ಟಿ ಪಬ್ಲಿಕ್ ನ್ಯೂಸ್
ದಿ: 20/04/2026
ಗಂಗಾವತಿ: ತಾಲೂಕು ವ್ಯಾಪ್ತಿಯ ಗಡ್ಡಿ – ಉಡಮಕಲ್ ಗ್ರಾಮದಲ್ಲಿ ಉಟಗನೂರು ಶ್ರೀ ಶ್ರೀ ಶ್ರೀ ಪರಮಪೂಜ್ಯ ಪರಮ ತಪಸ್ವಿ ಶ್ರೀ ಮರಿ ಬಸವಲಿಂಗ ದೇಶಿ ಕೇಂದ್ರ ಮಹಾಸ್ವಾಮಿಗಳವರು ಸ್ಥಾಪಿಸಿದ ಶಾಖ ಮಠದ 30ನೇ ವರ್ಷದ ಜಾತ್ರಾ ಮಹೋತ್ಸವ ಭಕ್ತಿ ಮತ್ತು ಶ್ರದ್ಧಾಭಾವದ ನಡುವೆ ಅದ್ದೂರಿಯಾಗಿ ಜರುಗಿತು.
ಶ್ರೀ ವೇದಮೂರ್ತಿ ಈಶ್ವರಯ್ಯ ಸ್ವಾಮಿ ಗಡ್ಡಿಮಠ ಹಾಗೂ ಶ್ರೀ ವೇದಮೂರ್ತಿ ವೀರಬಸವ ಶಾಸ್ತ್ರಿಗಳು ಬೃಹನ್ಮಠ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಈ ಮಹೋತ್ಸವದಲ್ಲಿ ಭಕ್ತರ ಅಪಾರ ಸಮಾಗಮ ಕಂಡುಬಂತು.
ಪ್ರತಿವರ್ಷದಂತೆ ಈ ವರ್ಷವೂ ದಿನಾಂಕ 19-04-2026 ರವಿವಾರ ರಾತ್ರಿ 9 ಗಂಟೆಗೆ ಆಹ್ವಾನಿತ ಭಜನಾ ಸಂಘದವರಿಂದ ಭಜನೆ ಹಾಗೂ ಡೊಳ್ಳು ವಾದ್ಯದೊಂದಿಗೆ ಭಕ್ತಿಭರಿತ ಸ್ವಾಗತ ಕಾರ್ಯಕ್ರಮ ನೆರವೇರಿತು.ನಂತರ ದಿನಾಂಕ 20-04-2026 ಸೋಮವಾರ ಬೆಳಗ್ಗೆ 3 ಗಂಟೆಗೆ ತಾತನವರ ಕರ್ತೃ ಗದ್ದುಗೆ ಬಳಿ ಮಹಾ ರುದ್ರಾಭಿಷೇಕವು ಶ್ರೀ ಮಲ್ಲಯ್ಯ ಸ್ವಾಮಿ, ಶ್ರೀ ಗಣೇಶಯ್ಯ ಸ್ವಾಮಿ ಮತ್ತು ಕರಿಬಸಯ್ಯ ಸ್ವಾಮಿ ಅವರ ನೇತೃತ್ವದಲ್ಲಿ ನೆರವೇರಿತು.
ಬೆಳಗ್ಗೆ 6 ಗಂಟೆಗೆ ಸುಮಂಗಲಿಯರು ಕಳಸಗಳನ್ನು ಹೊತ್ತು ಭಜನೆ ಮತ್ತು ಡೊಳ್ಳಿನ ನಾದದೊಂದಿಗೆ ಗಂಗೆ ಸ್ಥಳಕ್ಕೆ ತೆರಳಿ ಪುನಃ ಮಠಕ್ಕೆ ವಾಪಸಾದ ನಂತರ, ಗಣರಾಧನೆ ಕಾರ್ಯಕ್ರಮ ನೆರವೇರಿತು. ಮಧ್ಯಾಹ್ನ 12:15ಕ್ಕೆ ಸಾಮೂಹಿಕ ವಿವಾಹಗಳು ನಡೆಯುವುದರೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಯಿತು.
ಸಂಜೆ 5 ಗಂಟೆಗೆ ತಾತನವರ ಉತ್ಸವ ವೈಭವದಿಂದ ಜರುಗಿದರೆ, ರಾತ್ರಿ ಪುರಾಣ ಹಾಗೂ ಮಹಾಮಂಗಳ ಕಾರ್ಯಕ್ರಮಗಳು ಭಕ್ತರಲ್ಲಿ ಆಧ್ಯಾತ್ಮಿಕ ಉತ್ಸಾಹವನ್ನು ಹೆಚ್ಚಿಸಿವೆ.
ಈ ಸಂದರ್ಭದಲ್ಲಿ ಗ್ರಾಮದ ಟ್ರಸ್ಟ್ ಕಮಿಟಿ ಅಧ್ಯಕ್ಷರು. ಉಪಾಧ್ಯಕ್ಷರು. ಸದಸ್ಯರು ಹಾಗೂ ಊರಿನ ಹಿರಿಯರಾದ. ಶ್ರೀ ಬಸಪ್ಪ ಹನಮನಟ್ಟಿ, ಯಮನಪ್ಪ ತಳವಾರ, ರಂಗಪ್ಪ ಪೂಜಾರಿ, ಸಂಗಪ್ಪ ಚಕ್ರಸಾಲಿ, ಬಾಲಪ್ಪ ಮಾದಿನಾಳ, ಬಸನಗೌಡ ಪೊಲೀಸ್ ಪಾಟೀಲ್, ಈಶ್ವರಯ್ಯ ಗಡ್ಡಿ ಮಠ, ನಾಗರಾಜ ಡಂಕಣಕಲ್ PACS ಅಧ್ಯಕ್ಷರು ಗಡ್ಡಿ , ವಿಶ್ವನಾಥ ಸ್ವಾಮಿ ಮರಳಿ ಮಠ, ಬಸವರಾಜ ಸ್ವಾಮಿ ಗಡ್ಡಿ ಮಠ, ಹನುಮಂತಪ್ಪ ಮಾದಿನಾಳ, ಹಾಗೂ ಗುರುಹಿರಿಯರು, ಯುವಕರು ಸೇರಿದಂತೆ ಅನೇಕರು ಭಾಗವಹಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಿದರು.

ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್
More Stories
ಮಳೆ-ಬೆಳೆಯಿಗಾಗಿ ಮಲ್ಲಾಪುರ ಗಾಳೆಮ್ಮ ದೇವಿಯ ವಿಶೇಷ ಆರಾಧನೆ
“ದಲಿತ ನಾಯಕರಿಗೆ ನ್ಯಾಯ ಕೊಡದಿದ್ದರೆ ಕಾಂಗ್ರೆಸ್ಗೆ ಜನತೆ ತಕ್ಕ ಪಾಠ ಕಲಿಸುತ್ತದೆ: ಕೆ.ಎಚ್.ಮುನಿಯಪ್ಪ ಡಿಸಿಎಂ ಆಗಲಿ ಎಂದು ನಾಗರಾಜ ದೊಡ್ಮನಿ ಆಗ್ರಹ”
“22 ವರ್ಷಗಳ ಅಕ್ರಮ ಮದ್ಯ ಮಾರಾಟಕ್ಕೆ ಅಧಿಕಾರಿಗಳೂ ಶಾಮೀಲು? — ಅಜಯ್ ಬಾರ್ ಮಾಲೀಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ”