October 16, 2026

ಮಾನವೀಯತೆ ಮೆರೆಯಿಸಿದ ರೋಟರಿ ರೈಸ್ ಬೌಲ್ – ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿ, ಫಲಾನುಭವಿಯಿಂದ ಕೃತಜ್ಞತೆ

ಟಿ ಪಬ್ಲಿಕ್ ನ್ಯೂಸ್
ಏಪ್ರಿಲ್ : 19

ಗಂಗಾವತಿ:ಮಾನವೀಯತೆ ಮೆರೆಯುವ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿರುವ ರೋಟರಿ ರೈಸ್ ಬೌಲ್ ಸಂಸ್ಥೆ ಹಾಗೂ ಉಮೆನ್ಸ್ ಲೈನ್ಸ್ ಕ್ಲಬ್, ಕೊಪ್ಪಳ ಭಾಗದೊಬ್ಬರಿಗೆ ಕಣ್ಣಿನ ಚಿಕಿತ್ಸೆಗೆ ಸಹಕಾರ ನೀಡಿ, ಅವರ ಜೀವನದಲ್ಲಿ ಹೊಸ ಬೆಳಕು ತುಂಬಿದೆ. ಸಂಸ್ಥೆಯ ಸಹಾಯದಿಂದ ನಡೆದ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಫಲಾನುಭವಿಯು ಸಂತಸ ವ್ಯಕ್ತಪಡಿಸಿ ರೋಟರಿ ರೈಸ್ ಬೌಲ್ ಸಂಸ್ಥೆಗೆ ಹಾಗೂ ಉಮೆನ್ಸ್ ಲೈನ್ಸ್ ಕ್ಲಬ್ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಈ ಮಾನವೀಯ ಸೇವೆಯ ಹಿನ್ನೆಲೆದಲ್ಲಿ ಮಾತನಾಡಿದ ಫಲಾನುಭವಿಯು, ತಮ್ಮ ದೃಷ್ಟಿ ಸಮಸ್ಯೆ ನಿವಾರಣೆಗೆ ನೆರವಾದ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರೋಟರಿ ರೈಸ್ ಕ್ಲಬ್ ಅಧ್ಯಕ್ಷೆ ಗೀತಾ ಚೌದ್ರಿ, ಕಾರ್ಯದರ್ಶಿ ಬಿ. ಶ್ರೀದೇವಿ, ಸದಸ್ಯರಾದ ಲಲಿತಾ ನಾಗರಾಜ, ಶಾಹಿನ್ ಕೌಸರ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಸೇವಾ ಮನೋಭಾವದ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.

ರೋಟರಿ ರೈಸ್ ಬೌಲ್ ಸಂಸ್ಥೆ ಹಾಗೂ ಉಮೆನ್ಸ್ ಲೈನ್ಸ್ ಕ್ಲಬ್  ಈ ಮಾನವೀಯ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದು, ಸಂಕಷ್ಟದಲ್ಲಿರುವವರಿಗೆ ಆಶಾಕಿರಣವಾಗುತ್ತಿದೆ.

ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್

error: Content is protected !!