October 16, 2026

ಸೆ. 6ರಂದು ತುಂಗಭದ್ರಾ ಕಾಲುವೆಗೆ ಬಾಗಿನ ಅರ್ಪಣೆ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 03/09/2026

ಗಂಗಾವತಿ: ತುಂಗಭದ್ರಾ ಸೇವಾ ಸಮಿತಿ ವತಿಯಿಂದ ಸೆಪ್ಟೆಂಬರ್ 6 ರಂದು ಭಾನುವಾರ ಶ್ರೀ ವಾಣಿಭದ್ರೇಶ್ವರ ಸ್ವಾಮಿ ಮೂರ್ತಿಗೆ ರುದ್ರಾಭಿಷೇಕ ಹಾಗೂ ತುಂಗಭದ್ರಾ ಕಾಲುವೆಗೆ ಬಾಗಿನ ಅರ್ಪಿಸುವ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕ ನೆರವೇರಿಸಿದ ಬಳಿಕ ತುಂಗಭದ್ರಾ ಕಾಲುವೆಗೆ ಬಾಗಿನ ಅರ್ಪಿಸಲಾಗುವುದು. ನಾಡಿನ ಜನರ ಸುಖ-ಸಮೃದ್ಧಿ, ಉತ್ತಮ ಮಳೆ ಹಾಗೂ ರೈತರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.

ಶ್ರದ್ಧಾ-ಭಕ್ತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸಮಿತಿಯ ಪ್ರಮುಖರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ತುಂಗಭದ್ರಾ ಸೇವಾ ಸಮಿತಿಯ ಪ್ರಮುಖರಾದ ಮಾಂತೇಶ್ ಸ್ವಾಮಿ ಶಾಸ್ತ್ರಿಮಠ, ವಕೀಲರಾದ ಮಲ್ಲಿಕಾರ್ಜುನ್ ಮುಸಾಲಿ, ಹನುಮೇಶ್, ಸೋಮನಾಥ ಪಟ್ಟಣಶೆಟ್ಟಿ, ಶರಭಯ್ಯ ಸ್ವಾಮಿ, ವೀರೇಶ್ ಆನೆಗೊಂದಿ, ಅನಿಲ್ ಕುಮಾರ್, ಚನ್ನಬಸವ ಕಲ್ಮಠ, ರೋಹಿತ್, ವಿನಯ್ ಕಂಪ್ಲಿ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!