ಟಿ ಪಬ್ಲಿಕ್ ನ್ಯೂಸ್. ಮೇ 1
ಗಂಗಾವತಿ: ವಿಶ್ವದ ಶ್ರಮಜೀವಿಗಳ ಹಕ್ಕುಗಳು, ಗೌರವ ಮತ್ತು ಏಕತೆಯನ್ನು ಸಾರುವ 141ನೇ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಗಂಗಾವತಿ ತಾಲೂಕಿನ ದಾಸನಾಳ ಬ್ರಿಡ್ಜ್ ಬಳಿ ಹಮಾಲಿ ಕಾರ್ಮಿಕರು ಇಂದು ಸಂಭ್ರಮದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ಹಮಾಲಿ ಕಾರ್ಮಿಕರ ಸಂಘದ ಗ್ರಾಮ ಘಟಕದ ಗೌರವ ಅಧ್ಯಕ್ಷರಾದ ಸಂಗಯ್ಯ ಸ್ವಾಮಿ, ಕಾರ್ಯದರ್ಶಿ ಭೀಮೇಶ ಕಂಪ್ಲಿ, ಅಧ್ಯಕ್ಷರಾದ ಶಾಂಮರಾಯ ಹಾಗೂ KPRS ಸಂಘದ ತಾಲೂಕು ಕಾರ್ಯದರ್ಶಿ ಮುತ್ತಣ್ಣ ದಾಸನಾಳ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಶಂಕ್ರಪ್ಪ, ಪರಶುರಾಮ, ಬಸ್ಸಪ್ಪ, ಯಮನೂರಪ್ಪ, ಮಲ್ಲಿಕಾರ್ಜುನ, ಬಸುವರಾಜ, ಇಬ್ರಾಹಿಂ ಸಾಹೇಬ್, ಪ್ರಭು ಸೇರಿದಂತೆ ಅನೇಕ ಕಾರ್ಮಿಕರು ಮತ್ತು ಸಂಘದ ಸದಸ್ಯರು ಹಾಜರಿದ್ದು, ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಸಂದೇಶ ನೀಡಿದರು.
ಮೇ ದಿನದ ಮಹತ್ವವನ್ನು ಸ್ಮರಿಸಿಕೊಂಡು, ಕಾರ್ಮಿಕರ ಶ್ರಮವೇ ದೇಶದ ಪ್ರಗತಿಯ ಬೆನ್ನೆಲುಬು ಎಂದು ಮುಖಂಡರು ಅಭಿಪ್ರಾಯಪಟ್ಟರು. ಕಾರ್ಮಿಕರ ಏಕತೆ, ಶ್ರಮ ಮತ್ತು ಹಕ್ಕುಗಳ ರಕ್ಷಣೆಯೇ ಇಂದಿನ ದಿನದ ಮುಖ್ಯ ಸಂದೇಶವಾಗಿದ್ದು, ಈ ಕಾರ್ಯಕ್ರಮವು ಉತ್ಸಾಹಭರಿತವಾಗಿ ನೆರವೇರಿತು.
ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್
141ನೇ ಮೇ ದಿನವನ್ನು ಹರ್ಷದಿಂದ ಆಚರಿಸಿದ ಹಮಾಲಿ ಕಾರ್ಮಿಕರ ಸಂಘ
More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ