಿಂಪಡೆಯಬೇಕು. ಈಗ ಹೊರಡಿಸಿರುವ ಅನೇಕ ನೇಮಕಾತಿ ಅಧಿಸೂಚನೆಗಳನ್ನು ರದ್ದುಗೊಳಿಸಬೇಕು. ಪರಿಶಿಷ್ಟ ಜಾತಿ, ಪ್ರವರ್ಗ ಎ.ಬಿ,ಸಿ ಎಂದು ನಮೂದಿಸಿ ನೀಡಲಾಗಿರುವ ಜಾತಿ ಪ್ರಮಾಣಪತ್ರಗಳನ್ನು ಹಿಂಪಡೆಯಬೇಕು. ಹಳೆಯ ಜಾತಿ ಪ್ರಮಾಣ ಪತ್ರಗಳನ್ನು ಪರಿಗಣಿಸಬೇಕು
6. ಪರಿಶಿಷ್ಯರಿಗೆ ಮೀಸಲಾಗಿರುವ R°Q/RRQ ಅನುದಾನವನ್ನು ಅನ್ಯಯೋಜನೆಗಳಿಗೆ ವರ್ಗಾವಣೆ ತಡೆಗಟ್ಟಲುಕಾನೂನು ತಿದ್ದುಪಡಿ ಮಾಡಬೇಕು.ಯಾರದೊ ಒತ್ತಡಕ್ಕ ಮಣಿದು ಆಪ್ರಾಯೋಗಿಕವಾಗಿರುವ ಈ ಒಳ ಮೀಸಲಾತಿ ಏಕಪಕ್ಷೀಯವಾಗಿ ವರ್ಗೀಕರಣ ಮಾಡಬಾರದು. ಮೂಲ ಮೀಸಲಾತಿಯ ಸಂರಕ್ಷಣೆಗಾಗಿ ನಾಡಿನ ಬಂಜಾರ, ಭೋವಿ, ಚರ್ಮಕಾರ, ಸಮಾಗಾರ, ಕೊರಮ,ಕೊರಚ, ಬಲಗೈ ಛಲವಾದಿ, ಅಲೆಮಾರಿಗಳಂಥ ಸೂಕ್ಷ್ಮ ಸಮುದಾಯಗಳು ಜಂಟಿಯಾಗಿ ಆಯೋಜಿಸಿರುವ ಐತಿಹಾಸಿಕ ಹೋರಾಟದಲ್ಲಿ ಎಲ್ಲಾ ಗ್ರಾಮ, ತಾಲೂಕು, ಜಿಲ್ಲೆಯ ಬಂಧುಗಳು ಭಾಗವಹಿಸುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ
ಈ ಸಂದರ್ಭದಲ್ಲಿ ಕನಕಗಿರಿ ಅಧ್ಯಕ್ಷ ಭೋಜಪ್ಪ, ಕಾರಟಗಿ ಅಧ್ಯಕ್ಷ ಪಂಪಾಪತಿ, ಸೇರಿದಂತೆ ರವಿ,ಹನುಮಂತಪ್ಪ ಗುತ್ತೇದಾರ್, ಹುಲಿಗೇಶ ಬಂಡಿ, ವೆಂಕಟೇಶ್ ರಾಂಪುರ್, ಸೋಮಪ್ಪ ಸಾಯಿ ನಗರ, ಈರಪ್ಪ ಕಟ್ಟಿಮನಿ, ಮಣಿಕಂಠ, ರಾಘವೇಂದ್ರ,ಸೇರಿದಂತೆ ಇತರರು ಹೇಳಿದರು
ನೈಜ್ಯ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್
More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ