April 15, 2026

ಕಾರಟಗಿ ಎಸ್‌ಡಿಎಂ ಕೋಚಿಂಗ್ ಕ್ಲಾಸಿಸ್‌ನಿಂದ ರಾಜ್ಯ ಮಟ್ಟದ ಪ್ರತಿಭೆಗಳಿಗೆ ಚಾಣಕ್ಯ ಪುರಸ್ಕಾರ

ಟಿ ಪಬ್ಲಿಕ್ ನ್ಯೂಸ್

ಕಾರಟಗಿ: ಶೈಕ್ಷಣಿಕ ಸಂಸ್ಥೆಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಕಾರಟಗಿಯ ನವಲಿ ರಸ್ತೆಯಲ್ಲಿರುವ ಎಸ್‌ಡಿಎಂ ಕೋಚಿಂಗ್ ಕ್ಲಾಸಸ್ ವತಿಯಿಂದ ಇತ್ತೀಚೆಗೆ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಎಸ್‌ಡಿಎಂ ಚಾಣಕ್ಯ ಪುರಸ್ಕಾರ 2026 ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಕೋಚಿಂಗ್ ಕ್ಲಾಸಿಸ್‌ದ ಸಂಸ್ಥಾಪಕ ಶ್ರೀ ಸಿದ್ದು ವಳಕಲದಿನ್ನಿ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಸರ್ವಾಂಗೀಣ ರೀತಿಯಲ್ಲಿ ತಯಾರು ಮಾಡುವ ದಿಸೆಯಲ್ಲಿ ಎಸ್‌ಡಿಎಂ ಕೋಚಿಂಗ್ ಕ್ಲಾಸಿಸ್ ಶ್ರಮಿಸುತ್ತಿದೆ. ಇಂದಿನ ವಿದ್ಯಾರ್ಥಿಯೇ ನಾಳೆಯ ನಾಯಕರು ಎಂಬಂತೆ ಈ ಭಾಗದ ಮಕ್ಕಳನ್ನು ಶೈಕ್ಷಣಿಕವಾಗಿ ದೈಹಿಕವಾಗಿ, ಮಾನಸಿಕವಾಗಿ ಸದೃಢಗೊಳಿಸಿ ಉನ್ನತ ಸ್ಥಾನ ಗಳಿಸಿ ರಾಷ್ಟ್ರ ಅಂತ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿವಂತಾಗಲು ಮಕ್ಕಳಲ್ಲಿರುವ ಪ್ರತಿಭೆಯನ್ನು ಅರಳಿಸುವುದೇ ಸಂಸ್ಥೆಯ ಧ್ಯೇಯವಾಗಿದೆ. ಇದಕ್ಕೆ ಪಾಲಕರ ಸಹಕಾರ ಅಗತ್ಯವಾಗಿದೆ ಎಂದರು.

ಆರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಎಸ್‌ಡಿಎಂ ಕ್ಲಾಸಿಸ್ ಸಂಸ್ಥಾಪಕ ಕಾರ್ಯದರ್ಶಿ ಶ್ರೀಮತಿ ಅಂಬಿಕಾ ಎಸ್. ವಳಕಲದಿನ್ನಿ ಮಾತನಾಡಿ, ಸಂಸ್ಥೆಯು ಯಶಸ್ವಿ ಯಾಗಿ ಮುನ್ನಡೆಯಲು ಸಾಕಷ್ಟು ಸವಾಲುಗಳನ್ನು ಎದುರಿಸಿರುವುದನ್ನು ವಿವರಿಸಿದ ಅವರು, ಯಾವುದೇ ಕಾರಣಕ್ಕೂ ಮಕ್ಕಳ ಶೈಕ್ಷಣಿಕ ಸೇವೆಗೆ ಚ್ಯುತಿ ಬಾರದಂತೆ ಸಂಸ್ಥೆಯು ಮುನ್ನಡೆಯುವಲ್ಲಿ ಪೂರಕ ಕ್ರಮಗಳನ್ನು ಕೈಗೊಂಡಿದ್ದೇ ಯಶಸ್ಸಿಗೆ ಕಾರಣ ಎಂದರು

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ನ್ಯಾಯವಾದಿ ಸೋಮನಾಥ ಹೆಬ್ಬಳದ ಅವರು ಮಾತನಾಡಿ, ಎಸ್‌ಡಿಎಂ ಕೋಚಿಂಗ್ ಕ್ಲಾಸಿಸ್ ವತಿಯಿಂದ ನಡೆದ ಚಾಣಕ್ಯ ಪುರಸ್ಕಾರದಲ್ಲಿ ಯಶಸ್ಸು ಪಡೆದ ವಿದ್ಯಾರ್ಥಿಗಳಿಗೆ ಶುಭ ಕೋರಿದರಲ್ಲದೆ, ಭವಿಷ್ಯದಲ್ಲಿ ಯಶಸ್ಸಿನ ಮೆಟ್ಟಿಲೇರಲು ಸ್ಪರ್ಧಾತ್ಮಕ ಪರೀಕ್ಷೆಗಳು ಏಣಿಯಂತಾಗಿವೆ ಎಂದು ಅವರು ಎಸ್‌ಡಿಎಂ ಕೋಚಿಂಗ್ ಕ್ಲಾಸಿಸ್‌ದ ವಳಕಲದಿನ್ನಿ ದಂಪತಿಗಳ ಸಾಹಸಕ್ಕೆ ಮೆಚ್ಚುಗೆ ಸೂಚಿಸಿ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಶುಭ ಹಾರೈಸಿದರು. ಶಿಕ್ಷಕ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ರಾಜ್ಯ ಮಟ್ಟದ ಎಸ್‌ಡಿಎಂ ಚಾಣಕ್ಯ ಪುರಸ್ಕಾರ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಕೊಪ್ಪಳ ಗುಡ್ಡದಕ್ಯಾಂಪ್‌ ಪದ್ಮಯ್ಯ ಹಿರೇಮಠ, ಇವರಿಗೆ 10 ಸಾವಿರ ನಗದು ನೀಡಿದ್ದಲ್ಲದೆ ಶೈಕ್ಷಣಿಕ ವಿದ್ಯಾ ಭ್ಯಾಸಕ್ಕಾಗಿ 50 ಸಾವಿರ ರೂ. ಶಿಷ್ಯವೇತನ, ದ್ವಿತೀಯ ಸ್ಥಾನ ಪಡೆದ ರಾಮನಗರದ ಆನ್ವಿಕಾ ವಿ.ಆರ್. ಈ ವಿದ್ಯಾರ್ಥಿನಿಗೆ  7.500 ರೂ. ನಗದು ಬಹುಮಾನ ಹಾಗೂ 50 ಸಾವಿರ ರೂ. ಶಿಷ್ಯವೇತನವನ್ನು ತೃತೀಯ ಸ್ಥಾನ ಪಡೆದ ಹುಳ್ಕಿಹಾಳ ಗ್ರಾಮದ ಅಮೋಘವರ್ಷ ಈತನಿಗೆ 5 ಸಾವಿರ ನಗದು ಪುರಸ್ಕಾರ ಹಾಗೂ 50 ಸಾವಿರ ರೂ. ಶಿಷ್ಯವೇತನ, ನಾಲ್ಕನೆಯ ಸ್ಥಾನ ಸನ್ವಿತ್ ಕೊಪ್ಪಳ ಅಥಣಿ ಈತನಿಗೆ 3 ಸಾವಿರ ರೂ. ಬಹುಮಾನ ಹಾಗೂ 45 ಸಾವಿರ ರೂ. ಶಿಷ್ಯವೇತನ ನೀಡಲಾಗಿದೆ.

ಎಸ್‌ಡಿಎಂ ಕೋಚಿಂಗ್ ಕ್ಲಾಸಿಸ್‌ನಿಂದ ರಾಜ್ಯ ಮಟ್ಟದ ಪ್ರತಿಭೆಗಳಿಗೆ ಚಾಣಕ್ಯ ಪುರಸ್ಕಾರ

ಇದಲ್ಲದೆ ಸಮಾಧಾನಕರ ಬಹುಮಾನ ಪಡೆದ ಅಮನ್, ಕೇದಾರನಾಥ ಬಿ.ಕೆ., ವರ್ಷಾ, ಸುಪ್ರಿಯಾ ಮಾಲೀಪಾಟೀಲ, ಶ್ರೇಯಾ, ಜೆ. ಸನ್ವಿತಾ, ಲಿಷಿತಾ, ಬಿ. ಮಧು, ಸಾನ್ವಿ ಹಾಗೂ ಧ್ರುವ ಇವರುಗಳಿಗೆ ತಲಾ 1 ಸಾವಿರ ನಗದು ಪುರಸ್ಕಾರ ಹಾಗೂ 10 ಸಾವಿರ ರೂ. ಶಿಷ್ಯವೇತನವನ್ನು ನೀಡಿ ಗೌರವಿಸಲಾಯಿತು

ಬೇಸಿಗೆ ಮತ್ತು ಪೂರ್ಣಾವಧಿಯ ತರಬೇತಿ-2026ನ್ನು ವಸತಿ ಸಹಿತ ಹಾಗೂ ವಸತಿ ರಹಿತ ಎಪ್ರಿಲ್ 4 ರಿಂದ ಮೇ 28ರ ವರೆಗೆ ಹಮ್ಮಿಕೊಳ್ಳಲಾಗಿದೆ. ಪೂರ್ಣಾವಧಿಯ ತರಬೇತಿ ಜೂನ್ 10 ರಿಂದ ಆರಂಭಗೊಳ್ಳಲಿವೆ ಎಂದು ಆಡಳಿತ ಮಂಡಳಿ ತಿಳಿಸಿದೆ

ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್

About The Author

error: Content is protected !!