October 16, 2026

ಕಾರಟಗಿಯಲ್ಲಿ ದಲಿತ ಸೇನೆ ತಾಲೂಕು ಸಮಿತಿ ರಚನೆ – ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ವಿತರಣೆ

🟥 ಟಿ ಪಬ್ಲಿಕ್ ನ್ಯೂಸ್ | ಕಾರಟಗಿ
ದಿನಾಂಕ: 29/06/2026

ಕಾರಟಗಿ: ದಲಿತ ಸೇನೆ ರಾಜ್ಯಾಧ್ಯಕ್ಷರಾದ ಹನುಮಂತಪ್ಪ ಜಿ. ಯಳಸಂಗಿ ಅವರ ಆದೇಶದ ಮೇರೆಗೆ, ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಉಡಚಪ್ಪ ಶ್ರೀರಾಮನಗರ ಅವರ ನೇತೃತ್ವದಲ್ಲಿ ಕಾರಟಗಿ ಪಟ್ಟಣದ ಐ.ಬಿ.ಯಲ್ಲಿ ದಲಿತ ಸೇನೆ ಕಾರಟಗಿ ತಾಲೂಕು ಸಮಿತಿ ರಚನೆ ಕಾರ್ಯಕ್ರಮ ಭಾನುವಾರ ಯಶಸ್ವಿಯಾಗಿ ನಡೆಯಿತು.

ಸಭೆಯಲ್ಲಿ ಸರ್ವಾನುಮತದಿಂದ ದೇವರಾಜ್ ಉಳೆನೂರು ಅವರನ್ನು ದಲಿತ ಸೇನೆ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.

ಕಾರಟಗಿ ತಾಲೂಕು ಸಮಿತಿಗೆ ಉಪೇಂದ್ರ ವಕೀಲರು (ಜಮಾಪುರ) ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಯಂಕೋಬ ನಾಯಕ (ಸಿದ್ದಾಪುರ) ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು, ಶರಣಪ್ಪ ಈಳಿಗನೂರು, ಹುಲುಗಪ್ಪ ಚಳ್ಳೂರು ಹಾಗೂ ಶಿವರಾಜ್ ದೊಡ್ಡಮನಿ (ಹುಲ್ಕಿಹಾಳ ಕ್ಯಾಂಪ್) ಅವರನ್ನು ಧ್ರುವ (ತಿಮ್ಮಣ್ಣ) ಜನತಾ ಕ್ಯಾಂಪ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.

ಸಂಘಟನಾ ಸದಸ್ಯರಾಗಿ ಶಿವಪ್ಪ ಕಕ್ಕರಗೋಳ, ಶರಣಪ್ಪ ಕಕ್ಕರಗೋಳ, ಗಾದಿಲಿಂಗಪ್ಪ ಜಮಾಪುರ, ಆನಂದ್ ಜಮಾಪುರ, ಅನಿಲ್ ಭೋವಿ, ಖಲೀಮ್, ಉದಯ್ ಭೋವಿ, ಹನುಮೇಶ್ ಭೋವಿ (ಸಿದ್ದಾಪುರ), ಮುದುಕಪ್ಪ ಚಳ್ಳೂರು, ಸಂದೀಪ್, ಸುದೀಪ್, ಭೀಮೇಶ್ ಭಾವಿಕಟ್ಟಿ, ವೆಂಕಟೇಶ್, ಹನುಮೇಶ್ ಹಾಗೂ ಹನುಮೇಶ್ ದೊಡ್ಡಮನಿ (ಹುಲ್ಕಿಹಾಳ ಕ್ಯಾಂಪ್) ಸೇರಿದಂತೆ ಅನೇಕರನ್ನು ನೇಮಕ ಮಾಡಲಾಯಿತು.

ಇದೇ ವೇಳೆ ಹುಲ್ಕಿಹಾಳ ಗ್ರಾಮ ಘಟಕದ ಅಧ್ಯಕ್ಷರಾಗಿ ಯಮನೂರ ಹುಲ್ಕಿಹಾಳ, ಉಪಾಧ್ಯಕ್ಷರಾಗಿ ಹುಸೆನಪ್ಪ ಹುಲ್ಕಿಹಾಳ ಹಾಗೂ ಸದಸ್ಯರಾಗಿ ಅಮರೇಶ್ ಹುಲ್ಕಿಹಾಳ, ಅರುಣಕುಮಾರ್ ಹುಲ್ಕಿಹಾಳ, ರಮೇಶ್ ತಿಮ್ಮಾಪುರ ಸೇರಿದಂತೆ ಹಲವರಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರಿಗೆ ಜಿಲ್ಲಾ ಅಧ್ಯಕ್ಷ ಉಡಚಪ್ಪ ಶ್ರೀರಾಮನಗರ ಅವರು ಭೀಮ ವಂದನೆ ಸಲ್ಲಿಸಿ ಅಭಿನಂದಿಸಿದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!