August 21, 2026

ಸಚಿವ ತಂಗಡಗಿ ವಿರುದ್ಧದ ಆರೋಪದಲ್ಲಿ ಸತ್ಯಾಂಶವಿಲ್ಲ; ಅನ್ಸಾರಿಗೆ ಆತ್ಮಾವಲೋಕನ ಅಗತ್ಯ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿದಿನಾಂಕ: 11/08/2026 ಅನ್ಸಾರಿ ಆಡಿಯೋ ಹೇಳಿಕೆಗೆ ಭೋವಿ ಸಮಾಜ ಅಸಮಾಧಾನ ಗಂಗಾವತಿ :…

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 11/08/2026

ಅನ್ಸಾರಿ ಆಡಿಯೋ ಹೇಳಿಕೆಗೆ ಭೋವಿ ಸಮಾಜ ಅಸಮಾಧಾನ

ಗಂಗಾವತಿ : ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ವಿಧಾನಸಭೆ ಚುನಾವಣೆಯ ಸೋಲಿನ ಕುರಿತು ಇತ್ತೀಚೆಗೆ ಬಿಡುಗಡೆ ಮಾಡಿರುವ ಆಡಿಯೋ ಹೇಳಿಕೆಗೆ ಗಂಗಾವತಿ ತಾಲೂಕು ಭೋವಿ ಸಮಾಜ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಬೋವಿ ಸಮಾಜದ ತಾಲೂಕು ಅಧ್ಯಕ್ಷ ಗಾಳೆಪ್ಪ ಭೋವಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಭೋವಿ ಸಮಾಜದ ವತಿಯಿಂದ ಮಂಗಳವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಕನಕಗಿರಿ ಕ್ಷೇತ್ರದ ಶಾಸಕ ಹಾಗೂ ಸಚಿವ ಶಿವರಾಜ ತಂಗಡಗಿ ಅವರು ಗಂಗಾವತಿ ಕ್ಷೇತ್ರದಲ್ಲಿ ಇಕ್ಬಾಲ್ ಅನ್ಸಾರಿ ಅವರಿಗೆ ಮತ ಹಾಕಬಾರದು ಎಂದು ಹೇಳಿದ್ದರು ಎಂಬ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ.ವಿನಾಕಾರಣ ಸಚಿವ ಶಿವರಾಜ ತಂಗಡಗಿ ಹಾಗೂ ಜಿಲ್ಲೆಯ ಕಾಂಗ್ರೆಸ್ ಶಾಸಕರ ವಿರುದ್ಧ ಆರೋಪ ಮಾಡುವುದು ಇಕ್ಬಾಲ್ ಅನ್ಸಾರಿ ಅವರ ನಾಯಕತ್ವಕ್ಕೆ ಶೋಭೆ ತರುವುದಿಲ್ಲ. ಅವರು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಭೋವಿ ಸಮಾಜ ಮೊದಲಿನಿಂದಲೂ ಇಕ್ಬಾಲ್ ಅನ್ಸಾರಿ ಅವರಿಗೆ ಬೆಂಬಲವಾಗಿ ಕಾರ್ಯನಿರ್ವಹಿಸಿದೆ. ಅವರ ಸೋಲಿಗೆ ಭೋವಿ ಸಮಾಜ ಅಥವಾ ಸಚಿವ ಶಿವರಾಜ ತಂಗಡಗಿ ಕಾರಣ ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ.

ಭೋವಿ ಸಮಾಜ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ಅನ್ಸಾರಿ ಅವರು ಚುನಾವಣೆಯಲ್ಲಿ 56 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದು, ಅದನ್ನು ಕೇವಲ ಅಲ್ಪಸಂಖ್ಯಾತರ ಮತಗಳಿಂದಲೇ ಪಡೆದಿದ್ದಾರೆ ಎಂಬ ರೀತಿಯಲ್ಲಿ ಬಿಂಬಿಸುವುದು ತಪ್ಪು ಕಲ್ಪನೆಯಾಗಿದೆ.

ಮುಂದಿನ ದಿನಗಳಲ್ಲಿ ಎಲ್ಲಾ ಸಮಾಜಗಳ ವಿಶ್ವಾಸ ಗಳಿಸುವ ಮೂಲಕ ಗಂಗಾವತಿ ಕ್ಷೇತ್ರದಲ್ಲಿ ತಮ್ಮ ರಾಜಕೀಯ ನೆಲೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಇಕ್ಬಾಲ್ ಅನ್ಸಾರಿ ಅವರು ಗಮನಹರಿಸಬೇಕು. ಜೆಡಿಎಸ್‌ನಲ್ಲಿದ್ದ ಅವಧಿಯಿಂದ ಕಳೆದ ವಿಧಾನಸಭಾ ಚುನಾವಣೆಯವರೆಗೆ ಭೋವಿ ಸಮಾಜಕ್ಕೆ ಅವರು ನೀಡಿದ ಕೊಡುಗೆ ಏನು ಎಂಬುದನ್ನೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಭೋವಿ ಸಮಾಜದ ಯುವ ಘಟಕದ ಜಿಲ್ಲಾಧ್ಯಕ್ಷ ಹುಲ್ಲೇಶ್ ಬಂಡಿ, ಪ್ರಧಾನ ಕಾಯ೯ದಶಿ೯ ರಾಘವೇಂದ್ರ, ಗೌರವಾಧ್ಯಕ್ಷ ರುದ್ರಪ್ಪ ಪ್ರಮುಖರಾದ ಗಾಳಪ್ಪ ಕಟ್ಟಿಮನಿ, ತಿಮ್ಮಣ, ಸೀನಪ್ಪ, ನಾಗರಾಜ, ದುರಗಪ್ಪ, ಗೋವಿಂದಪ್ಪ ಆರ್ಹಾಳ,ಕೃಷ್ಣಪ್ಪ ಭೋವಿ ಹಾಗೂ ಇತರರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News