🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ: 07/06/2026
ಗಂಗಾವತಿ: ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಜನಸ್ನೇಹಿ ವ್ಯಕ್ತಿತ್ವದ ಮೂಲಕ 32 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ನಿವೃತ್ತ ಎಎಸ್‌ಐ ಬಸವರಾಜ್ ಗಂಗಾವತಿ ಅವರ ಸೇವೆಯನ್ನು ಸ್ಮರಿಸಿ ಕಾರಟಗಿ ಪಟ್ಟಣದ ರಾಮನಗರದಲ್ಲಿರುವ ಅವರ ಸ್ವಗೃಹದಲ್ಲಿ ಸಾರ್ವಜನಿಕ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಯಚೂರು ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಪಾವ್ ಗುಂಟೆಪ್ಪ ಮಿರ್ಜಾಪುರ, “ಇಂದಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಅನೇಕ ಸವಾಲುಗಳ ನಡುವೆಯೂ ಬಸವರಾಜ್ ಅವರು ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದೆ, ಯಾವುದೇ ವಿವಾದಗಳಿಗೆ ಅವಕಾಶ ನೀಡದೆ ಕರ್ತವ್ಯ ನಿರ್ವಹಿಸಿರುವುದು ಎಲ್ಲರಿಗೂ ಮಾದರಿಯಾಗಿದೆ” ಎಂದು ಪ್ರಶಂಸಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಅಧ್ಯಕ್ಷ ನಾಗರಾಜ್ ಇಂಗಳಗಿ ಮಾತನಾಡಿ, “ಬಡತನದ ನಡುವೆಯೂ ಶಿಕ್ಷಣ ಪಡೆದು ಸರ್ಕಾರಿ ಹುದ್ದೆ ಅಲಂಕರಿಸಿದ್ದ ಬಸವರಾಜ್ ಅವರು ಕುಟುಂಬ ಹಾಗೂ ಸಮಾಜದ ಪ್ರೀತಿಗೆ ಪಾತ್ರರಾಗಿದ್ದು, ಎಲ್ಲರನ್ನು ಸಮಾನ ದೃಷ್ಟಿಯಿಂದ ಕಾಣುವ ಅವರ ಗುಣ ಅನುಕರಣೀಯವಾಗಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಎಎಸ್‌ಐ ಬಸವರಾಜ್ ಗಂಗಾವತಿ ಹಾಗೂ ದೀಪಮ್ಮ ಬಸವರಾಜ್ ಗಂಗಾವತಿ ದಂಪತಿಯನ್ನು ಅಪಾರ ಸಂಖ್ಯೆಯ ಜನರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ್ ದಂಪತಿಗಳು ತಮ್ಮ ಶಿಕ್ಷಣಕ್ಕೆ ನೆರವಾದ ವಿಜಯಲಕ್ಷ್ಮಿ ವೀರಭದ್ರಪ್ಪ ಹೊಮ್ಮಿನಾಳ ಹಾಗೂ ತಮ್ಮನ್ನು ಪಾಲನೆ–ಪೋಷಣೆ ಮಾಡಿದ ತಾಯಿ ನಿಂಗಮ್ಮ ಉಪ್ಪಾರ ಅವರನ್ನು ವಿಶೇಷವಾಗಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದುದ್ದಕ್ಕೂ ಪಂಪಾಪತಿ ಇಂಗಳಗಿ ಹಾಗೂ ವಿಐಪಿ ಮೆಲೋಡಿಸ್ ತಂಡದ ಸಂಗೀತ ಮನೋರಂಜನೆ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ಕಾರ್ಯಕ್ರಮದಲ್ಲಿ ಕಾರಟಗಿ ಪಿಐ ಸುದೀರ್ ಕುಮಾರ್ ಬೆಂಕಿ, ಕುರುಕುಂದಿ ಹನುಮಂತಪ್ಪ ಸಿಂಧನೂರು, ಪಂಪಾಪತಿ ಇಂಗಳಗಿ, ಉಪ್ಪಾರ ಸಮಾಜದ ನೌಕರರ ಸಂಘದ ಅಧ್ಯಕ್ಷ ದೇವಪ್ಪ ಮೇಷ್ಟು, ಛತ್ರಪ್ಪ ಕುರುಕುಂದಿ, ಅಯ್ಯಪ್ಪ ಕಾರಟಗಿ, ಪ್ರಕಾಶ್ ಮಿರ್ಜಾಪುರ, ಗ್ಯಾನಪ್ಪ ಶಿವಪುರ, ಕಲ್ಗುಡಿ ಹನುಮಂತಪ್ಪ ಬಂಡೆ, ಹಿರೇಜಂತಕಲ್ ಶರಣಪ್ಪ ಉಪ್ಪಾರ, ಬಸವರಾಜ್ ಊದಲ್, ಕನಕಪ್ಪ ಚನ್ನಳ್ಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್
More Stories
ಕಾರಟಗಿ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಅದ್ದೂರಿಯಾಗಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಜೂನ್ 24ರಂದು ಹೊಸಳ್ಳಿಯಲ್ಲಿ ಅದ್ದೂರಿಯಾಗಿ ಗಂಗಾದೇವಿ ಜಯಂತಿ: ಸಾಮೂಹಿಕ ವಿವಾಹ, ರಥೋತ್ಸವಕ್ಕೆ ಭರ್ಜರಿ ಸಿದ್ಧತೆ
ಮೊಹರಂ ಹಬ್ಬ ಶಾಂತಿಯುತ ಆಚರಣೆಗೆ ಸಹಕರಿಸಿ: ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಹಾಗೂ ಸಿಪಿಐ ರಂಗಪ್ಪ ದೊಡ್ಮನಿ ಕರೆ