July 16, 2026

ಬೆಳೆ ವಿಮೆ ನೋಂದಣಿಗೆ ರೈತರು ಮುಂದಾಗಿ: ಜುಲೈ 15 ಹಾಗೂ 31 ಕೊನೆಯ ದಿನಾಂಕ – ಕೃಷಿ ಇಲಾಖೆ ಮನವಿ

🟥 ಟಿ ಪಬ್ಲಿಕ್ ನ್ಯೂಸ್ | ವೆಂಕಟಗಿರಿ
ದಿನಾಂಕ: 07/07/2026

ವೆಂಕಟಗಿರಿ: 2026-27ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ–ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ರೈತರು ತಮ್ಮ ಬೆಳೆಗಳಿಗೆ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.

ಯೋಜನೆಯಡಿ ಹತ್ತಿ (ನೀರಾವರಿ) ಹಾಗೂ ಹೆಸರು (ಮಳೆಯಾಶ್ರಿತ) ಬೆಳೆಗಳಿಗೆ ವಿಮೆ ನೋಂದಣಿಯ ಕೊನೆಯ ದಿನಾಂಕ ಜುಲೈ 15 ಆಗಿದ್ದು, ಭತ್ತ (ನೀರಾವರಿ), ತೊಗರಿ (ಮಳೆಯಾಶ್ರಿತ), ನವಣೆ (ಮಳೆಯಾಶ್ರಿತ), ಮುಸುಕಿನ ಜೋಳ (ನೀರಾವರಿ) ಹಾಗೂ ಸಜ್ಜೆ (ಮಳೆಯಾಶ್ರಿತ) ಸೇರಿದಂತೆ ಉಳಿದ ಅಧಿಸೂಚಿತ ಬೆಳೆಗಳಿಗೆ ಜುಲೈ 31 ಕೊನೆಯ ದಿನಾಂಕವಾಗಿದೆ.

ಬೆಳೆ ಸಾಲ ಪಡೆದ ರೈತರು ವಿಮೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದರೆ, ನಿಗದಿತ ಅವಧಿಯೊಳಗೆ ಸಂಬಂಧಿಸಿದ ಬ್ಯಾಂಕ್‌ಗೆ ಲಿಖಿತ ಮುಚ್ಚಳಿಕೆ ಪತ್ರ ಸಲ್ಲಿಸಬೇಕು. ಬೆಳೆ ಸಾಲ ಪಡೆಯದ ರೈತರು ಸಮೀಪದ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ www.samrakshane.karnataka.gov.in ತಂತ್ರಾಂಶದ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.

ನೋಂದಣಿಗೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಹಾಗೂ ಫಹಣಿ (RTC) ದಾಖಲೆಗಳು ಕಡ್ಡಾಯವಾಗಿದ್ದು, ರೈತರು FRUITS ತಂತ್ರಾಂಶದಲ್ಲಿ ಜಮೀನು ನೋಂದಣಿ ಮಾಡಿ FID ಸಂಖ್ಯೆ ಹೊಂದಿರುವುದು ಅಗತ್ಯವಾಗಿದೆ. ಅಲ್ಲದೆ, ಸ್ವಯಂ ಬೆಳೆ ಸಮೀಕ್ಷೆ (Self Crop Survey) ಮೂಲಕ ತಾವು ಬೆಳೆದ ಬೆಳೆಯನ್ನು ದೃಢೀಕರಿಸಿ ಸರಿಯಾದ ಮಾಹಿತಿಯನ್ನು ದಾಖಲಿಸಬೇಕು ಎಂದು ಇಲಾಖೆ ತಿಳಿಸಿದೆ.

ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರಿಗೆ ವಿಮಾ ಮೊತ್ತ ಒಂದೇ ಆಗಿರುತ್ತದೆ. ಈ ಯೋಜನೆಯ ವಿಮಾ ಸಂಸ್ಥೆಯಾಗಿ ಇಫ್ಕೋ ಟೋಕಿಯೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ಸಂಖ್ಯೆ 1800 103 5490 ಅಥವಾ ವೆಂಕಟಗಿರಿ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವಂತೆ ಕೃಷಿ ಅಧಿಕಾರಿ ಹರೀಶ್ ಎಸ್.ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News

About The Author

error: Content is protected !!