🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ : 18/05/2026
ಗಂಗಾವತಿ: ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ ಮಂದಿರದಲ್ಲಿ ಜೇಷ್ಠ ಅಧಿಕಮಾಸದ ಪ್ರಯುಕ್ತ ಮೇ 17ರಿಂದ ಜೂನ್ 15ರವರೆಗೆ ನಿರಂತರ 33 ದಿನಗಳ ವಿಶೇಷ ಧಾರ್ಮಿಕ ಹಾಗೂ ಜ್ಞಾನಸತ್ವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಮುರಳಿಧರ ಗಂಗನಾಳ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ಸಂಜೆ 6.30ರಿಂದ 8.30ರವರೆಗೆ ನಾಡಿನ ಖ್ಯಾತ ವಿದ್ವಾಂಸರಿಂದ ಪ್ರವಚನ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರಿಗೆ ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಭಿನ್ನ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜೂನ್ 13ರಂದು ಶ್ರೀಗಳ ಪುರಪ್ರವೇಶ ಹಾಗೂ ತೊಟ್ಟಿಲು ಪೂಜೆ, ಜೂನ್ 14ರಂದು ಬೆಳಿಗ್ಗೆ 9 ಗಂಟೆಗೆ ಪುರುಷೋತ್ತಮ ಯಾಗ, ಮಧ್ಯಾಹ್ನ 12 ಗಂಟೆಗೆ ಪರಮಪೂಜ್ಯ ಕಣ್ವ ಮಠಾಧೀಶರಾದ ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀಗಳಿಂದ ಸಂಸ್ಥಾನ ಪೂಜೆ, ಮುದ್ರಾಧಾರಣೆ, ಭಕ್ತರ ಮನೆಗಳಲ್ಲಿ ಪಾದಪೂಜೆ ಸೇರಿದಂತೆ ಹೋಮ, ಹವನ, ಭಜನೆ ಹಾಗೂ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಲಿವೆ ಎಂದು ವಿವರಿಸಿದರು.

ವೇದಮೂರ್ತಿ ಪ್ರದೀಪ ಆಚಾರ್ ಮಾತನಾಡಿ, ಅಧಿಕಮಾಸ ಆಚರಣೆಯ ಮಹತ್ವ, ಭಾಗವತ ಪುರಾಣ ಶ್ರವಣದಿಂದ ದೊರೆಯುವ ಪುಣ್ಯಫಲ ಹಾಗೂ ಧಾರ್ಮಿಕ ಆಚರಣೆಗಳ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಶೇಷಗಿರಿ ಕುಲಕರ್ಣಿ, ವೇದಮೂರ್ತಿ ಅನಿಲ್ ಭಟ್, ಪವನ್ ಜೋಶಿ, ಆನಂದ್ ಕೆಇಬಿ, ವೇಣುಗೋಪಾಲ್ ಚರ್ಚಿ ನಗುಡ್ಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಥಮ ದಿನವಾದ ರವಿವಾರದಂದು ಬೆಂಗಳೂರಿನ ವಿದ್ವಾನ್ ಬಿ. ನಾರಾಯಣ ಆಚಾರ್ ಅವರು “ವಿಷ್ಣು ಸಹಸ್ರನಾಮ ಚಿಂತನೆ” ಕುರಿತು ವಿಶೇಷ ಪ್ರವಚನ ನೀಡಿದರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್
More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ