October 16, 2026

ಕಾರಟಗಿ ಸಾರ್ವಜನಿಕರ ನೀರಿನ ಸಮಸ್ಯೆಗೆ ತ್ವರಿತ ಪರಿಹಾರಕ್ಕೆ ವಿಶೇಷ ವ್ಯವಸ್ಥೆ

ಟಿ ಪಬ್ಲಿಕ್ ನ್ಯೂಸ್
ದಿ: ಏಪ್ರಿಲ್ 29

ಕಾರಟಗಿ: ಬೇಸಿಗೆ ತೀವ್ರತೆಯಿಂದ ಉಂಟಾಗಿರುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಕಾರಟಗಿ ಪುರಸಭೆ ಕಾರ್ಯಾಲಯವು ಸಾರ್ವಜನಿಕರಿಗಾಗಿ ವಿಶೇಷ ಕುಡಿಯುವ ನೀರಿನ ಸಹಾಯವಾಣಿ ಕಾರ್ಯಾಲಯವನ್ನು ಪ್ರಾರಂಭಿಸಿದೆ. ಈ ಕುರಿತು ಮಾಹಿತಿ ನೀಡಿದ ಪುರಸಭೆಯ ಮುಖ್ಯ ಅಧಿಕಾರಿಗಳಾದ ಸಾಬಣ್ಣ ಕಟ್ಟೆಕಾರ್, ನಗರದಲ್ಲಿ ನೀರಿನ ಅಭಾವ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮುಖ್ಯ ಅಧಿಕಾರಿಗಳಾದ ಸಾಬಣ್ಣ ಕಟ್ಟಿಕಾರ್
ಸಹಾಯವಣಿ

ಪ್ರಸ್ತುತ ನಗರದಲ್ಲಿ 145 ಮಿನಿ ವಾಟರ್ ಸಪ್ಲೈ ಘಟಕಗಳು, 18 ಹ್ಯಾಂಡ್ ಪಂಪ್‌ಗಳು, 7 ಆರ್‌ಒ ಪ್ಲಾಂಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಜೊತೆಗೆ 8 ವಾರ್ಡ್‌ಗಳಿಗೆ ನಾಗನಕಲ್ ಕೆರೆಯಿಂದ ನೀರು ಸರಬರಾಜು ಮಾಡಲಾಗುತ್ತಿದೆ.

ಪುರಸಭೆ ವತಿಯಿಂದ ಕೈಗೊಂಡಿರುವ ಈ ಕ್ರಮಗಳು ಸಾರ್ವಜನಿಕರಿಗೆ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ತೊಂದರೆ ಕಡಿಮೆ ಮಾಡುವ ಉದ್ದೇಶ ಹೊಂದಿವೆ.

ನೀರಿನ ಸಮಸ್ಯೆ ಎದುರಿಸುತ್ತಿರುವ ನಾಗರಿಕರು ಸಹಾಯವಾಣಿ ಮೂಲಕ ಸಂಪರ್ಕಿಸಿ ಅಗತ್ಯ ಸೇವೆ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಹಾಯವಾಣಿ ಸಂಪರ್ಕ ಸಂಖ್ಯೆಗಳು: ನಾಗೇಶ್ – 9900972859 ಹನುಮೇಶ – 9449963200

ಪುರಸಭೆಯ ಈ ಮುಂದಾಳತ್ವ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಬೇಸಿಗೆ ಅವಧಿಯಲ್ಲಿ ತ್ವರಿತ ಸ್ಪಂದನೆ ನೀಡುವ ವ್ಯವಸ್ಥೆ ಆಶಾದಾಯಕವಾಗಿದೆ.

ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್ 

error: Content is protected !!