ಟಿ ಪಬ್ಲಿಕ್ ನ್ಯೂಸ್

ಗಂಗಾವತಿ: ಸರ್ಕಾರ ಜನರ ಆರೋಗ್ಯ ಹಾಗೂ ನೈರ್ಮಲ್ಯ ರಕ್ಷಣೆಗಾಗಿ ಕೊತ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆಯೇನೋ ನಿಜ. ಆದರೆ ಬಸಾಪಟ್ಟಣ ಗ್ರಾಮದ ರಸ್ತೆ ಬದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಸವನ್ನು ಸುರಿಯುವ ಮೂಲಕ ದೊಡ್ಡ ಸಂಗ್ರಹವೇ ಆಗಿದೆ. ದೊಡ್ಡ ಪ್ರಮಾಣದಲ್ಲಿ ಸಂಗ್ರಹ ಆಗಿರುವ ಕಸವನ್ನು ಸ್ಥಳಾಂತರಿಸುವಂತೆ ಸಾರ್ವಜನಿಕರ ಅಗ್ರಹವಾಗಿದೆ
ಗ್ರಾಮ ಪಂಚಾಯಿತಿ ಪಿಡಿಓ ವಿದ್ಯಾವತಿ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದು ಅಗತ್ಯ ಕ್ರಮ ಕೈಗೊಂಡಿರುವುದಿಲ್ಲ, ನಿಜಕ್ಕೂ ಶೋಚನಿಯ. ದೊಡ್ಡ ಪ್ರಮಾಣದಲ್ಲಿ ಕಸ ಸುರಿಯುತ್ತಿರುವುದರಿಂದ ಗಾಳಿಯೊಂದಿಗೆ ಕಸ ಹಾರಿ ಜನರ ಉಸಿರಾಟಕ್ಕೆ ತೀರ ತೊಂದರೆಯಾಗಿದೆ. ಮೇಲಾಗಿ ದೊಡ್ಡ ದೊಡ್ಡ ವಾಹನಗಳು ಚಲಾಯಿಸುತ್ತಿರುವುದರಿಂದ ಧೂಳಿನಿಂದ ಹಿಡಿ ವಾತಾವರಣವೇ ಕಲುಷಿತವಾಗಿದೆ
ಈ ಕುರಿತು ಬಸಾಪಟ್ಟಣದ ಪಿಡಿಓ ವಿದ್ಯಾವತಿ ಅವರಿಗೆ ಟಿ ಪಬ್ಲಿಕ್ ನ್ಯೂಸ್ ಈ ಕಸ ನಿರ್ವಹಣೆಯನ್ನು ಬೇರೆ ಸ್ಥಳಾಂತರಸುವಂತೆ ಆಗ್ರಹಿಸಿದೆ
ಒಟ್ಟಿನಲ್ಲಿ ದೊಡ್ಡ ಪ್ರಮಾಣದ ಕಸ ಧೂಳಿನಿಂದ ಕೂಡಿದ್ದು ಈ ಪ್ರದೇಶವನ್ನು ಕೂಡಲೇ ಸ್ಥಳಾಂತರಿಸಿದಿದ್ದರೆ ಸಂಕ್ರಾಮಿಕ ರೋಗ ಪೀಡಿತವಾಗುವ ಸಾಧ್ಯತೆಯನ್ನು ಅಲ್ಲಗಳಿಯುವಂತಿಲ್ಲ ಇನ್ನಾದರೂ ಈ ಕುರಿತು ಸಂಬಂಧಿಸಿದ ಗ್ರಾಮ ಪಂಚಾಯಿತಿ ಪಿಡಿಒ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೋ ಇಲ್ಲವೋ ಕಾದು ನೋಡೋಣ
ನೈಜ ಸುದ್ದಿಗಳಿಗಾಗಿ ನೋಡ್ತಾ ಇರಿ ಟಿ ಪಬ್ಲಿಕ್ ನ್ಯೂಸ್
More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ