October 16, 2026

18 ವರ್ಷಗಳ ನಿಷ್ಠಾವಂತ ಸೇವೆ – ಬಸವರಾಜ್ ಚಿನ್ನೂರು

ಟಿ ಪಬ್ಲಿಕ್ ನ್ಯೂಸ್

ಕರ್ತವ್ಯಪ್ರಜ್ಞೆ, ಶಿಸ್ತು, ಸಾರ್ವಜನಿಕ ಸೇವೆಯ ಪ್ರತೀಕವಾಗಿ ಮೆರೆದ ಅಧಿಕಾರಿ – ಸಹೋದ್ಯೋಗಿಗಳು ಹಾಗೂ ನಾಗರಿಕರಿಂದ ಅಭಿನಂದನೆಗಳ ಸುರಿಮಳೆ

ಪೊಲೀಸ್ ಇಲಾಖೆಯಲ್ಲಿ 18 ವರ್ಷಗಳ ಕಾಲ ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಹಾಗೂ ಕರ್ತವ್ಯಬದ್ಧತೆಯಿಂದ ಸೇವೆ ಸಲ್ಲಿಸಿದ ಬಸವರಾಜ್ ಚಿನ್ನೂರು ಅವರು ತಮ್ಮ ಸೇವಾ ಪಯಣದ ಈ ಮಹತ್ವದ ಘಟ್ಟದಲ್ಲಿ ಹೃದಯಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಸೇವಾ ಅವಧಿಯಲ್ಲಿ ಇಲಾಖೆಯ ಗೌರವವನ್ನು ಹೆಚ್ಚಿಸುವಂತಹ ಕಾರ್ಯಗಳನ್ನು ನಿರ್ವಹಿಸಿ, ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿರುವ ಅವರು, “ನನ್ನ ಈ ಸಾಧನೆಗೆ ಮಾತೃ ಇಲಾಖೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಹಾಗೂ ನನ್ನ ಕುಟುಂಬಸ್ಥರ ಸಹಕಾರವೇ ಮುಖ್ಯ ಕಾರಣ” ಎಂದು ವಿನಮ್ರವಾಗಿ ತಿಳಿಸಿದ್ದಾರೆ.

ಅವರ ಕರ್ತವ್ಯನಿಷ್ಠೆ, ಶಿಸ್ತು ಮತ್ತು ಸಾರ್ವಜನಿಕರೊಂದಿಗೆ ಹೊಂದಿರುವ ಹಿತೈಷಿ ನಿಲುವು ಪೊಲೀಸ್ ಇಲಾಖೆಗೆ ಮಾದರಿಯಾಗಿದೆ. ಇಂತಹ ಅಧಿಕಾರಿಗಳಿಂದಲೇ ಇಲಾಖೆಯ ಗೌರವ ಮತ್ತಷ್ಟು ಎತ್ತರಕ್ಕೆ ಏರುತ್ತದೆ ಎಂಬುದು ಮೇಲಧಿಕಾರಿಗಳ ಅಭಿಪ್ರಾಯವಾಗಿದೆ.

ಬಸವರಾಜ್ ಚಿನ್ನೂರು ಅವರ ಸೇವಾ ಸಾಧನೆಗೆ ಇಲಾಖೆಯ ಎಲ್ಲಾ ವಲಯಗಳಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, ಅವರ ಮುಂದಿನ ಸೇವಾ ಪಯಣ ಇನ್ನಷ್ಟು ಯಶಸ್ವಿಯಾಗಲಿ ಎಂದು ಹಾರೈಸಲಾಗಿದೆ.

ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್

error: Content is protected !!