ಟಿ ಪಬ್ಲಿಕ್ ನ್ಯೂಸ್
ದಿ: 21/03/2026
ಗಂಗಾವತಿ: ಕಳೆದೊಂದು ತಿಂಗಳಿನಿಂದ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾಡುತ್ತಿದ್ದ ಉಪವಾಸ ಮಾಡಿರುವ ಮುಸ್ಲಿಂ ಬಾಂಧವರು ಇಂದು ತಮ್ಮ ಉಪವಾಸ (ರೋಜಾ) ಅಂತ್ಯಗೊಳಿಸಿದರು
ಬೆಳಗ್ಗೆ ಹೊಸ ಬಟ್ಟೆಗಳನ್ನು ಧರಿಸಿ, ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು ಕುಟುಂಬಸ್ಥರು, ಸ್ನೇಹಿತರನ್ನು ಭೇಟಿ ‘ಈದ್ ಮುಬಾರಕ್’ ಎಂದು ಶುಭಾಶಯ ವಿನಿಮಯ ಮಾಡಿಕೊಂಡರಷ್ಟೇ ಅಲ್ಲ, ಉಳ್ಳವರು ಬಡವರಿಗೆ ಸಹಾಯ, ದಾನ ಮಾಡುವ ಮೂಲಕ ಸಂತೋಷ ಹಂಚಿಕೊಂಡರು


ಇನ್ನು ಮನೆಯಲ್ಲಿ ವಿಶೇಷ ಭೋಜನ, ವಿವಿಧ ಸಿಹಿತಿಂಡಿಗಳನ್ನು ತಯಾರಿಸಿ ರಂಜಾನ್ ಹಬ್ಬವನ್ನು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮ ದಿಂದ ಆಚರಿಸಿದರು
ನಗರದ ಈದ್ದಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರೊಂದಿಗೆ ಸೇರಿ ನಮಾಜ್ಪ್ರಾರ್ಥನೆ) ಮಾಡಿದ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಶುಭಾಶಯ ವಿನಿಮಯ ಮಾಡಿಕೊಂಡರಲ್ಲದೆ, ಇಸ್ಲಾಂನ ಐದು ಸ್ತಂಭಗಳಲ್ಲಿ ಉಪವಾಸ (ರೋಜಾ) ಕೂಡ ಒಂದೆಂದು ಪರಿಗಣಿಸಲಾಗಿದೆ.ಇಸ್ಲಾಮಿಕ್ ಕ್ಯಾಲೆಂಡರ್‌ನ 9ನೇ ತಿಂಗಳಾಗಿದ್ದು ಇದನ್ನು ವಿಶ್ವಾದ್ಯಂತ ಮುಸ್ಲಿಮರು ಉಪವಾಸ, ಸಾಮುದಾಯಿಕ ಪ್ರಾರ್ಥನೆ, ಚಿಂತನೆ, ಕುರಾನ್ ಅಧ್ಯಯನ, ದಾನ ಮತ್ತು ಸಮುದಾಯ ಸಂಬಂಧ ಗಳನ್ನು ಬಲಪಡಿಸುವ ತಿಂಗಳಾಗಿದೆ ಎಂದು ಅಭಿಪ್ರಾಯಪಟ್ಟರು


ಮುಸ್ಲಿಂ ಸಮುದಾಯದ ಗುರು ಮುಸ್ತಾಪ್ ಕಮಲ್ ಪಾಷಾ ಖಾದ್ರಿ ಮಾತನಾಡಿ, ಇದು ಲೈಲತ್ ಅಲ್-ಖಾದ್ ಎಂದು ಕರೆಯಲ್ಪಡುವ ಇಸ್ಲಾಮಿಕ್ ಪ್ರವಾದಿ ಮುಹಮ್ಮದ್ ಕುರಾನ್ ಬಹಿರಂಗಗೊಂಡ ತಿಂಗಳು ಎಂದು ನಂಬಲಾಗಿದೆ. ರಂಜಾನ್ ವಾರ್ಷಿಕ ಆಚರಣೆಯನ್ನು ಇಸ್ಲಾಂನ ಐದು ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಎಂದರು
ವಿಧಾನ ಪರಿಷತ್ ಮಾಜಿ ಸದಸ್ಯ ಎಚ್. ಆರ್. ಶ್ರೀನಾಥ್, ನಗರಸಭೆ ಪೌರಾಯುಕ್ತ ವಿರೂಪಾಕ್ಷ ಮೂರ್ತಿ, ಸಮುದಾಯದ ಗುರುಗಳು ಮಹಮ್ಮದ ಸಂಪಂಗಿ, ಜನಾಬ್ ಬದ್ರುದ್ದಿನ್ ಖಾದ್ರಿ, ಕದ್ವಾಲ್ ಕಾಸಿಂ ಸಾಬ್, ಸಯ್ಯದ್ ಇಮ್ಮಿಯಾಜ ಹುಸೇನ್ ಉಪಸ್ಥಿತರಿದ್ದರು.ನಗರದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಸಾವಿರಾರು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು
ಕೇವಲ 6 ವರ್ಷದ ಮಗು… ಇತರ ಮಕ್ಕಳು ನಗುತ್ತಾ ಸಂತೋಷವಾಗಿ ಬದುಕುತ್ತಿರುವಾಗ ಮನ್ನತ್ ಪ್ರತಿಯೊಂದು ಉಸಿರಿಗಾಗಿ ಹೋರಾಡುತ್ತಾಳೆ. ದಯವಿಟ್ಟು ಅವಳನ್ನು ಬದುಕಲು ಸಹಾಯ ಮಾಡಿ ಎಂದು ಅಲ್ಲಿನ ಮುಸ್ಲಿಂ ಬಾಂಧವರು ಬ್ಯಾನರ್ ಹಿಡಿದು ನೆರೆದ ಜನರಲ್ಲಿ ನೆರವು ಕೇಳುತ್ತಿರುವುದು ಕಂಡುಬಂತು. ಬಿಲಾಲ್ ಅರಬ್ಬಿ ಮದರ್ಸ್ ಶಾಲೆಯಲ್ಲಿ ಬಡ ಮಕ್ಕಳಿಗೆ ಓದುವುದಕ್ಕೆ ಹಣ ಇಲ್ಲ ಸಹಾಯ ಮಾಡಿ ಎಂದು ಕೂಗುತ್ತಿದ್ದರು.
ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್
More Stories
“ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ: ತಪ್ಪಿತಸ್ಥರನ್ನು ತಕ್ಷಣ ಅಮಾನತು ಮಾಡಿ, ಇಲ್ಲದಿದ್ದರೆ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಘೇರಾವ್ – ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ”
ಶಾಲೆಯಲ್ಲೇ ಮುಖ್ಯೋಪಾಧ್ಯಾಯರ ಕಿತ್ತಾಟ! ಸಿಸಿಟಿವಿ ಪರಿಶೀಲಿಸಿ ತಪ್ಪಿತಸ್ಥರನ್ನು ಅಮಾನತು ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಿ: ಮಹಾನಾಯಕ ಜನಜಾಗೃತಿ ವೇದಿಕೆ ಆಗ್ರಹ
ರಸ್ತೆ ಒತ್ತುವರಿ ಆರೋಪ ನಿರಾಧಾರ; ಕಾನೂನುಬದ್ಧವಾಗಿಯೇ ರೆಸಾರ್ಟ್ ನಿರ್ಮಿಸಲಾಗಿದೆ: ರಮೇಶ್ ನಾಯಕ