🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 24/09/2026
ಪಿಕೆಪಿಎಸ್ 75ನೇ ವಾರ್ಷಿಕ ಮಹಾಸಭೆ ಸಂಭ್ರಮ
ಗಂಗಾವತಿ: ತಾಲೂಕಿನ ಮರಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ಹಾಗೂ 2025-26ನೇ ಸಾಲಿನ ಸಂಘದ 75ನೇ ವಾರ್ಷಿಕ ಮಹಾಸಭೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸಂಘದ ಅಧ್ಯಕ್ಷ ದೊಡ್ಡ ಬಸವನಗೌಡ ತಂದೆ ಕಂತೆಗೌಡ ಮಾಲಿಪಾಟೀಲ್ ಹಾಗೂ ಉಪಾಧ್ಯಕ್ಷ ಮಾರಪ್ಪ ತಂದೆ ಅಂಬಣ್ಣ ಕುಂಟೋಜಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಹೆಬ್ಬಾಳು ಬ್ರಾಹ್ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಅರಳಿಯ ಶ್ರೀ ಗವಿಸಿದ್ದೇಶ್ವರ ತಾತನವರು ದಿವ್ಯ ಸಾನಿಧ್ಯ ವಹಿಸಿದ್ದರು. ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಲಾಯಿತು.
ನಂತರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ವಿವಿಧ ಚಟುವಟಿಕೆಗಳು, ಸದಸ್ಯರಿಗೆ ನೀಡಲಾಗುತ್ತಿರುವ ಸೇವೆಗಳು ಹಾಗೂ ಸಂಘದ ಪ್ರಗತಿ ಕುರಿತು ಚರ್ಚಿಸಲಾಯಿತು. ರೈತರು ಮತ್ತು ಸದಸ್ಯರಿಗೆ ಸಹಕಾರ ಸಂಘಗಳ ಮೂಲಕ ದೊರೆಯುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಕುರಿತು ಒತ್ತು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ದೊಡ್ಡ ಬಸವನಗೌಡ, ಉಪಾಧ್ಯಕ್ಷ ಮಾರಪ್ಪ, ನಿರ್ದೇಶಕರಾದ ಬಸವರಾಜ, ಅಯ್ಯನಗೌಡ, ಲಿಂಗಪ್ಪ ಅಲಹಳ್ಳಿ, ಶರಣಪ್ಪ, ವೀರೇಶಪ್ಪ, ಹನುಮಂತಪ್ಪ, ವೀರೇಶ, ನಾಗಮ್ಮ, ನಿರ್ಮಲ, ಡ್ಯಾಮ ಕುರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಬರಗೂರು, ಬಾಲಪ್ಪ ಮಡಿವಾಳ, ಕುಮಾರಿ ಸ್ನೇಹ ಹಳ್ಳಳ್ಳಿ, ಅಂಬರೀಶ್ ಸೇರಿದಂತೆ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ