ಟಿ ಪಬ್ಲಿಕ್ ನ್ಯೂಸ್
ದಿ: ಏಪ್ರಿಲ್ 27
ಗಂಗಾವತಿ: ನಿವಾಸಿ ಖಾಜಾಬಿ ಅಲ್ಲಾಸಾಬ್ ಅವರ ದೀರ್ಘಕಾಲದ ಸೇವೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಗುರುತಿಸಿ 2026ನೇ ಸಾಲಿನ ‘ಕಾಯಕಶೀಲ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು, ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನ ಸಮಿತಿ, ಬಸವ ಜಯಂತಿ ಉತ್ಸವ ಸಮಿತಿ ಹಾಗೂ ಕೊಪ್ಪಳ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಇವರ ಸಂಯುಕ್ತ ಆಶ್ರಯದಲ್ಲಿ ಮೇ 1ರಂದು ಕಾರ್ಮಿಕ ದಿನಾಚರಣೆಯ ಅಂಗವಾಗಿ ನಡೆಯುವ ಕಾಯಕ ದಿನಾಚರಣೆ ಹಾಗೂ ಕಾಯಕಶೀಲ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಗೌರವ ಪ್ರದಾನವಾಗಲಿದೆ.
ಸುಮಾರು 40 ವರ್ಷಗಳಿಂದ ತಾಲೂಕ್ ಪಂಚಾಯ್ತಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನಕ್ಕೆ ತಮ್ಮದೇ ಆದ ಸಮರ್ಪಿತ ಸೇವೆ ಸಲ್ಲಿಸಿರುವ ಖಾಜಾಬಿ ಅಲ್ಲಾಸಾಬ್ ಅವರ ಪರಿಶ್ರಮ, ಶಿಸ್ತಿನ ಜೀವನಶೈಲಿ ಮತ್ತು ಕರ್ತವ್ಯನಿಷ್ಠೆ ಎಲ್ಲರಿಗೂ ಮಾದರಿಯಾಗಿದೆ. ಅವರ ಸೇವೆಯನ್ನು ಸಮಾಜದ ಮುಂದೆ ಗುರುತಿಸುವ ಉದ್ದೇಶದಿಂದ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ
ಶ್ರೀ ಕೊಟ್ಟೂರು ಬಸವೇಶ್ವರ ವೇದಿಕೆಯಲ್ಲಿ ನಡೆಯಲಿರುವ ಈ ಸಮಾರಂಭವು ಕಾರ್ಮಿಕರ ಗೌರವ ಹಾಗೂ ಕಾಯಕದ ಮಹತ್ವ ಸಾರುವ ವಿಶೇಷ ವೇದಿಕೆಯಾಗಲಿದೆ. ಖಾಜಾಬಿ ಅವರ ಆಯ್ಕೆ ಗಂಗಾವತಿ ನಗರಕ್ಕೆ ಹೆಮ್ಮೆ ತರುವ ಸಂಗತಿಯಾಗಿ ಪರಿಗಣಿಸಲಾಗಿದೆ.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್
More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ