October 16, 2026

ಫ್ಯಾನ್ಸಿ ಸ್ಟೋರಿನಲ್ಲಿ ಡ್ರಗ್ಸ್ ಮಾದರಿಯ ಟ್ಯಾಬ್ಲೆಟ್ ಮಾರಾಟ ಜಾಲ ಬೆಳಕಿಗೆ

ಟಿ ಪಬ್ಲಿಕ್ ನ್ಯೂಸ್

ಗಂಗಾವತಿ: ವೈದ್ಯರ ಚೀಟಿ ಇಲ್ಲದೆ ಯಾವುದೇ ಮೆಡಿಕಲ್ ಸ್ಟೋರ್ ನಲ್ಲಿ  ಮಾತ್ರೆ ಔಷಧಿ ಮಾರಾಟ ಮಾಡುವಂತಿಲ್ಲ. ಹಾಗೊಂದು  ವೇಳೆ ಮಾರಾಟ ಮಾಡಿದರೆ ಅವರ ವಿರುದ್ಧ ಕಾನೂನು ಬಾಹಿರ. ಅಂಥದರಲ್ಲಿ ಗಂಗಾವತಿಯ ಫ್ಯಾನ್ಸಿ ಸ್ಟೋರ್ ನಲ್ಲಿ ನೋವು ನಿವಾರಣೆ ಮಾತ್ರೆಯನ್ನು ಅಮಲಿಗಾಗಿ ( ಮತ್ತು ಬರಿಸುವ  ) ಬಳಸುವ ಮೂಲಕ ಯುವಕರನ್ನು ಹಾದಿ ತಪ್ಪಿಸುವ ಆಘಾತಕಾರಿ ಘಟನೆಯೊಂದು ನಡೆದಿದ್ದು.ಈ ಕುರಿತು ಫ್ಯಾನ್ಸಿ ಸ್ಟೋರ್ ಮಾಲೀಕನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ನೀಲಕಂಠೇಶ್ವರ ಕ್ಯಾಂಪ್ನಲ್ಲಿರುವ ಶಾಮಿಯಾನದಲ್ಲಿ ಕೆಲಸ ನಿರ್ವಹಿಸಿದ್ದ ಕಾರ್ಮಿಕ ನೊಬ್ಬ ಮೈ ಕೈ ನೋವಿಗಾಗಿ  ಸ್ನೇಹಿತರ ಸಲಹೆಯಂತೆ ( ಮತ್ತು ) ಬರುವ ಮಾತ್ರೆ ಸೇವಿಸಲು  ಆರಂಬಿಸಿದ್ದ. ಕಾಲಕ್ರಮೇಣ ಈ ಮಾತ್ರೆಗೆ ದಾಸನಾದ ಹೆಚ್ಚು ಮತ್ತೆರಲು ಬಹಳಷ್ಟು ಮಾತ್ರೆಗಳನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಸಿರಿಂಜ್ ಮೂಲಕ ನರಕ್ಕೆ ಇಂಜೆಕ್ಷನ್ ಮಾಡಿಕೊಳ್ಳತೊಡಗಿದನು. ಮತ್ತಿಗೆ ಒಳಗಾದ ವ್ಯಕ್ತಿಯ ದೌರ್ಬಲ್ಯವನ್ನು ಅರಿತ  ನಗರದ ದುರ್ಗಾದೇವಿ ದೇವಸ್ಥಾನದ ಸಮೀಪದ ಕೃಷ್ಣ ಫ್ಯಾನ್ಸಿ ಸ್ಟೋರ್ ದ  ಕಿಶನ್ ಕುಮಾರ್ ಎಂಬಾತ 300 ರೂಪಾಯಿಗೆ ಎರಡು ಮಾತ್ರೆಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ . ಈ ಮಧ್ಯೆ ( ಮತ್ತಿನ ) ಚಟಕ್ಕೊಳಗಾದ ವ್ಯಕ್ತಿಯ ಆರೋಗ್ಯ ಅದಗೆಟ್ಟು ಹಣಕ್ಕಾಗಿ ಮನೆಯಲ್ಲಿ ಕಳ್ಳತನ ಮಾಡಿ ಫ್ಯಾನ್ಸಿ ಸ್ಟೋರ್ ಒಂದರಲ್ಲಿ ಡ್ರಗ್ಸ್ ನಂತಿರುವ ಟ್ಯಾಬ್ಲೆಟ್ ತೆಗೆದುಕೊಳ್ಳುತ್ತಿದ್ದ. ಅಂತಿಮವಾಗಿ ಸಂತ್ರಸ್ತ ಯುವಕ ನೀಡಿದ ದೂರಿನ ಮೇರೆಗೆ  pi ಪ್ರಕಾಶ್ ಮಾಳೆ ಅವರು ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು. ತನಿಖೆ ನಡೆದಿದೆ ಎಂದು ತಿಳಿದು ಬಂದಿದೆ

ನೈಜ ಸುದ್ದಿಗಳಿಗಾಗಿ ನೋಡ್ತಾ ಇರಿ ಟಿ ಪಬ್ಲಿಕ್ ನ್ಯೂಸ್

error: Content is protected !!