October 16, 2026

ಗ್ರಾಮೀಣ ಸಿಪಿಐ (ಸಿಂಗಂ) ರಂಗಪ್ಪ ದೊಡ್ಡಮನಿ ಕಡಕ್ ಆದೇಶ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 07/09/2026

ಗಣೇಶೋತ್ಸವಕ್ಕೆ ನಿಯಮ ಪಾಲನೆ ಕಡ್ಡಾಯ: ಗ್ರಾಮೀಣ ಠಾಣೆಯಲ್ಲಿ ಶಾಂತಿ ಸಭೆ

ಗಂಗಾವತಿ: ಗಣೇಶೋತ್ಸವವನ್ನು ಶಾಂತಿ, ಸೌಹಾರ್ದ ಹಾಗೂ ಸುರಕ್ಷಿತ ವಾತಾವರಣದಲ್ಲಿ ಆಚರಿಸುವ ನಿಟ್ಟಿನಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸೋಮವಾರ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ಗಣೇಶ ಮಂಡಳಿಗಳ ಮುಖಂಡರು ಹಾಗೂ ಆಯೋಜಕರಿಗಾಗಿ ಶಾಂತಿ ಸಭೆ ನಡೆಯಿತು.

ಸಭೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಅಗತ್ಯ ಅನುಮತಿಗಳನ್ನು ಕಡ್ಡಾಯವಾಗಿ ಪಡೆಯುವಂತೆ ಗ್ರಾಮೀಣ ಸಿಪಿಐ (ಸಿಂಗಂ) ರಂಗಪ್ಪ ದೊಡ್ಡಮನಿ ಅವರು ಸೂಚಿಸಲಾಯಿತು. ಗ್ರಾಮ ಪಂಚಾಯಿತಿ ಅನುಮತಿ ಪತ್ರ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಠಾಣೆಯ ಅನುಮತಿ, ವಿದ್ಯುತ್ ಶಕ್ತಿ ಇಲಾಖೆಯ ಅನುಮತಿ ಮತ್ತು ಖಾಸಗಿ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪಿಸುವುದಾದರೆ ಜಾಗದ ಮಾಲೀಕರ ಅನುಮತಿ ಪತ್ರವನ್ನು ಪಡೆಯುವಂತೆ ತಿಳಿಸಲಾಯಿತು.

ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಯಿತು. ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಪೊಲೀಸ್ ಇಲಾಖೆ ನೀಡುವ ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ, ರಾತ್ರಿ 10 ಗಂಟೆಯೊಳಗೆ ವಿಸರ್ಜನಾ ಕಾರ್ಯ ಪೂರ್ಣಗೊಳಿಸುವಂತೆ ಆಯೋಜಕರಿಗೆ ತಿಳಿಸಲಾಯಿತು.

ಗಣೇಶೋತ್ಸವವು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಶಾಂತಿ ಮತ್ತು ಸೌಹಾರ್ದದಿಂದ ನಡೆಯುವಂತೆ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದರು. ಬಳಿಕ ಅಗತ್ಯ ಮಾರ್ಗದರ್ಶನ ನೀಡಿ ಶಾಂತಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಹಿರಿಯರು ಮತ್ತು ಯುವಕರು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಯವರು ಇನ್ನಿತರರು ಇದ್ದರು

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!