🟥 ಟಿ ಪಬ್ಲಿಕ್ ನ್ಯೂಸ್ | ಬಳ್ಳಾರಿ
ದಿನಾಂಕ: 26/07/2026
ಬಳ್ಳಾರಿ: ಡಿಜಿಟಲ್ ಯುಗದಲ್ಲಿ ಸುದ್ದಿಗಳನ್ನು ಕೊಡುವ ಅವಸರದಲ್ಲಿ ಡಿಜಿಟಲ್ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮ ಇವುಗಳ ಪೈಕಿ ಓದುಗರು ಮುದ್ರಣ ಮಾಧ್ಯಮದ ಮೇಲೆ ಹೆಚ್ಚು ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಸಮೀಕ್ಷೆಗಳು ದೃಢಪಡಿಸಿವೆ ಆದ್ದರಿಂದ ಡಿಜಿಟಲ್ ಯುಗದ ಪತ್ರಿಕೋದ್ಯಮದಲ್ಲಿ ಎಷ್ಟೇ ಬದಲಾವಣೆ ಬಂದರೂ ಮುದ್ರಣ ಮಾಧ್ಯಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ ಹೇಳಿದರು.

ಅವರು ಬಳ್ಳಾರಿ ನಗರದ ಗಾಂಧಿ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿ ಮತ್ತು ಪತ್ರಿಕೋದ್ಯಮ ಸಂಬಂಧ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು.
ಕನ್ನಡ ಪತ್ರಿಕೋದ್ಯಮ ಮಂಗಳೂರು ಸಮಾಚಾರದ ಮೂಲಕ ಆರಂಭವಾಗಿ ಇಂದಿಗೆ 183 ವರ್ಷಗಳು ಕಳೆದಿದ್ದು ಕನ್ನಡ ಪತ್ರಿಕೋದ್ಯಮ ಇಡೀ ವಿಶ್ವದಲ್ಲೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.
ಪತ್ರಿಕೆಗಳು ಡಿಜಿಟಲ್ ಮೀಡಿಯಾಗಳು ಮತ್ತು ಎಲೆಕ್ಟ್ರಾನಿಕ್ ಮೀಡಿಯಾಗಳು ಅತ್ಯುತ್ತಮವಾಗಿ ಕೆಲಸ ಮಾಡುವ ಜೊತೆಗೆ ಬಹು ಉದ್ಯೋಗವನ್ನು ಕಲ್ಪಿಸಿವೆ, ಆದರೆ ಪತ್ರಕರ್ತ ಅನಿಶ್ಚಿತತೆಯಲ್ಲಿ ಬದುಕನ್ನು ನಡೆಸಬೇಕಿದೆ. ಸೇವಾ ಭದ್ರತೆ ಜೊತೆಗೆ ಸರಕಾರ ಇನ್ನಷ್ಟು ಯೋಜನೆಗಳನ್ನು ಅನುಷ್ಠಾನ ಮಾಡಬೇಕಿದೆ. ಈಗಾಗಲೇ ವಾರ್ತಾ ಇಲಾಖೆ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಪತ್ರಕರ್ತರಲ್ಲಿ ಹೆಚ್ಚಿನ ಕೌಶಲ್ಯವನ್ನು ಬರುವಂತೆ ಮಾಡಲು ಹಲವಾರು ಕಾರ್ಯಗಳನ್ನು ಹಮ್ಮಿಕೊಳ್ಳುವ ಜೊತೆಗೆ ಅವರ ವೃತ್ತಿ ಬದುಕಿ ಹಲವು ಅನುಕೂಲ ಮಾಡಿಕೊಟ್ಟಿವೆ.
ಜನರ ಮತ್ತು ಸರ್ಕಾರದ ಮಧ್ಯೆ ಸೇತುವೆಯಾಗಿ ಪತ್ರಿಕೋದ್ಯಮ ಕಾರ್ಯ ನಿರ್ವಹಿಸುವ ಜೊತೆಗೆ ದಮನಿತರ ಧ್ವನಿಯಾಗಬೇಕೆನ್ನುವ ಅಂಬೇಡ್ಕರ್ ಮಾತಿನಂತೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಪತ್ರಿಕೋದ್ಯಮ ಕಾರ್ಯ ಮಾಡಬೇಕಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೋದ್ಯಮದ ಕಾರ್ಯ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಮಹತ್ವದ ಪಾತ್ರವಿತ್ತು, ಸ್ವಾತಂತ್ರ್ಯ ನಂತರ ದೇಶದ ಅಭಿವೃದ್ಧಿ ಮತ್ತು ಜನಸಾಮಾನ್ಯರಿಗೆ ಸರ್ಕಾರ ಸೌಲಭ್ಯವನ್ನು ಕೊಡಿಸುವ ಮಹತ್ತರ ಹೊಣೆಯನ್ನು ಹೊಂದಿದೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್, ಮಹಾತ್ಮ ಗಾಂಧಿ ಸ್ವತಹ ಪತ್ರಕರ್ತರಾಗಿ ಈ ಕ್ಷೇತ್ರದ ಪವಿತ್ರತೆಯನ್ನು ಹೆಚ್ಚಿಸಿದ್ದಾರೆ. ಪ್ರಸ್ತುತ ಫೇಕ್ ನ್ಯೂಸ್ ಸೇರಿದಂತೆ ಸುದ್ದಿ ಕೊಡುವ ಅವಸರದಲ್ಲಿ ಕೆಲವು ಅನಾಹುತಗಳನ್ನು ಕೆಲ ಪತ್ರಿಕೆ ಮತ್ತು ಮಾಧ್ಯಮಗಳು ಸೃಷ್ಟಿಮಾಡುತ್ತಿವೆ.
ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು,ಸಂವಿಧಾನ ಪೀಠಿಕೆ ಮತ್ತು ಹಕ್ಕು ಕರ್ತವ್ಯಗಳ ಆಧೀನದಲ್ಲೇ ಪತ್ರಿಕೋದ್ಯಮ ಕಾರ್ಯ ನಿರ್ವಹಿಸಿದರೆ ಸಮ ಸಮಾಜ ಸೃಷ್ಟಿಯಾಗಲು ಸಾಧ್ಯವಾಗುತ್ತದೆ ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಕಳೆದ ನಾಲ್ಕು ದೇಶಗಳಿಂದ ಕನ್ನಡ ನಾಡಿನ ಪತ್ರಕರ್ತರ ಕೌಶಲ್ಯ ಅಭಿವೃದ್ಧಿ ಸೇರಿದಂತೆ ಸಾಧಕರಿಗೆ ವಾರ್ಷಿಕ ಪ್ರಶಸ್ತಿ, ಅತ್ಯುತ್ತಮ ಸಾಮಾಜಿಕ ಕಳಕಳಿತ ವರದಿಗೆ ದತ್ತಿ ಪ್ರಶಸ್ತಿಗಳನ್ನು ನೀಡುವ ಕಾರ್ಯ ಮಾಡುತ್ತಿದೆ. ಎಸ್ ಸಿ ಪಿ, ಟಿ ಎಸ್ ಪಿ ಯೋಜನೆಯಡಿ ಮಾಧ್ಯಮ ಕಿಟ್ ಗಳನ್ನು ಅರ್ಹ ಪತ್ರಕರ್ತರಿಗೆ ವಿತರಿಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು, ವಿಚಾರ ಸಂಕೀರ್ಣಗಳನ್ನು ಆಯೋಜನೆ ಮಾಡಿ ಪತ್ರಕರ್ತರಲ್ಲಿ ಜಾಗೃತಿ ಉಂಟುಮಾಡುತ್ತಿದೆ.
ಕಲ್ಯಾಣ ಕರ್ನಾಟಕ ಉತ್ತರ ಕರ್ನಾಟಕದ ಪತ್ರಕರ್ತರಿಗೆ ಕಳೆದ ಎರಡು ವರ್ಷಗಳಿಂದ ಆದ್ಯತೆ ಮೇರೆಗೆ ಪ್ರಶಸ್ತಿ ಮತ್ತು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಪತ್ರಕರ್ತರಿಗೆ ಕಾರ್ಯಾಗಾರ ಏರ್ಪಡಿಸುವ ಕುರಿತು ಮಾಧ್ಯಮ ಅಕಾಡೆಮಿ ಯೋಜನೆ ರೂಪಿಸುತ್ತಿದೆ ಎಂದರು.
ಬಳ್ಳಾರಿ ಜಿಲ್ಲಾಧಿಕಾರಿ ಕೆ ನಾಗೇಂದ್ರ ಪ್ರಸಾದ್ ಮಾತನಾಡಿ: ಪತ್ರಿಕರ್ತರು ಮತ್ತು ಪತ್ರಿಕೋದ್ಯಮ ಸಮಾಜದ ಕಣ್ಣುಗಳಿದ್ದಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಕಣ್ಣು ತೆರೆಸಿ ಸಮಸ್ಯೆಗಳನ್ನು ದೂರ ಮಾಡುವ ಸೇತುವೆಯಾಗಿದ್ದು, ಪತ್ರಕರ್ತರು ಸೇವಾ ಭದ್ರತೆ ಇಲ್ಲ, ಸೇವಾ ಭದ್ರತೆ ದೊರಕಬೇಕು ಎಂದರು. ಬಳ್ಳಾರಿ ಜಿಲ್ಲೆಯಲ್ಲಿ ಅತ್ಯುತ್ತಮ ಪತ್ರಕರ್ತರಿದ್ದು ಹಲವು ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ ಗಮನಕ್ಕೆ ತಂದು ಜನರಿಗೆ ಒಳ್ಳೆಯದು ಮಾಡುವ ವರದಿಗಳನ್ನು ಪ್ರಕಟಿಸುತ್ತಿದ್ದಾರೆ. ಪತ್ರಕರ್ತರ ಸಂಘಕ್ಕೆ ಸೂಕ್ತ ಜಾಗ ದೊರತದಲ್ಲಿ ಅನುದಾನದ ಮೂಲಕ ಪತ್ರಕರ್ತರು ಕಾರ್ಯಕ್ರಮಕ್ಕೆ ತೆರಳಲು ವಾರ್ತಾ ಇಲಾಖೆಗೆ ಸಿಎಸ್ಆರ್ ನಿಧಿಯಲ್ಲಿ ಹೊಸ ವಾಹನ ಖರೀದಿಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪನ್ನೇಕರ್: ಮಾತನಾಡಿ ಪತ್ರಕರ್ತರೊಂದಿಗೆ ತಾವು ಹಲವು ವಿಚಾರಗಳ ಬಗ್ಗೆ ಹಿಂದಿನಿಂದಲೂ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದು, ಪತ್ರಕರ್ತರು ಮತ್ತು ನಾವು ಒಂದೇ ಸೇವಾ ಕಾರ್ಯದಲ್ಲಿ ಬರುವುದರಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಪತ್ರಕರ್ತರಿಗೆ ಸಮಾಜವನ್ನು ತಿದ್ದುವ ಮತ್ತು ಶೋಷಿತರಿಗೆ ನೆರವಾಗುವ ಪವಿತ್ರವಾದ ಕ್ಷೇತ್ರ ದೊರಕಿದೆ ಪತ್ರಕರ್ತರು ಸೇವಾ ಭದ್ರತೆಯ ಜೊತೆಗೆ ಕುಟುಂಬದ ಹಿತರಕ್ಷಣೆಯನ್ನು ಮಾಡುವುದು ಅನಿವಾರ್ಯವಾಗಿದೆ. ಈ ದಿನದಲ್ಲಿ ಸರಕಾರ ಸೂಕ್ತ ಯೋಜನೆ ರೂಪಿಸಬೇಕು ಎಂದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್. ವೀರಭದ್ರಗೌಡ ಜಿಲ್ಲಾ ವಾರ್ತಾಧಿಕಾರಿ ಬಿ ಎಂ ತುಕಾರಾಂ ಕಾರ್ಯದರ್ಶಿ ಬಸವರಾಜ್ ಸೇರಿದಂತೆ ಅನೇಕರಿದ್ದರು ಇದೇ ಸಂದರ್ಭದಲ್ಲಿ ಪತ್ರಿಕೆಯ ವಿತರಕರು ಮತ್ತು ಪತ್ರಕರ್ತರ ಮಕ್ಕಳಿಗೆ ಅತ್ಯುತ್ತಮ ಸಾಧನೆ ಮಾಡಿದ್ದಕ್ಕೆ ಸನ್ಮಾನಿಸಿ ಗೌರವಿಸಲಾಯಿತು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪೊಲೀಸರ ಮನವಿ
ಗಂಗಾವತಿಯಲ್ಲಿ ನಿವೇಶನ ರಹಿತರಿಗೆ ಭೂಮಿ ಕಾಯ್ದಿರಿಸಲು ಸಿಪಿಐ ಆಗ್ರಹ
ಗುತ್ತಿಗೆ ಪದ್ಧತಿ ರದ್ದುಪಡಿಸಲು ಒತ್ತಾಯಿಸಿ ಆ.20ರಂದು ಬೆಂಗಳೂರು ಚಲೋ