October 16, 2026

ಬಳ್ಳಾರಿಯಲ್ಲಿ ಅದ್ಧೂರಿಯಾಗಿ 13ನೇ ವರ್ಷದ ಶರಣ ಹೂಗಾರ ಮಾದಯ್ಯ ಜಯಂತೋತ್ಸವ

🟥 ಟಿ ಪಬ್ಲಿಕ್ ನ್ಯೂಸ್ | ಬಳ್ಳಾರಿ
ದಿನಾಂಕ: 27/09/2026

ಬಳ್ಳಾರಿ: ಕರ್ನಾಟಕ ರಾಜ್ಯ ಬಯಲಾಟ ಕಲಾವಿದರ ಸಂಘದ ಸಹಯೋಗದೊಂದಿಗೆ ಶ್ರೀ ಬಸವೇಶ್ವರ ಸಾಮಾಜಿಕ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ 13ನೇ ವರ್ಷದ ಕಲ್ಯಾಣದ ಶ್ರೀ ಶರಣ ಹೂಗಾರ ಮಾದಯ್ಯನವರ ಜಯಂತೋತ್ಸವವನ್ನು ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಜಯಂತೋತ್ಸವದ ಅಂಗವಾಗಿ ವಿಕಲಚೇತನ ಹಾಗೂ ಹಿರಿಯ ಕಲಾವಿದರಿಗೆ ಉಚಿತ ಇನ್ಸೂರೆನ್ಸ್ ಪಾಲಿಸಿ ವಿತರಣೆ, ಭರತನಾಟ್ಯ ನೃತ್ಯ ಪ್ರದರ್ಶನ, ಭಕ್ತ ಪ್ರಹ್ಲಾದ ಬಯಲಾಟ ಪ್ರದರ್ಶನ ಹಾಗೂ ಹಿರಿಯ ಕಲಾವಿದೆಯರಿಂದ ರಂಗಗೀತೆಗಳ ಗಾಯನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಳಾರಿ ಜಿಲ್ಲೆಯ ಹೆಸರಾಂತ ಪ್ರಥಮ ದರ್ಜೆ ಗುತ್ತಿಗೆದಾರರು ಹಾಗೂ ಅನ್ನದಾನಿಗಳಾದ ಮಸಿದಿಪುರ ಸಿದ್ದರಾಮಗೌಡರು ಹಾಗೂ ಮಾಜಿ ಶಾಸಕರಾದ ಶಿವರಾಮ ರೆಡ್ಡಿ ಅವರ ಮೊಮ್ಮಗ ಜಗದೀಶ ಗೌಡ ಅವರು ವಹಿಸಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಮಾಧವ ರೆಡ್ಡಿ, ನಿರ್ದೇಶಕರಾದ ಕೆ. ಜಗದೀಶ್, ಗುರುಲಿಂಗಪ್ಪ, RCF ಹಿರಿಯ ಮುಖಂಡರಾದ ಗುರುಮೂರ್ತಿ ಜೀರ್ರ, ರುದ್ರಪ್ಪ ಜೀರ್ರ, ಕೆನರಾ ಬ್ಯಾಂಕ್ ಮ್ಯಾನೇಜರ್ ಚೆನ್ನಬಸವ ಹೂಗಾರ, ಟಿವಿ5 ಬಳ್ಳಾರಿಯ ಸಿದ್ದು ಹೂಗಾರ, ಸಂಗೀತ ನಿರ್ದೇಶಕರಾದ ಜಿ. ವೀರನಗೌಡ, ಹಿರಿಯ ಪತ್ರಕರ್ತ ಸಿದ್ದರಾಮಪ್ಪ ಸಿರಿಗೇರಿ ಹಾಗೂ ಆಂಧ್ರ ಗಡಿನಾಡಿನ ಆಲೂರು ತಾಲೂಕು ಅಧ್ಯಕ್ಷರಾದ ದರಗಣ್ಣ ಎಳ್ಳಾರ್ತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ವೇಳೆ ಕರ್ನಾಟಕ ರಾಜ್ಯ ಬಯಲಾಟ ಕಲಾವಿದರ ಸಂಘದ ಜಿಲ್ಲಾಧ್ಯಕ್ಷರುಗಳಾದ ವಿಜಯನಗರದ ರಾಜಾಪುರ ವೀರೇಶ್, ಕೊಪ್ಪಳದ ಇಂಗಳಗಿ ನಾಗರಾಜ, ರಾಯಚೂರಿನ ಶಂಭನಗೌಡ, ಬಳ್ಳಾರಿ ಜಿಲ್ಲಾ ರಾಮಪ್ಪ ಮೇಷ್ಟ್ರು, ವಿಜಯಕುಮಾರೆಡ್ಡಿ ಹಾಗೂ ತಾಲೂಕು ಅಧ್ಯಕ್ಷರುಗಳಾದ ಸಿರಗುಪ್ಪದ ವೇದಾವತಿ, ಸಿಡಗಿನಮಳೆಯ, ತಬಲ ವಾದಕರಾದ ಗೂಟೂರು ಗಾದಿ ಲಿಂಗಯ್ಯಸ್ವಾಮಿ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಹಿರಿಯ ಕಲಾವಿದೆಯರಾದ ಎರೆಮ್ಮ, ಓಂಕಾರಮ್ಮ, ಮೀನಾಕ್ಷಿ ಅವರು ಸುಶ್ರಾವ್ಯ ರಂಗಗೀತೆಗಳನ್ನು ಹಾಡಿ ರಂಜಿಸಿದರು. ಭರತನಾಟ್ಯ ಕಲಾವಿದೆಯರ ನೃತ್ಯವೂ ಪ್ರೇಕ್ಷಕರ ಮನಸೆಳೆಯಿತು.

ಈ ಸಂದರ್ಭದಲ್ಲಿ ಕಲಾವಿದರಿಗೆ ಬಯಲಾಟ ಕಲಾವಿದರ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರು ತಮ್ಮ ಸ್ವಂತ 2 ಲಕ್ಷ ರೂ. ಹಣದಿಂದ ಎಲ್‌ಐಸಿ ಪಾಲಿಸಿ ಬಾಂಡ್‌ಗಳನ್ನು ನೀಡಿ ಗೌರವಿಸಿದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!