🟥 ಟಿ ಪಬ್ಲಿಕ್ ನ್ಯೂಸ್ | ಕೊಪ್ಪಳ
ದಿನಾಂಕ: 03/07/2026
ಸಮಾಜಮುಖಿ ಹೋರಾಟಗಳ ಮೂಲಕ ಜನರ ವಿಶ್ವಾಸ ಗಳಿಸಿದ ದಲಿತ ಸೇನೆ: ನ್ಯಾಯಕ್ಕಾಗಿ ನಿರಂತರ ಧ್ವನಿಯಾಗಿರುವ ಸಂಘಟನೆ
ಕೊಪ್ಪಳ: ಸಮಾಜದಲ್ಲಿ ಶೋಷಿತರು, ದಲಿತರು, ಹಿಂದುಳಿದವರು, ಕಾರ್ಮಿಕರು, ರೈತರು ಹಾಗೂ ಸಾಮಾನ್ಯ ಜನರ ಧ್ವನಿಯಾಗಿ ಹೊರಹೊಮ್ಮಿರುವ ದಲಿತ ಸೇನೆ ಸಂಘಟನೆ, ಅಲ್ಪಾವಧಿಯಲ್ಲೇ ಜನಪರ ಹೋರಾಟಗಳ ಮೂಲಕ ಜಿಲ್ಲೆಯಾದ್ಯಂತ ತನ್ನದೇ ಆದ ವಿಶಿಷ್ಟ ಗುರುತನ್ನು ಮೂಡಿಸಿದೆ.
ರಾಜ್ಯಾಧ್ಯಕ್ಷ ಹನುಮಂತಪ್ಪ ಜಿ ಯಳಸಂಗಿ ಅವರ ಮಾರ್ಗದರ್ಶನದಲ್ಲಿ 2026ರ ಫೆಬ್ರುವರಿ 11ರಂದು ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಉಡಚಪ್ಪ ಶ್ರೀರಾಮನಗರ ನೇಮಕಗೊಂಡ ಬಳಿಕ ಸಂಘಟನೆ ಹೊಸ ಚೈತನ್ಯ ಪಡೆದುಕೊಂಡಿದೆ. ಕೆಲವೇ ತಿಂಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಘಟನೆಯನ್ನು ವಿಸ್ತರಿಸುವ ಜೊತೆಗೆ ಜನಪರ ಹೋರಾಟಗಳಿಗೆ ವೇದಿಕೆಯಾಗುವಲ್ಲಿ ಯಶಸ್ವಿಯಾಗಿದೆ.
ದಲಿತ ಸೇನೆ ಎಂಬ ಹೆಸರು ದಲಿತ ಸಮುದಾಯವನ್ನು ಸೂಚಿಸಿದರೂ, ಅದರ ಕಾರ್ಯವ್ಯಾಪ್ತಿ ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗಿಲ್ಲ. “ನ್ಯಾಯ ಬೇಕಾದವರಿಗೆ ನ್ಯಾಯ ದೊರಕಬೇಕು, ಅನ್ಯಾಯಕ್ಕೊಳಗಾದವರ ಪರ ನಿಲ್ಲಬೇಕು” ಎಂಬ ಧ್ಯೇಯವನ್ನೇ ಸಂಘಟನೆ ತನ್ನ ಪ್ರಮುಖ ಉದ್ದೇಶವನ್ನಾಗಿ ಮಾಡಿಕೊಂಡಿದೆ. ಜಾತಿ, ಧರ್ಮ, ವರ್ಣ, ಭಾಷೆ ಅಥವಾ ರಾಜಕೀಯ ಭೇದವಿಲ್ಲದೆ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯನಿರ್ವಹಿಸುತ್ತಿದೆ.
ಸಂಘಟನೆಯ ಚಿಂತನೆಗೆ ಬಸವಣ್ಣ, ಗೌತಮ ಬುದ್ಧ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ, ಮಾನವೀಯತೆ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ಮೌಲ್ಯಗಳ ತತ್ವಗಳು ಬಲವಾದ ಅಡಿಪಾಯವಾಗಿವೆ. ಶೋಷಣೆ, ಭ್ರಷ್ಟಾಚಾರ, ಅಕ್ರಮ, ದೌರ್ಜನ್ಯ ಮತ್ತು ಅನ್ಯಾಯದ ವಿರುದ್ಧ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಹೋರಾಟ ನಡೆಸುವುದೇ ಸಂಘಟನೆಯ ಮೂಲ ಧ್ಯೇಯವಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಸಂಘಟನೆ ಆರಂಭವಾದ ದಿನದಿಂದಲೂ ಜನಪರ ಹೋರಾಟಗಳ ಮೂಲಕ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ. ದಿನಾಂಕ: 5/4/2026 ರಂದು ಜಿಲ್ಲಾಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿತು ಪ್ರಥಮ ಸ್ಥಾನ.20,000, ದ್ವಿತೀಯ ಸ್ಥಾನ 10,000, ತೃತೀಯ ಸ್ಥಾನ 5,000 ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಡೊನೇಷನ್ ವಸೂಲಿ, ಸಾರ್ವಜನಿಕ ಸಮಸ್ಯೆಗಳು, ಬಡವರ ಹಕ್ಕುಗಳು, ಸರ್ಕಾರಿ ಸೌಲಭ್ಯಗಳ ಅನುಷ್ಠಾನ, ಸಾಮಾಜಿಕ ನ್ಯಾಯ, ಆಡಳಿತಾತ್ಮಕ ನಿರ್ಲಕ್ಷ್ಯ ಸೇರಿದಂತೆ ವಿವಿಧ ವಿಷಯಗಳಲ್ಲಿ ನಿರಂತರವಾಗಿ ಧ್ವನಿ ಎತ್ತಿದೆ. ಇಲ್ಲಿಯವರೆಗೆ ಸುಮಾರು ಎಂಟು ಪ್ರಮುಖ ಹೋರಾಟಗಳನ್ನು ಸಂಘಟನೆ ನಡೆಸಿದ್ದು, ಅವುಗಳಲ್ಲಿ ಹಲವಾರು ಹೋರಾಟಗಳು ಫಲಪ್ರದವಾಗಿ ಕಾರ್ಯರೂಪಕ್ಕೆ ಬಂದಿರುವುದು ಸಂಘಟನೆಯ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ.
ಸಂಘಟನೆಯ ಮತ್ತೊಂದು ವಿಶೇಷತೆ ಎಂದರೆ ಕೇವಲ ಪ್ರತಿಭಟನೆ ನಡೆಸುವುದಲ್ಲ; ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ, ಮನವಿ, ಕಾನೂನುಬದ್ಧ ಹೋರಾಟ ಮತ್ತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಡುವ ಪ್ರಯತ್ನವನ್ನೂ ಮಾಡುತ್ತಿದೆ. ಇದರಿಂದ ಜನರಲ್ಲಿ ಸಂಘಟನೆಯ ಮೇಲಿನ ವಿಶ್ವಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಜಿಲ್ಲಾಧ್ಯಕ್ಷ ಉಡಚಪ್ಪ ಶ್ರೀರಾಮನಗರ ಅವರ ನೇತೃತ್ವದಲ್ಲಿ ಸಂಘಟನೆಯನ್ನು ಗ್ರಾಮಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಬಲಪಡಿಸುವ ಕಾರ್ಯವೂ ವೇಗವಾಗಿ ನಡೆಯುತ್ತಿದೆ. ಈಗಾಗಲೇ ಕೊಪ್ಪಳ, ಗಂಗಾವತಿ, ಕಾರಟಗಿ ಮತ್ತು ಕುಕುನೂರು ತಾಲೂಕು ಘಟಕಗಳು, ಒಂದು ನಗರ ಘಟಕ ಹಾಗೂ ಐದು ಗ್ರಾಮ ಘಟಕಗಳು ಸ್ಥಾಪನೆಯಾಗಿದ್ದು, ಇನ್ನಷ್ಟು ಘಟಕಗಳನ್ನು ಆರಂಭಿಸುವ ಕಾರ್ಯ ಪ್ರಗತಿಯಲ್ಲಿದೆ.
ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸಮಾಜಸೇವೆಯನ್ನು ತಮ್ಮ ಧ್ಯೇಯವಾಗಿಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಜನಸಾಮಾನ್ಯರ ಕಷ್ಟಗಳಿಗೆ ಸರ್ಕಾರ ಮತ್ತು ಆಡಳಿತದ ಗಮನ ಸೆಳೆಯುವ ನಿಟ್ಟಿನಲ್ಲಿ ಸಂಘಟನೆಯ ಪಾತ್ರ ಗಮನಾರ್ಹವಾಗಿದೆ.
ಇಂತಹ ಜನಪರ ಹೋರಾಟಗಳ ಮೂಲಕ ಸಮಾಜದಲ್ಲಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸಿರುವ ಕೊಪ್ಪಳ ಜಿಲ್ಲಾ ಅಧ್ಯಕ್ಷ ಉಡಚಪ್ಪ ಶ್ರೀರಾಮನಗರ ಅವರ ಜನ್ಮದಿನವು ಜುಲೈ 1ರಂದು ನಡೆಯಲಿದ್ದು, ಜಿಲ್ಲೆಯ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಶುಭಾಶಯಗಳನ್ನು ತಿಳಿಸಲು ಸಜ್ಜಾಗಿದ್ದಾರೆ.
ಇದೇ ವೇಳೆ ದಲಿತ ಸೇನೆ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಉಡಚಪ್ಪ ಶ್ರೀರಾಮನಗರ ನೇಮಕಗೊಂಡ ಬಳಿಕ ಸಂಘಟನೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ ಎಂದು ಸಂಘಟನೆಯ ವಿವಿಧ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
🟥 ಜಿಲ್ಲಾದ್ಯಂತ ಸಂಘಟನೆಯನ್ನು ಬಲಪಡಿಸುವ ಕಾರ್ಯ, ಹೊಸ ಸದಸ್ಯರ ಸೇರ್ಪಡೆ ಹಾಗೂ ಸಾಮಾಜಿಕ ಹೋರಾಟಗಳಿಗೆ ಆದ್ಯತೆ ನೀಡಿರುವುದು ಶ್ಲಾಘನೀಯ. ಅವರ ನಾಯಕತ್ವದಿಂದ ಸಂಘಟನೆಗೆ ಹೊಸ ಚೈತನ್ಯ ಬಂದಿದೆ ಎಂದು ವಕೀಲ ವೀರೇಶ್ ಇಳಿಗನೂರ್ ಮೆಚ್ಚುಗೆ ವ್ಯಕ್ತಪಡಿಸಿದರು.
🟥 ಸಂಘಟನೆಯ ಕಾರ್ಯಚಟುವಟಿಕೆಗಳು ಪರಿಣಾಮಕಾರಿಯಾಗಿ ಸಾಗುತ್ತಿದ್ದು, ಎಲ್ಲ ಹಂತದ ಪದಾಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಉಡಚಪ್ಪ ಶ್ರೀರಾಮನಗರ ಅವರ ಸಮರ್ಥ ನಾಯಕತ್ವವೇ ಕಾರಣ ಎಂದು ಜಿಲ್ಲಾ ಉಪಾಧ್ಯಕ್ಷ ಡಿ. ಶಿವಕುಮಾರ್ ಅಭಿಪ್ರಾಯಪಟ್ಟರು.
🟥 ದಲಿತ ಸೇನೆಯು ಜಿಲ್ಲೆಯಲ್ಲಿ ಹೊಸ ಚೈತನ್ಯದೊಂದಿಗೆ ಮುನ್ನಡೆಯುತ್ತಿದ್ದು, ಸಂಘಟನೆಯ ವಿಸ್ತರಣೆ ಮತ್ತು ಜನಸೇವಾ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಈ ಯಶಸ್ಸಿಗೆ ಉಡಚಪ್ಪ ಶ್ರೀರಾಮನಗರ ಅವರ ನಾಯಕತ್ವ ಕಾರಣ ಎಂದು ಜಿಲ್ಲಾ ಉಪಾಧ್ಯಕ್ಷ ಹನುಮಂತ ಕಾತರಿಕಿ ಹೇಳಿದರು.
🟥 ಜಿಲ್ಲೆಯಾದ್ಯಂತ ದಲಿತ ಸೇನೆ ಸಂಘಟನೆ ಹೊಸ ಉತ್ಸಾಹದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಲ್ಲಿ ವಿಶ್ವಾಸ ಹೆಚ್ಚಾಗಿದೆ. ಸಮರ್ಥ ಸಂಘಟನಾ ನಿರ್ವಹಣೆಯಿಂದ ಉತ್ತಮ ಬೆಳವಣಿಗೆ ಕಂಡುಬಂದಿದೆ ಎಂದು ಜಿಲ್ಲಾ ಉಪಾಧ್ಯಕ್ಷ ಹನುಮಂತ ನಾಯಕ ತಿಳಿಸಿದರು.
🟥 ದಲಿತ ಸೇನೆ ಸಮಾಜದ ಹಕ್ಕುಗಳ ರಕ್ಷಣೆ, ಸಂಘಟನೆಯ ಬಲವರ್ಧನೆ ಹಾಗೂ ಯುವಕರ ಸಬಲೀಕರಣಕ್ಕೆ ನಿರಂತರ ಶ್ರಮಿಸುತ್ತಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಉಳೆನೂರ್ ಹೇಳಿದರು.
🟥 ದಲಿತ ಸೇನೆ ತಾಲೂಕಿನಲ್ಲಿ ಜನಪರ ಸೇವೆ, ಸಂಘಟನಾ ಶಿಸ್ತು ಹಾಗೂ ಸಾಮಾಜಿಕ ಜಾಗೃತಿಗೆ ಆದ್ಯತೆ ನೀಡುತ್ತಿದೆ ಎಂದು ಗಂಗಾವತಿ ತಾಲೂಕು ಅಧ್ಯಕ್ಷ ಮಂಜುನಾಥ್ ಜಿ ತಿಳಿಸಿದ್ದಾರೆ
🟥 ಸಮಾಜದ ಏಕತೆ, ಹಕ್ಕುಗಳ ರಕ್ಷಣೆ ಮತ್ತು ಯುವಕರ ಭಾಗವಹಿಸುವಿಕೆಯಿಂದ ದಲಿತ ಸೇನೆ ಬಲಿಷ್ಠ ಸಂಘಟನೆಯಾಗಿ ಬೆಳೆಯುತ್ತಿದೆ ಎಂದು ಕುಕುನೂರ್ ತಾಲೂಕು ಅಧ್ಯಕ್ಷ ಮುದಿಯಪ್ಪ ಯಟ್ಟಿ ಹೇಳಿದರು.
🟥 ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಹಾಗೂ ಸೇವಾ ಚಟುವಟಿಕೆಗಳ ಮೂಲಕ ದಲಿತ ಸೇನೆ ಜನವಿಶ್ವಾಸ ಗಳಿಸುತ್ತಿದೆ ಎಂದು ನಗರ ಘಟಕದ ಅಧ್ಯಕ್ಷ ವಿರುಪಾಕ್ಷಿ ಹೇಳಿದರು.
🟥 ದಲಿತ ಸೇನೆ ಗ್ರಾಮಮಟ್ಟದಲ್ಲಿ ಸಂಘಟನಾ ಚಟುವಟಿಕೆಗಳನ್ನು ವಿಸ್ತರಿಸಿ ಜನರ ಬೆಂಬಲ ಪಡೆದುಕೊಳ್ಳುತ್ತಿದೆ ಎಂದು ಕಾರಟಗಿ ತಾಲೂಕು ಅಧ್ಯಕ್ಷ ಉಪೇಂದ್ರ ಜಮಾಪುರ್ ಹೇಳಿದರು.
🟥 ಗ್ರಾಮಮಟ್ಟದಲ್ಲಿ ಚುರುಕುಗೊಂಡಿದ್ದು, ಹೊಸ ಪದಾಧಿಕಾರಿಗಳ ನೇಮಕ, ಜನಸಂಪರ್ಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಹೊಸ ವೇಗ ದೊರೆತಿದೆ ಎಂದು ದಲಿತ ಸೇನೆ ಸೋಶಿಯಲ್ ಮೀಡಿಯಾ ಜಿಲ್ಲಾಧ್ಯಕ್ಷ ಆನಂದ್ ಇಟಗಿ ತಿಳಿಸಿದ್ದಾರೆ.
ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವ ದಲಿತ ಸೇನೆ, ಕೇವಲ ಒಂದು ಸಂಘಟನೆಯಾಗಿ ಉಳಿಯದೆ
“ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗುವ ಜನಾಂದೋಲನವಾಗಿ ರೂಪುಗೊಳ್ಳುತ್ತಿರುವುದು ಜಿಲ್ಲೆಯ ಜನರ ಗಮನ ಸೆಳೆದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಹೋರಾಟಗಳು, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು ಹಾಗೂ ಜನಸೇವಾ ಚಟುವಟಿಕೆಗಳ ಮೂಲಕ ಸಂಘಟನೆ ತನ್ನ ಸೇವಾ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
“ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ: ತಪ್ಪಿತಸ್ಥರನ್ನು ತಕ್ಷಣ ಅಮಾನತು ಮಾಡಿ, ಇಲ್ಲದಿದ್ದರೆ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಘೇರಾವ್ – ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ”
ಶಾಲೆಯಲ್ಲೇ ಮುಖ್ಯೋಪಾಧ್ಯಾಯರ ಕಿತ್ತಾಟ! ಸಿಸಿಟಿವಿ ಪರಿಶೀಲಿಸಿ ತಪ್ಪಿತಸ್ಥರನ್ನು ಅಮಾನತು ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಿ: ಮಹಾನಾಯಕ ಜನಜಾಗೃತಿ ವೇದಿಕೆ ಆಗ್ರಹ
ರಸ್ತೆ ಒತ್ತುವರಿ ಆರೋಪ ನಿರಾಧಾರ; ಕಾನೂನುಬದ್ಧವಾಗಿಯೇ ರೆಸಾರ್ಟ್ ನಿರ್ಮಿಸಲಾಗಿದೆ: ರಮೇಶ್ ನಾಯಕ