April 15, 2026

ಉಡಮಕಲ್ ಗ್ರಾಮದ ಶ್ರೀ ಶರಣಬಸವೇಶ್ವರರ 61ನೇ ಜಾತ್ರಾ ಮಹೋತ್ಸವ 10ನೇ ರಥೋತ್ಸವ ಅದ್ದೂರಿಯಾಗಿ  ಜರಗಿತು

ಟಿ ಪಬ್ಲಿಕ್ ನ್ಯೂಸ್

ಹಬ್ಬಗಳು, ಜಾತ್ರೆಗಳು, ಉತ್ಸವಗಳು ನಾಡಿನ ಜನತೆಯ ಧಾರ್ಮಿಕ ಹಾಗೂ ಸಂಸ್ಕೃತಿಯ ಪ್ರತೀಕ.ಅದರಂತೆ ಗಂಗಾವತಿ ತಾಲೂಕಿನ ಉಡುಮಕಲ್-ಗಡ್ಡಿ ಗ್ರಾಮದಲ್ಲಿ ಕಳೆದ 60 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಕಲಬುರ್ಗಿ ಶ್ರೀ ಶರಣಬಸವೇಶ್ವರರ ಪುರಾಣದಂತೆ 61ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯ ಕ್ರಮವು ದಿ: 8-3-2026 ರಂದು ಅದ್ದೂರಿಯಾಗಿ ನೆರವೇರಿದವು

ಪರಮಪೂಜ್ಯ ಶ್ರೀ ಲಿಂಗೈಕ್ಯ ಚನ್ನವೀರ ಮಹಾಸ್ವಾಮಿಗಳ ಜನ್ಮಭೂಮಿ ಉಡುಮಕಲ್ ಮತ್ತು ಮೂಡಿ ಪಟ್ಟಾಧ್ಯಕ್ಷರು ಅವರ ಮಹದಪ್ಪಣೆಯ ಮೇರೆಗೆ ದಿ:18-2-2026 ರಿಂದ ಪುರಾಣ ಪ್ರಾರಂಭಗೊಂಡಿತ್ತು ದಿ: 8 ರಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಧ್ವಜಾರೋಹಣ, ನಂತರ ಶ್ರೀಗಳ ಆಶೀರ್ವಚನದ ನಂತರ ಶರಣರ ರಥೋತ್ಸವವು ಸಂಭ್ರಮದಿಂದ ಸಾಗಿತು.ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ವೇದಮೂರ್ತಿ ಡಾ. ಶ್ರೀ ಕಲ್ಲಿನಾಥ ಗವಾಯಿಗಳು, ಹೆಬ್ಬಾಳದ ಬೃಹನ್ಮಠದ ಅಧ್ಯಕ್ಷರಾದ ಧರ್ಮ ರತ್ನಾಕರ  ಶಿವಾದಾರ್ಯಭೂಷಣ, ಶ್ರೀ ಪಂಡಿತ್ ಪೂಜಾ  ನಾಗಭೂಷಣ ಶಿವಾಚಾರ್ಯರು, ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠದ ಶ್ರೀ  ಬಸವಲಿಂಗೇಶ್ವರ ಶಿವಾಚಾರ್ಯರು, ಅಂಕಲಿಮಠದ ಪೂಜ್ಯ ಬ್ರಹ್ಮಶ್ರೀ ವೀರಭದ್ರ ಮಹಾಸ್ವಾಮಿಗಳು, ಉಟಕನೂರದ ಶ್ರೀ ಮರಿಬಸವರಾಜ ದೇಸೀಕೇಂದ್ರ ಮಹಾಸ್ವಾಮಿಗಳು, ಉಡುಮಕಲ್ ಹಾಗೂ ವೆಂಕಟಗಿರಿಯ ಶ್ರೀ ಶರಣಬಸವೇಶ್ವರ ಟ್ರಸ್ಟ್ ಕಮೀಟಿಯ ಗೌರವಾಧ್ಯಕ್ಷರಾದ ವೀರಬಸಯ್ಯ ಶಾಸ್ತ್ರಿಗಳು, ವೆಂಕಟಗಿರಿ ಬೃಹನ್ಮಠದ ಶ್ರೀ ವೀರೇಶಯ್ಯ ಶಾಸ್ತಿಗಳು, ಗಡ್ಡಿಯ ಶ್ರೀ ಈಶ್ವರಯ್ಯ ಸ್ವಾಮಿ, ಕಲಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಅರಳಗುಂಡಗಿಯ ಸಾಲೋಕ್ಯ ಮನೆತನದ ವಂಶಸ್ಥರಾದ ಪೂಜ್ಯ ಶ್ರೀ ಬಲವಂತ ಶರಣರ ಅಪೇಕ್ಷೆಯಂತೆ ಶ್ರೀ ಶ್ರೀಕಾಂತ ತಂ. ದೇವಯ್ಯಸ್ವಾಮಿಯವರ ವೈದಿಕತ್ವದಲ್ಲಿ ಶ್ರೀ ಶರಣಬಸವೇಶ್ವರರ ಉತ್ಸವ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ, ಪಾವನ ಗಂಗೆಯ ಕುಂಭಪೂಜೆ, ಪಲ್ಲಕ್ಕಿ ಮಹೋತ್ಸವ, ಪುರವಂತಿಕೆ ಕಾರ್ಯಕ್ರಮಗಳು ಅಪಾರ ಭಕ್ತರ ಮಧ್ಯದಲ್ಲಿ ಸಾಂಗವಾಗಿ ನೆರವೇರಿದವು

ಗಂಗಾವತಿಯ ಕಲಾರತ್ನ ಎಸ್. ವೀರಯ್ಯಸ್ವಾಮಿ ಇವರಿಂದ ಭಜನಾ ಸೇವೆ , ಉಡುಮಕಲ್‌ದ ಶ್ರೀ ಶರಣಬಸವೇಶ್ವರ ಯುವಕ ಸಂಘದವರಿಂದ ನಂದಿಕೋಲು ಉತ್ಸವದೊಂದಿಗೆ ಮುಂಜಾನೆ 10 ರಿಂದ 1 ಗಂಟೆಯವರೆಗೆ ಸಲ್ಲುವ ಅಭಿಜಿನ್ ಲಗ್ನದಲ್ಲಿ ಸಾಮೂಹಿಕ ವಿವಾಹಗಳು ನಡೆಯುವ ಮೂಲಕ ನೂತನ ದಂಪತಿಗಳು ಸಪ್ತಪದಿತುಳಿದು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.ನಂತರ ಪ್ರಸಾದ ವಿತರಣೆ ನೆರವೇರಿತು

ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಶ್ರೀ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಶ್ರೀ ಪರಣ್ಣ ಮುನವಳ್ಳಿ, ಕಾಂಗ್ರೆಸ್ ಹಿರಿಯ ಮುಖಂಡ ಸಿದ್ದಪ್ಪ ನೀರ್ಲೋಟಿ, ಗ್ರಾಮದ ಹಿರಿಯರಾದ ಪರಸಪ್ಪ ಕಂದಕೂರ, ಭುವನೇಶಪ್ಪ ಈಡಿಗೇರ, ಭೀಮಣ್ಣ ಬುನ್ನಟ್ಟಿ , ತಿಪ್ಪಣ್ಣ ಬುನ್ನಟ್ಟಿ, ಮಲ್ಲೇಶ್ ನಾಯಕ್, ಮೃತ್ಯುಂಜಯ ಭೋವಿ, ನಾಗರಾಜ ಕರಡೋಣಿ, ಬಸನಗೌಡ ಪಾಟೀಲ್, ಮಲ್ಲಪ್ಪ ಚಕ್ರಸಾಲಿ, ಬಸವರಾಜ ಸಂಡೂರು, ಬಸವರಾಜಪ್ಪ ಬೇವೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಜೆ 5 ಗಂಟೆಗೆ 10ನೇ ವರ್ಷದ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು. ಸುತ್ತಲಿನ ಗ್ರಾಮಗಳ ಅಪಾರ  ಸಂಖ್ಯೆಯ ಭಕ್ತರು ಜಾತ್ರಾ ಮಹೋತ್ಸವದಲ್ಲಿ. ಪಾಲ್ಗೊಂಡು ಪುನೀತರಾದರು

ನೈಜ  ಸುದ್ದಿಗಳಿಗಾಗಿ ನೋಡ್ತಾ ಇರಿ ಟಿ ಪಬ್ಲಿಕ್ ನ್ಯೂಸ್

About The Author

error: Content is protected !!