October 16, 2026

ಗಂಗಾವತಿ ನಗರ ಠಾಣೆಗೆ ಪಿಐ ಪ್ರಕಾಶ್ ಆರ್. ಯಾತನೂರ ಆಗಮನ; ಆತ್ಮೀಯ ಸ್ವಾಗತ

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ : 14/05/2026

ಗಂಗಾವತಿ: ಗಂಗಾವತಿ ನಗರ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿರುವ ಪಿ.ಐ ಪ್ರಕಾಶ್ ಆರ್. ಯಾತನೂರ ಅವರನ್ನು ತಾಲೂಕಿನ ಗುಜರಿ ಸಂಘದ ತಾಲೂಕು ಅಧ್ಯಕ್ಷ ರಫೀಕ್, ಮಕ್ಬುಲ್ ಹಾಗೂ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮುಖಂಡರು, ಗಂಗಾವತಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನೂತನ ಪಿಐ ಜನಸ್ನೇಹಿ ಹಾಗೂ ಪರಿಣಾಮಕಾರಿ ಆಡಳಿತ ನೀಡಲಿ ಎಂದು ಶುಭ ಹಾರೈಸಿದರು.

ಇದೇ ವೇಳೆ ಗಂಗಾವತಿ ನಗರ ಠಾಣೆಯಿಂದ ವರ್ಗಾವಣೆಯಾದ ಪಿ.ಐ ಪ್ರಕಾಶ್ ಮಾಳಿ ಅವರನ್ನು ಗಾಂಧಿನಗರ ನಿವಾಸಿ ಹಾಗೂ ದಲಿತ ಸಮಾಜದ ಮುಖಂಡ ಹುಸೇನಪ್ಪ ಪೂಜಾರಿ ಭೇಟಿಯಾಗಿ ಆತ್ಮೀಯವಾಗಿ ಬೀಳ್ಕೊಟ್ಟರು. ನಗರ ಠಾಣೆಯ ಸಿಬ್ಬಂದಿಗಳು ಕೂಡ ಪ್ರಕಾಶ್ ಮಾಳಿ ಅವರಿಗೆ ಶುಭ ಕೋರಿದರು.

ದಲಿತ ಸಮಾಜದ ಮುಖಂಡ ಹುಸೇನಪ್ಪ ಪೂಜಾರಿ

ಹಾಗೂ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಪಿ.ಐ ಪ್ರಕಾಶ್ ಆರ್. ಯಾತನೂರ ಅವರನ್ನು ನಗರ ಠಾಣೆಯ ಸಿಬ್ಬಂದಿ ವರ್ಗ ಗೌರವಪೂರ್ವಕವಾಗಿ ಬರಮಾಡಿಕೊಂಡಿತು.

ಇನ್ನೊಂದೆಡೆ, ಗಂಗಾವತಿ ನಗರ ಠಾಣೆಯ ಪಿ.ಐ ಆಗಿದ್ದ ಪ್ರಕಾಶ್ ಮಾಳಿ ಅವರ ವಿಜಯನಗರ ಜಿಲ್ಲೆಗೆ ಆಗಿದ್ದ ವರ್ಗಾವಣೆಯನ್ನು ರದ್ದುಪಡಿಸಲಾಗಿದ್ದು, ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

error: Content is protected !!