🟥 ಟಿ ಪಬ್ಲಿಕ್ ನ್ಯೂಸ್ ಕಾರಟಗಿ
ದಿನಾಂಕ : 21/05/2026
“ನಾನೇ ಸುಪ್ರೀಂ… ನನ್ನದೇ ಕಾನೂನು!” — ಕಾರಟಗಿಯಲ್ಲಿ ಅಧ್ಯಕ್ಷ ಮಂಜುನಾಥ್ ಮೇಗೂರ್ ವಿರುದ್ಧ ಸ್ಫೋಟಕ ಆರೋಪ
ಮುಖ್ಯಾಧಿಕಾರಿ ಸೇರಿ ಸಿಬ್ಬಂದಿಗೆ ಅವಾಚ್ಯ ನಿಂದನೆ, ಬೆದರಿಕೆ, ಅಧಿಕಾರ ದುರುಪಯೋಗ – ಜಿಲ್ಲಾಡಳಿತ ತಕ್ಷಣ ಕ್ರಮಕ್ಕೆ ಒತ್ತಾಯ
ಕಾರಟಗಿ: ಜನಸೇವೆಗೆ ಇರುವ ಪುರಸಭೆ ಈಗ ಒಬ್ಬ ವ್ಯಕ್ತಿಯ ದರ್ಪದ ಆಡಳಿತಕ್ಕೆ ಬಲಿಯಾಗಿದೆಯೇ ಎಂಬ ಪ್ರಶ್ನೆ ಕಾರಟಗಿ ಪಟ್ಟಣದಲ್ಲಿ ಉದ್ಭವಿಸಿದೆ. ನಗರದ ಪುರಸಭೆ ಅಧ್ಯಕ್ಷ ಮಂಜುನಾಥ್ ಮೇಗೂರ್ ವಿರುದ್ಧ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೆಕಾರ್ ಸೇರಿದಂತೆ ಸಿಬ್ಬಂದಿ ವರ್ಗವೇ ಗಂಭೀರ ಆರೋಪಗಳ ಸುರಿಮಳೆಗೈದಿದ್ದು, ಪುರಸಭೆಯ ಒಳಾಂಗಣದಲ್ಲಿ ನಡೆಯುತ್ತಿದೆ ಎನ್ನಲಾದ ದೌರ್ಜನ್ಯ ಈಗ ಬಹಿರಂಗವಾಗಿದೆ.
“ಕಾನೂನು ಬೇಡ… ನಾನು ಹೇಳಿದಂತೆ ಕೆಲಸ ಮಾಡು ಇಲ್ಲದಿದ್ದರೆ ಇಲ್ಲಿಂದ ಹೋಗು” ಎಂಬ ಬೆದರಿಕೆ ಭಾಷೆಯಲ್ಲಿ ಅಧ್ಯಕ್ಷರು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಸಿಬ್ಬಂದಿ ವರ್ಗ ಸಿಡಿದೆದ್ದಿದೆ. ಪ್ರಾಮಾಣಿಕವಾಗಿ ಹಾಗೂ ಕಾನೂನುಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೆಕಾರ್ ಅವರನ್ನು ಗುರಿಯಾಗಿಸಿಕೊಂಡು ನಿರಂತರ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

“ಚಿಲ್ಲರ್ ಸೂಳೇಮಗ ಆಫೀಸರ್” — ಅಧಿಕಾರಿಗೆ ಅಧ್ಯಕ್ಷನ ಅವಾಚ್ಯ ದಾಳಿ?
ರಾತ್ರಿ 11 ಗಂಟೆ ಸುಮಾರಿಗೆ ಅಧ್ಯಕ್ಷರು ಮುಖ್ಯಾಧಿಕಾರಿಗೆ ಸರಣಿ ಕರೆಗಳನ್ನು ಮಾಡಿದ್ದಾರೆ. ಅಧಿಕಾರಿಗಳು ನಿದ್ರೆಯಲ್ಲಿದ್ದ ಕಾರಣ ಕರೆ ಸ್ವೀಕರಿಸಿಲ್ಲ. ಬಳಿಕ ಬೆಳಗಿನ ಜಾವ 4 ಗಂಟೆಗೆ ಅಧಿಕಾರಿಗಳು ಕರೆ ಮಾಡಿದಾಗ, “ಬ್ಯಾನರ್ ಕಟ್ಟಿದ್ದಾರೆ, ಅದನ್ನು ನೋಡದೆ ಏನು ಮಾಡುತ್ತಿದ್ದೀಯ?” ಎಂದು ಪ್ರಶ್ನಿಸಿದ್ದಾರೆ.
ಅಧಿಕಾರಿಗಳು
“ರಾತ್ರಿ ವೇಳೆ ನೋಡುವುದು ಸಾಧ್ಯವಿಲ್ಲ ಸರ್, ಬೆಳಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತೇನೆ” ಎಂದು ಉತ್ತರಿಸಿದ ತಕ್ಷಣ, “ನಿನ್ನಂತ ಚಿಲ್ಲರ್ ಸೂಳೇಮಗ ಆಫೀಸರ್ ನಾನು ಎಲ್ಲೂ ನೋಡಿಲ್ಲ” ಎಂದು ಅಧ್ಯಕ್ಷ ಮಂಜುನಾಥ್ ಮೇಗೂರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಗಂಭೀರ ಆರೋಪಿಸಿದ್ದಾರೆ
ಒಬ್ಬ ಜನಪ್ರತಿನಿಧಿ, ಅದೂ ಪುರಸಭೆಯ ಅಧ್ಯಕ್ಷನೇ ಅಧಿಕಾರಿಗಳನ್ನು ಈ ಮಟ್ಟಿಗೆ ಅವಮಾನಿಸುತ್ತಿದ್ದರೆ ಸಾಮಾನ್ಯ ಜನರ ಸ್ಥಿತಿ ಏನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
“ನನ್ನದೇ ರೂಲ್ಸ್… ನನ್ನ ಮಾತೇ ಕಾನೂನು!”
ಪುರಸಭೆಯ ತೆರಿಗೆ ಸಂಗ್ರಹ ಪ್ರಕ್ರಿಯೆಯಲ್ಲಿಯೂ ಅಧ್ಯಕ್ಷರು ಕಾನೂನು ಬಾಹಿರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನಲಾಗಿದೆ. “ಜಾಗದ ವಿಸ್ತೀರ್ಣದ ಆಧಾರದ ಮೇಲೆ ತೆರಿಗೆ ವಿಧಿಸುವುದು ನಮ್ಮ ಕರ್ತವ್ಯ. ಆದರೆ ಅಧ್ಯಕ್ಷರು ತಮ್ಮ ಸೂಚನೆಯಂತೆ ಟ್ಯಾಕ್ಸ್ ಹಾಕಬೇಕು ಎಂದು ಒತ್ತಡ ತರುತ್ತಿದ್ದಾರೆ” ಎಂದು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಂದೇ ರೂಲ್ಸ್… ನಂದೇ ಕಾನೂನು… ನಾನು ಹೇಳಿದಂತೆ ಇದ್ದರೆ ಇರಿ, ಇಲ್ಲದಿದ್ದರೆ ಹೋಗಿ” ಎಂದು ಅಧ್ಯಕ್ಷರು ಬಹಿರಂಗವಾಗಿ ದರ್ಪ ತೋರಿಸುತ್ತಿದ್ದಾರೆ ಎಂಬ ಆರೋಪ ಪುರಸಭೆ ಮುಖ್ಯ ಅಧಿಕಾರಿಯಿಂದ ಕೇಳಿಬಂದಿದೆ.
“ಮಂತ್ರಿಗೆ ಕರೆ ಮಾಡಿ ಎತ್ತಂಗಡಿ ಮಾಡಿಸುತ್ತೇನೆ”
ಅಧ್ಯಕ್ಷರ ಬೆದರಿಕೆ ಕೇವಲ ಮಾತಿನ ಮಟ್ಟದಲ್ಲೇ ನಿಲ್ಲದೇ, ರಾಜಕೀಯ ಪ್ರಭಾವದ ಹೆಸರಿನಲ್ಲಿ ಅಧಿಕಾರಿಗಳನ್ನು ಹೆದರಿಸುವ ಮಟ್ಟಕ್ಕೂ ತಲುಪಿದೆ ಎನ್ನಲಾಗಿದೆ.

“ಕೊಪ್ಪಳ ಜಿಲ್ಲಾ ಸಚಿವ ಶಿವರಾಜ್ ತಂಗಡಗಿ ನನ್ನನ್ನು ಇಟ್ಟುಕೊಳ್ಳುತ್ತಾರೆ ಅಥವಾ ನಿನ್ನನ್ನು ಇಟ್ಟುಕೊಳ್ಳುತ್ತಾರೆ ನೋಡೋಣ” ಎಂದು ಅಧಿಕಾರಿಗಳಿಗೆ ಧಮ್ಕಿ ಹಾಕಿರುವುದಾಗಿ ಆರೋಪಿಸಿದೆ.
“ಸಾರ್ವಜನಿಕರ ಮಾತು ಕೇಳಬೇಡ… ನನ್ನ ಮಾತೇ ಕೇಳಬೇಕು. ಕೇಳದಿದ್ದರೆ ನಿನ್ನ ಕಥೆ ಮುಗಿಯುತ್ತದೆ” ಎಂಬ ಶೈಲಿಯಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಗಾಂಧಿ–ಅಂಬೇಡ್ಕರ್ ಭಾವಚಿತ್ರ ಹಿಡಿದು ಸಿಬ್ಬಂದಿ ಹೋರಾಟ
ಅಧ್ಯಕ್ಷರ ದೌರ್ಜನ್ಯದಿಂದ ಬೇಸತ್ತ ಸಿಬ್ಬಂದಿ ವರ್ಗ ಈಗ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದೆ. ಮಹಾತ್ಮ ಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಹಿಡಿದು ಸಿಬ್ಬಂದಿ ಪ್ರತಿಭಟನೆ ನಡೆಸಿದ್ದು, ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
“ಈ ರೀತಿಯ ಅವಮಾನ, ನಿಂದನೆ ಮತ್ತು ಮಾನಸಿಕ ಹಿಂಸೆಯ ನಡುವೆ ಕೆಲಸ ಮಾಡಲು ಸಾಧ್ಯವಿಲ್ಲ. ನನ್ನನ್ನು ಮುಖ್ಯಾಧಿಕಾರಿ ಹುದ್ದೆಯಿಂದ ಬಿಡುಗಡೆ ಮಾಡಿ” ಎಂದು ಮುಖ್ಯಾಧಿಕಾರಿ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಸಿಬ್ಬಂದಿಯಲ್ಲಿ ಭೀತಿ – ಸಾಮೂಹಿಕ ವರ್ಗಾವಣೆಗೆ ಸಿದ್ಧತೆ
ಅಧ್ಯಕ್ಷರ ವರ್ತನೆಯಿಂದ ಬೇಸತ್ತ ಸಿಬ್ಬಂದಿ ವರ್ಗ ಈಗ ಸಾಮೂಹಿಕ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಮುಂದಾಗಿದೆ ಎನ್ನಲಾಗಿದೆ.
“ಕುಡಿಯಲು ನೀರು ತರಲು ಸ್ವಲ್ಪ ತಡವಾದರೂ ಬಾಯಿಗೆ ಬಂದಂತೆ ಬೈಯುತ್ತಾರೆ. ಡಿ-ಗ್ರೂಪ್ ನೌಕರರಿಂದ ಹಿಡಿದು ಮುಖ್ಯಾಧಿಕಾರಿ ತನಕ ಯಾರಿಗೂ ಗೌರವವಿಲ್ಲ” ಎಂದು ಸಿಬ್ಬಂದಿ ಹಾಗೂ ಅಧಿಕಾರಿ ನೋವು ತೋಡಿಕೊಂಡಿದೆ.
ಪುರಸಭೆ ಕಚೇರಿ ಈಗ ಆಡಳಿತದ ಕೇಂದ್ರವಾಗಿದೆಯೇ, ಅಥವಾ ಒಬ್ಬ ವ್ಯಕ್ತಿಯ ದರ್ಪದ ಅಡ್ಡೆಯಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಜಿಲ್ಲಾಡಳಿತ ಮೌನವೇ?
ಒಬ್ಬ ಅಧ್ಯಕ್ಷನ ವಿರುದ್ಧ ಇಷ್ಟೊಂದು ಗಂಭೀರ ಆರೋಪಗಳು ಕೇಳಿಬಂದಿದ್ದರೂ ಜಿಲ್ಲಾಡಳಿತ ಇನ್ನೂ ಮೌನವಾಗಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಅಧಿಕಾರಿಗಳಿಗೆ ಮಾನಸಿಕ ಕಿರುಕುಳ, ಅವಾಚ್ಯ ನಿಂದನೆ, ಅಧಿಕಾರ ದುರುಪಯೋಗ ಮತ್ತು ಕಾನೂನು ಬಾಹಿರ ಒತ್ತಡದ ಆರೋಪಗಳ ಕುರಿತು ಜಿಲ್ಲಾಡಳಿತ ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಹಾಗೂ ಸಿಬ್ಬಂದಿ ಒತ್ತಾಯಿಸಿದ್ದಾರೆ.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್
More Stories
ಮಳೆ-ಬೆಳೆಯಿಗಾಗಿ ಮಲ್ಲಾಪುರ ಗಾಳೆಮ್ಮ ದೇವಿಯ ವಿಶೇಷ ಆರಾಧನೆ
“ದಲಿತ ನಾಯಕರಿಗೆ ನ್ಯಾಯ ಕೊಡದಿದ್ದರೆ ಕಾಂಗ್ರೆಸ್ಗೆ ಜನತೆ ತಕ್ಕ ಪಾಠ ಕಲಿಸುತ್ತದೆ: ಕೆ.ಎಚ್.ಮುನಿಯಪ್ಪ ಡಿಸಿಎಂ ಆಗಲಿ ಎಂದು ನಾಗರಾಜ ದೊಡ್ಮನಿ ಆಗ್ರಹ”
“22 ವರ್ಷಗಳ ಅಕ್ರಮ ಮದ್ಯ ಮಾರಾಟಕ್ಕೆ ಅಧಿಕಾರಿಗಳೂ ಶಾಮೀಲು? — ಅಜಯ್ ಬಾರ್ ಮಾಲೀಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ”