August 21, 2026

ದೊಡ್ಡ ಗುರಿಯೊಂದಿಗೆ ಸಾಧಕರ ಹಾದಿಯನ್ನು ಅನುಸರಿಸಲಿ : ನಾಗರಾಜ್ ಇಂಗಳಗಿ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 16/08/2026

ಮಹಿಳಾ ಅಭಿಮಾನಿಗಳಿಂದ ನಟ ವಿಕ್ರಮ್ ರವಿ ಚಂದ್ರನ್ ಜನುಮದಿನಾಚರಣೆ

ಗಂಗಾವತಿ: ಕನ್ನಡದ ಕನುಸಗಾರ ರವಿಚಂದ್ರನ್ ಅವರು ಕನ್ನಡ ಚಿತ್ರರಂಗದ ದಿಸೆಯನ್ನೇ ಬದಲಿಸಿದ ಕನಸುಗಾರ, ವೈವಿದ್ಯಮಯ. ಅದ್ಧೂರಿ ಮೇಕಿಂಗ್ ಶೈಲಿಯಿಂದಾಗಿ ಪರ ಭಾಷಾ ಚಿತ್ರ ರಸಿಕರ ಮನ ಸೋರೆಗೊಳ್ಳುವಂತೆ ಮಾಡಿದ್ದು, ಅವರ ಪುತ್ರ ನಟ ವಿಕ್ರಮ್ ರವಿಚಂದ್ರನ್ ಕೂಡಾ ಅವರ ಸಾಧನೆಯ ಹಾದಿಯಲ್ಲಿ  ದೊಡ್ಡ ಕುರಿಯೊಂದಿಗೆ ಸಾಗಲಿ. ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಂಗಾವತಿ ತಾಲೂಕು ಘಟಕದ ಅಧ್ಯಕ್ಷ ನಾಗರಾಜ್ ಇಂಗಳಗಿ ಹೇಳಿದರು.

ಅವರು, ನಗರದ ಶ್ರೀ ಭಗೀರಥ ಶಿಕ್ಷಣ ಸಂಸ್ಥೆಯ ಎ.ಜಂಬಣ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಅಭಿಮಾನಿಗಳು ಆಯೋಜಿಸಿದ್ದ ವಿಕ್ರಮ್ ರವಿಚಂದ್ರನ್ ಅವರ ಜನಮ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕನ್ನಡದ ಹಾಡುಗಳಿಗೆ ವಿಪರೀತ ಬೇಡಿಕೆ ಬರುವಂತೆ ಮಾಡಿದ ರವಿಚಂದ್ರನ್ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಚಲನಚಿತ್ರದ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಿ ಜನಮನ್ನಣೆ ಪಡೆದಿದ್ದರು. ಇಂದಿಗು ಅವರಿಗೆ ಅಪಾರ ಅಭಿಮಾನಿ ಬಳಗವಿದೆ ಎಂದರು.

ಶಾAತಿಕ್ರಾAತಿ ಚಲನಚಿತ್ರ ಮಕ್ಕಳ ಶೋಷಣೆಯ ಇನ್ನೊಂದು ಮುಖ ಅನವರಣ ಮಾಡಿತ್ತು, ಪ್ಯಾನ್ ಇಂಡಿಯಾ ಮೂವಿ ಪ್ರಥಮ ಬಾರಿಗೆ ಇಡೀ ದೇಶಕ್ಕೆ ತೋರಿಸಿಕೊಟ್ಟ ಮಹಾನ್ ಧೈರ್ಯಶಾಲೆ ರವಿಚಂದ್ರನ್ ಆಗಿದ್ದು, ಅವರ ಪುತ್ರ ವಿಕ್ರಮ್ ಅವರ ಎರಡನೇ ಚಿತ್ರ ಮುಧೋಳ್ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದ್ದು ಯಶಸ್ಸು ಕಾಣಲಿ ಕನ್ನಡ ಚಿತ್ರಗಳನ್ನು ವೀಕ್ಷಿಸಿ ಎಲ್ಲರು ಪ್ರತ್ಸಾಹಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ರವಿಚಂದ್ರನ್ ಮಹಿಳಾ ಅಭಿಮಾನಿಗಳ ಸಂಘದ ಅಧ್ಯಕ್ಷೆ ಗೌರಮ್ಮ ಮಾತನಾಡಿ, ಕನ್ನಡದ ಕಿಂದರಿ ಜೋಗಿ ರವಿಚಂದ್ರನ್ ಕೌಟಂಬಿಕ ಚಿತ್ರಗಳಿಂದಾಗಿಯೂ ಮನೆ ಮಾತನಾಗಿದ್ದಾರೆ, ಅವರಿಗೆ ಬಂದಿರುವ ಸಂಕಷ್ಟಗಳೆಲ್ಲಾ ದೂರವಾಗಿ ಅವರ ಮಗ ವಿಕ್ರಮ್ ಇವರಿಗೆ ಜಯದ ಹಾದಿ ಲಭಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಗಾನ ಕೋಗಿಲೆ ಪ್ರಶಸ್ತಿಗೆ ಭಾಜನರಾದ ವಿಐಪಿ ಮೆಲೋಡಿಸ್ ಪಂಪಾಪತಿ ಇಂಗಳಗಿಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ಕೆಕ್ ಕತ್ತರಿಸಿ ನಟ ವಿಕ್ರಮ್ ರವಿಚಂದ್ರನ್ ಅವರಿಗೆ ಶುಭ ಕೋರಲಾಯಿತು.

ಉಪ್ಪಾರ ಸಮಾಜದ ಹಿರಿಯರು, ಶ್ರೀ ಭಗರಥ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಾಸುದೇವ್ ಜಂಬಣ್ಣ , ಪ್ರಭು ವಕೀಲರು,   ರಾಮಣ್ಣ ಕುರಿತಲಿ, ಮುಖಂಡರಾದ ಗೋವಿಂದಪ್ಪ ಹುಲಿಗಿ, ವಿಐಪಿ ಪಂಪಾಪತಿ ಇಂಗಳಗಿ, ಶಾಲೆಯ ಮುಖ್ಯ ಗುರು ಸುರೇಶ್, ಬಸವರಾಜ್ ಬಡಿಗೇರ್, ರಾಘವೇಂದ್ರ ಪೇಂಟರ್, ರಾಜಪ್ಪ ಹುಲಿಗಿ, ಶಾರದಮ್ಮ ರಾಜಪ್ಪ ಹುಲಿಗಿ, ಲಕ್ಷಿö್ಮ ಹುಲಿಗಿ, ಚಿಟ್ಟಿ ನಾಗನಹಳ್ಳೀ, ಶರಣಮ್ಮ ನಾಗರಾಜ್, ದೇವಿಕಾ ಕನಕಪ್ಪ, ಮಂಜುನಾಥ ತೋಟದ, ಬಸಯ್ಯ ಪೂಜಾರ್ ಹಾಗು ಜಗದೀಶ್ ಪೂಜಾರ್ ಇತರರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News