October 16, 2026

ಕನಕಗಿರಿ ತಾಲೂಕು ಬಯಲಾಟ ಕಲಾವಿದರ ಸಂಘ ಅಸ್ತಿತ್ವಕ್ಕೆ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿದಿನಾಂಕ: 21/09/2026 ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಬಯಲಾಟಕ್ಕೆ ಅವಕಾಶ ಕೊಡಿ: ನಾಗರಾಜ್ ಇಂಗಳಗಿ…

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 21/09/2026

ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಬಯಲಾಟಕ್ಕೆ ಅವಕಾಶ ಕೊಡಿ: ನಾಗರಾಜ್ ಇಂಗಳಗಿ

ಗಂಗಾವತಿ: ಮಂಗಳೂರು ಭಾಗದ ಯಾವುದೇ ಕಾರ್ಯಕ್ರಮಗಳಲ್ಲಿ ಯಕ್ಷಗಾನಕ್ಕೆ ಪ್ರಸಂಸೆ ಕೊಟ್ಟಂತೆ ೨೯ಕ್ಕು ಹೆಚ್ಚು ಜಿಲ್ಲೆಗಳಲ್ಲಿ ವೈವಿದ್ಯಮಯಾಗಿರುವ ಬಯಲಾಟ ಕಲೆ ಉಳಿಯಲು ಪ್ರದರ್ಶನಕ್ಕೆ ಹೆಚ್ಚು ಆದ್ಯತೆ ನೀಡಬೇಕಿದ್ದು ಕಾರಟಗಿಯಲ್ಲಿ ನಡೆಯಲಿರುವ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಅವಕಾಶ ಕಲ್ಪಿಸಿಕೊಡಬೇಕೆಂದು ಕೊಪ್ಪಳ ಜಿಲ್ಲಾ ಬಯಲಾಟ ಕಲಾವಿದರ ಸಂಘದ ಅಧ್ಯಕ್ಷ ನಾಗರಾಜ್ ಇಂಗಳಗಿ ಮನವಿ ಮಾಡಿದರು,

ಅವರು ಜೂಲಿಕೆರಿ ಓಣಿಯಲ್ಲಿ  ಕನಕಗಿರಿ ತಾಲೂಕು ಬಯಲಾಟ ಕಲಾವಿದರ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರೋತ್ಸಾಹದ ಕೊರತೆಯಿಂದ ಬಯಲಾಟದೆಡೆಗೆ ಆಸಕ್ತಿ ಕಡಿಮೆಯಾಗುತ್ತಿದೆ, ಯುವ ಸಮುದಾಯವನ್ನು ಸೆಳೆಯುವ ನಿಟ್ಟಿನಲ್ಲಿ ಎಲ್ಲರೂ ಸಾಂಕಿಕ ಪ್ರಯತ್ನ ಮಾಡಬೇಕಿದೆ, ಕಾರ್ಯಕ್ರಮಗಳಲ್ಲಿ ಬಯಲಾಟ ಕಲೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದಲ್ಲಿ ಪ್ರದರ್ಶನ ವೆಚ್ಚ ತಗ್ಗಲಿದ್ದು, ಕಲೆ ಉಳಿಯುವುದರ ಜೊತೆಗೆ ಕಲಾವಿದರನ್ನು ಉತ್ತೇಜಿಸಿದಂತಾಗುತ್ತದೆ. ಪ್ರತಿಫಲಫೇಕ್ಷೆ ಇಲ್ಲದೆ ಹವ್ಯಾಸಿ ಕಲಾವಿದರು ಬಯಲಾಟ ಉಳಿಸಿಕೊಂಡು ಬಂದಿದ್ದು, ಸಾರ್ವಜನಿಕರ ನಿರಾಸಕ್ತಿಯಿಂದಾಗಿ ಪ್ರದರ್ಶನ ಸಂಖ್ಯೆ ಕಡಿಮೆಯಾಗುತ್ತಿರುವುದು ಖೇದದ ಸಂಗತಿ ಎಂದರು.

ಕನಕಗಿರಿಯಲ್ಲಿ ಸೂಕ್ತ ರಂಗಮಂದಿರ ಅಗತ್ಯವಿದ್ದು ಜನಪ್ರತಿನಿಧಿಗಳು ಗಮನಹರಿಸಬೇಕು, ಕಲಾವಿದರಿಗೆ ಮಾಶಾಸನ, ವಿಮೆ ಹಾಗು ಸರಕಾರಿ ಸೌಲಭ್ಯ ಒದಗಿಸಲು ಸಂಘ ಬದ್ಧವಾಗಿದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿರಿಗೆ ಗುರುತಿನ ಚೀಟಿ ನೀಡಲಾಗುತ್ತಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ ೩೦ ಕೊನೆಯ ದಿನವಾಗಿದ್ದು, ಕಲಾವಿದರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಬೇಕು ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಬಯಲಾಟ ಕಲಾವಿದರ ಸಂಘದ ಗಂಗಾವತಿ ತಾಲೂಕು ಕಾರ್ಯದರ್ಶಿ ವೆಂಕಟೇಶ್ ದಂಡೀನ್, ಕನಕಗಿರಿ ತಾಲೂಕಾ ಘಟಕಕ್ಕೆ ನೂತನವಾಗಿ ಆಯ್ಕೆಯಾದ ಗೌರವಧ್ಯಕ್ಷ  ಖಾಸೀಮ್ ಸಾಬ್ ದೊಡ್ಡಮನಿ, ಅಧ್ಯಕ್ಷ ಪಂಪಾಪತಿ ತುಪ್ಪದ್, ಉಪಾಧ್ಯಕ್ಷರಾದ ನಾಗರಾಜ್ ಚಿನ್ನೂರು, ಶಾಮೀದ್‌ಸಾಬ್ ಜೂಲಿಕೆರೆ, ವೀರೇಶ್ ಚೂಡಾಮಣಿ, ಪ್ರಧಾನ ಕಾರ್ಯದರ್ಶಿ ಜೆ. ವಲಿಸಾಬ್ ಇತರರಿದ್ದರು.

ನೂತನ ಪದಾಧಿಕಾರಿಗಳ ವಿವರ ಹೀಗಿದೆ: ಖಾಸಿಮ್ ಸಾಬ್ ದೊಡ್ಡಮನಿ (ಗೌರವಧ್ಯಕ್ಷ), ಲತೀಫ್‌ಸಾಬ್ ಜುಲಿಕೆರೆ (ಗೌರವ ಸಲಹೆಗಾರ), ಪಂಪಾಪತಿ ತುಪ್ಪದ್ (ಅಧ್ಯಕ್ಷ), ನಾಗರಾಜ್ ಚಿನ್ನೂರು (ಉಪಾಧ್ಯಕ್ಷ), ಶಾಮೀದ್‌ಸಾಬ್ ಜುಲಿಕೆರೆ (ಉಪಾಧ್ಯಕ್ಷ), ವೀರೇಶ್ ಚೂಡಾಮಣಿ (ಉಪಾಧ್ಯಕ್ಷ), ವಲಿಸಾಬ್ ಜೆ. (ಪ್ರಧಾನ ಕಾರ್ಯದರ್ಶಿ), ಶೇಖರಪ್ಪ ಬಾವಿಕಟ್ಟಿ (ಕಾರ್ಯದರ್ಶಿ), ಬಾಳಪ್ಪ ತಗ್ಗಿನಮನಿ (ಸಜ ಕಾರ್ಯದರ್ಶಿ), ಗಿರೀಶ್ ಮಡ್ಡೇರ್ (ಖಜಾಂಚಿ), ಮಹ್ಮದ್ ರಫೀ (ಸಂಘಟನಾ ಕಾರ್ಯದರ್ಶಿ) ಕಾರ್ಯಕಾರಿ ಮಂಡಳಿ ಸದಸ್ಯರಾಗಿ ರಾಜಸಾಬ್ ಡಗ್ಗಿ, ಟಿ.ಕರಡೆಪ್ಪ, ಲತಿಫ್‌ಸಾಬ್, ಹುಸೇನ್‌ಸಾಬ್, ಹೊನ್ನೂರಸಾಬ್, ಪಾಪಣ್ಣ, ಆಯ್ಕೆಯಾಗಿದ್ದಾರೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!