October 16, 2026

ಆತ್ಮವಿಶ್ವಾಸದಿಂದ ಕಷ್ಟಗಳನ್ನು ಎದುರಿಸಿದಾಗ ಸಾಮರ್ಥ್ಯ ವೃದ್ಧಿ: ಡಾ.ಅರ್ಚನ ಹಿರೇಮಠ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 02/09/2026

ಗಂಗಾವತಿ: ಬಡತನ ಹಾಗೂ ಜೀವನದ ಸಂಕಷ್ಟಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಗೆದ್ದಾಗ ಮಾತ್ರ ವ್ಯಕ್ತಿಯ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ಶ್ರೀರಾಮುಲು ಮಹಾವಿದ್ಯಾಲಯದ ಪ್ರೊ. ಡಾ.ಅರ್ಚನ ಹಿರೇಮಠ ಹೇಳಿದರು.

ನಗರದ ಉಪ್ಪಾರ ಓಣಿಯ ಪಂಪಾಪತಿ ಹನುಮಂತಪ್ಪ ಇಂಗಳಗಿ ಅವರ ನಿವಾಸದಲ್ಲಿ ಬಸವ ಕೇಂದ್ರ ಹಾಗೂ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ವಚನ ಶ್ರವಣ–2026’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಬದುಕಿನಲ್ಲಿ ಭಕ್ತಿಯನ್ನು ಪ್ರಯೋಗಾತ್ಮಕವಾಗಿ ಅಳವಡಿಸಿಕೊಂಡಾಗ ಜ್ಞಾನ ನಿಧಾನವಾಗಿ ಪ್ರಕಾಶಿಸುತ್ತದೆ. ಇದರಿಂದ ದ್ವೇಷದ ಬದಲಾಗಿ ಪ್ರೀತಿ ನೀಡುವ ವಿಶ್ವಮಾನವ ಮನೋಭಾವ ಬೆಳೆದು, ಹೃದಯ ವೈಶಾಲ್ಯ ಹೆಚ್ಚುತ್ತದೆ. ಭಕ್ತಿ ಮತ್ತು ಜ್ಞಾನ ಪರಸ್ಪರ ಪೂರಕವಾಗಿದ್ದು, ನಿಜವಾದ ಭಕ್ತಿಯಲ್ಲಿ ಸ್ವಾರ್ಥಕ್ಕೆ ಅವಕಾಶವಿಲ್ಲ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ನಾಗರಾಜ್ ಇಂಗಳಗಿ, ಮುಸ್ಲಿಂ ಸಮಾಜದ ಗುರುಗಳಾದ ಔಲೇಸಾಬ್, ಬಸವ ಸಂಘಟನೆಯ ಪ್ರಮುಖರಾದ ಎ.ಕೆ. ಮಹೇಶಕುಮಾರ್, ಪರಿಸರ ಟ್ರಸ್ಟ್‌ನ ಮಂಜುನಾಥ ಗುಡ್ಲಾನೂರು ಸೇರಿದಂತೆ ಶರಣಪ್ಪ ಉಪ್ಪಾರ್, ಕೆ.ಪಂಪಣ್ಣ, ಪಂಪಾಪತಿ ಇಂಗಳಗಿ, ಪ್ರೇಮಾ ಇಂಗಳಗಿ, ಶ್ರೀನಿವಾಸ್ ಇಂಗಳಗಿ, ದಿಲೀಪಕುಮಾರ್, ಕೆ.ವೀರೇಶ, ವೀರೇಶ ರೆಡ್ಡಿ, ಜ್ಯೋತಿ, ರತ್ನಮ್ಮ ಆರೇಗಾರ್, ಕುಮಾರ, ನೂರ್ ಮಹಮ್ಮದ್, ಅಮರೇಗೌಡ ಜಾನೂರ್, ಪ್ರಕಾಶಗೌಡ ಪಾಟೀಲ, ಶಿವಮಾರ್ ಗೌಡ, ನವೀನಕುಮಾರ್ ಅಂಗಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!