🟥 ಟಿ ಪಬ್ಲಿಕ್ ನ್ಯೂಸ್ | ಹಗರಿಬೊಮ್ಮನಹಳ್ಳಿ
ದಿನಾಂಕ: 30/06/2026
ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ನಂದಿಪುರ ಮಠದಲ್ಲಿ ಪ್ರತಿ ಹುಣ್ಣಿಮೆಯಂದು ನಡೆಯುವ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಆಗಮಿಸಿ ಚಿಕಿತ್ಸೆ ಪಡೆದರು.

ಕಳೆದ ಏಳು ವರ್ಷಗಳಿಂದ ಪಾರಂಪರಿಕ ವೈದ್ಯರಾದ ಡಾ. ಬಸವರಾಜ್ ವೀರಭದ್ರಯ್ಯ ಹಿರೇಮಠ ಹಾಗೂ ಅವರ ಪುತ್ರ ಡಾ. ಕಲ್ಲೇಶ್ ಕುಮಾರ್ ಬಸವರಾಜ್ ಹಿರೇಮಠ (ಎಂ.ಡಿ.) ಅವರ ನೇತೃತ್ವದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ನಡೆಯುತ್ತಿದೆ.
ಆಯೋಜಕರ ಮಾಹಿತಿ ಪ್ರಕಾರ, ಪಾರ್ಸಿ, ಮೂಲವ್ಯಾಧಿ, ಮಂಡಿನೋವು, ಸಕ್ಕರೆ ಕಾಯಿಲೆ, ಅಸ್ತಮಾ, ನರಗಳ ದೌರ್ಬಲ್ಯ, ಸಂತಾನ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗಾಗಿ ಜನರು ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ಆಂಧ್ರ ಪ್ರದೇಶದಿಂದಲೂ ಶಿಬಿರಕ್ಕೆ ಆಗಮಿಸುತ್ತಿದ್ದಾರೆ.
ಪರಮಪೂಜ್ಯ ಶ್ರೀ ಗುರು ದೊಡ್ಡ ಬಸವೇಶ್ವರರು ಹಾಗೂ ಪರಮಪೂಜ್ಯ ಶ್ರೀ ಗುರು ಚರಂತಪ್ಪಜ್ಜನವರ ಕೃಪಾಶೀರ್ವಾದದಿಂದ, ಪರಮಪೂಜ್ಯ ಶ್ರೀ ಡಾ. ಮಹೇಶ್ವರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ಶಿಬಿರ ನಿರಂತರವಾಗಿ ನಡೆಯುತ್ತಿದ್ದು, ಇದುವರೆಗೆ ಲಕ್ಷಾಂತರ ಜನರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರತಿ ವರ್ಷ ಮೃಗಶಿರ ನಕ್ಷತ್ರದ ಸಂದರ್ಭದಲ್ಲಿ ಅಸ್ತಮಾ ರೋಗಿಗಳಿಗೆ ವಿಶೇಷ ಉಚಿತ ಔಷಧಿ ವಿತರಿಸಲಾಗುತ್ತದೆ. ವೈದ್ಯರ ಸಾಮಾಜಿಕ ಸೇವೆಯನ್ನು ಸಾಹಿತಿ ಎಸ್.ವಿ. ಪಾಟೀಲ್ ಗುಂಡೂರು, ವಾಸ್ತು ತಜ್ಞ ಡಾ. ಮಂಜುನಾಥ್ ಕುರುಗೋಡು ಸೇರಿದಂತೆ ಹಲವಾರು ಗಣ್ಯರು ಶ್ಲಾಘಿಸಿ ಅಭಿನಂದಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಡಾ. ಬಸವರಾಜ್ ವೀರಭದ್ರಯ್ಯ ಹಿರೇಮಠ ಹಾಗೂ ಡಾ. ಕಲ್ಲೇಶ್ ಕುಮಾರ್ ಬಸವರಾಜ್ ಹಿರೇಮಠ ಅವರನ್ನು 98457 82214 ಮತ್ತು 84978 29234 ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
“ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ: ತಪ್ಪಿತಸ್ಥರನ್ನು ತಕ್ಷಣ ಅಮಾನತು ಮಾಡಿ, ಇಲ್ಲದಿದ್ದರೆ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಘೇರಾವ್ – ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ”
ಶಾಲೆಯಲ್ಲೇ ಮುಖ್ಯೋಪಾಧ್ಯಾಯರ ಕಿತ್ತಾಟ! ಸಿಸಿಟಿವಿ ಪರಿಶೀಲಿಸಿ ತಪ್ಪಿತಸ್ಥರನ್ನು ಅಮಾನತು ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಿ: ಮಹಾನಾಯಕ ಜನಜಾಗೃತಿ ವೇದಿಕೆ ಆಗ್ರಹ
ರಸ್ತೆ ಒತ್ತುವರಿ ಆರೋಪ ನಿರಾಧಾರ; ಕಾನೂನುಬದ್ಧವಾಗಿಯೇ ರೆಸಾರ್ಟ್ ನಿರ್ಮಿಸಲಾಗಿದೆ: ರಮೇಶ್ ನಾಯಕ